• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಕೊಳೆತ ಮಾಂಸ ಮಾರಾಟ: ಕೇಸ್ ದಾಖಲು

By ಮೈಸೂರು ಪ್ರತಿನಿಧಿ
|

ಮೈಸೂರು, ಏಪ್ರಿಲ್ 05: ಭಾನುವಾರದ ಬಾಡೂಟದ ವೇಳೆ ಕೊಳಕು ಮಾಂಸದ ಭಯ ಉಂಟಾಗಿದೆ. ಹಕ್ಕಿ ಜ್ವರದ ಬೆನ್ನಲೇ ಕೊಳಕು ಮಾಂಸ ಮಾರಾಟ ಬಯಲಾಗಿದೆ.

ಮೈಸೂರಿನ ಕ್ಯಾತಮಾರನಳ್ಳಿಯಲ್ಲಿ ಕೊಳಕು ಚಿಕನ್ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಸ್ಕೀನ್ ಚಿಕನ್ ಅಂಡ್ ಮಟನ್ ಸೆಂಟರ್‌ನಲ್ಲಿ ಒಂದು ವಾರದ ಕೊಳೆತ ಕೋಳಿ ಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು.

ಕದ್ದುಮುಚ್ಚಿ ಕೊಳಕು ಚಿಕನ್ ಮಾರಾಟ ಮಾಡಲಾಗುತ್ತಿದ್ದು, ಸ್ವಲ್ಪ ಯಾಮಾರಿದರೂ ಯಮನ ಹತ್ತಿರ ಹೋಗುವುದು ನಿಶ್ಚಿತ. ಮಾಂಸ ಮಾರಾಟಗಾರರ ಮೋಸವನ್ನು ನಾಗರೀಕರು ಬಯಲು ಮಾಡಿದ್ದಾರೆ.

ನಾಗರೀಕರಿಂದ ಮಹಾನಗರ ಪಾಲಿಕೆಗೆ ದೂರು ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು, ಮಾಂಸದ ಅಂಗಡಿಯನ್ನು ಬಂದ್ ಮಾಡಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Bird fever has begun selling dirty meat In Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X