ಚಾಟ್ ಮಸಾಲ ಪಾನಿಪುರಿ ಮಸಾಲಪುರಿ ತಿನ್ನಬಾರದು, ಏಕೆ?
ಪಾನಿಪುರಿ, ಭೇಲ್ ಪುರಿ, ಆಲುಪುರಿ, ಸೇವ್ ಪುರಿ, ಚಾಟ್ ಮಸಾಲ, ದಹಿಪುರಿ, ಮಸಾಲಪುರಿ ಆಸೆಪಟ್ಟು ತಿನ್ನುವವರಿಗೆ ಕೆಟ್ಟಸುದ್ದಿ ಇಲ್ಲಿದೆ. ಇಂಥವನ್ನು ತಿಂದ್ರೆ ಆರೋಗ್ಯ ಹಾಳಾಗತ್ತಂತೆ. ಆರೋಗ್ಯಕ್ಕೆ ಗೋಲಿಹೊಡಿ ಅಂತೀರಾ?
ಮೈಸೂರು, ಫೆಬ್ರವರಿ 2 : ಚಾಟ್ ಮಸಾಲಾ, ಆಲೂಪುರಿ, ಸೇವ್ ಪುರಿ, ತ್ರೀ ಇನ್ ಒನ್, ಮಸಾಲಾಪುರಿ, ಭೇಲ್ ಪುರಿ, ದಹಿಪುರಿ ಹೆಸರು ಕೇಳಿದ ಕೂಡಲೆ ಲಾಲಾರಸ ಸುರಿಸುವವರಿಗೆ ಇಲ್ಲಿ ಒಂದು ಕೆಟ್ಟ ಸುದ್ದಿಯಿದೆ. ಅದೇನೆಂದ್ರೆ, ಇಂಥ ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ.
ಚಾಟ್ ಮಸಾಲ, ಹಾಗೂ ಕೆಮಿಕಲ್ ಪದಾರ್ಥಗಳನ್ನು ಸೇವಿಸುವುದನ್ನು ಜನರು ಮೊದಲು ನಿಲ್ಲಿಸಬೇಕು. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿ ಹೊರತು ಮತ್ತೇನು ಇಲ್ಲ ಎಂದು ನಬಾರ್ಡ್ ಮುಖ್ಯಸ್ಥ ಎಮ್.ಐ. ಗಣಗಿ ಹೇಳಿದ್ದಾರೆ.
ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಐಎಫ್ ಟಿಟಿಸಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಮಸಾಲೆಗಳ ಮೇಲೆ ರಾಷ್ಟ್ರೀಯ ಸಮ್ಮೇಳನ, ಸವಾಲುಗಳು ಮತ್ತು ಅವಕಾಶಗಳು ಎನ್ ಸಿಎಸ್-2017ನ್ನು ಎಮ್.ಐ.ಗಣಗಿ ಉದ್ಘಾಟಿಸಿದರು. [ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಬೇಡಿ : ದೆಹಲಿ ಸರ್ಕಾರ]

ನಾವು ಚಾಟ್ ಮಸಾಲ ಹಾಗು ಕೆಮಿಕಲ್ ಪದಾರ್ಥಗಳನ್ನು ಜನರು ಮೊದಲು ತಿರಸ್ಕರಿಸಬೇಕು. ನಾವಿಂದು ಕುಟುಂಬ ಸಮೇತರಾಗಿ ತೆರಳಿ ಮಸಾಲೆ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ. ಇದೊಂದು ದುರಂತ. ನಾವು ಸೇವಿಸುತ್ತಿರುವ ಆಹಾರದಿಂದ ನಮ್ಮ ಆಯಸ್ಸು ಕುಂಠಿತವಾಗುತ್ತಿದೆ ಎಂದರು. ಅಲ್ಲದೆ ಸಿಎಫ್ ಟಿ ಆರ್ ಐ ಒಳ್ಳೆಯ ಹಾಗೂ ದುಷ್ಪರಿಣಾಮ ಬೀರುವ ಪದಾರ್ಥಗಳನ್ನು ಬೇರ್ಪಡಿಸಿಕೊಡುತ್ತಿದೆ. ಅದನ್ನು ಬಳಸಿ ಎಂದು ಸಲಹೆ ನೀಡಿದರು.[ಕೇರಳ ಮಾದರಿ ದೇಶದೆಲ್ಲೆಡೆ Fat ಟ್ಯಾಕ್ಸ್ ?]

ಕೋಳಿಕ್ಕೋಡ್ ನ ಅಡಿಕೆ ಮತ್ತು ಮಸಾಲೆಗಳ ಅಭಿವೃದ್ಧಿ ನಿರ್ದೇಶನಾಲಯದ ಡಾ.ಹೋಮಿ ಚೆರಿಯನ್ ಸ್ಮರಣ ಸಂಚಿಕೆ ಮತ್ತು ನವೀನ ಮಸಾಲೆ ಉತ್ಪನ್ನಗಳ ಕುರಿತ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಮಾಧವ ನಾಯ್ಡು, ಸಿ.ಎಫ್.ಟಿ.ಆರ್.ಐನ ನಿರ್ದೇಶಕ ರಾಮರಾಜಶೇಖರನ್, ಡಾ.ಕಾಂತಿಪುಡಿ ನಿರ್ಮಲ್ ಬಾಬು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.












Click it and Unblock the Notifications