ಮಕ್ಕಳಿಗಿಂತ ಶಾಲೆ ಬ್ಯಾಗ್‌ ಭಾರವೇ ಜಾಸ್ತಿ!

ಮೈಸೂರು, ನ.10 : ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಮಕ್ಕಳ ತೂಕಕ್ಕಿಂತ ಶೇ 30 ರಷ್ಟು ಹೆಚ್ಚಾಗಿದೆ. ಅಚ್ಚರಿಯಾದರೂ ಇದು ಸತ್ಯ. ಮೈಸೂರಿನಲ್ಲಿ ಇಂದು ಶಾಲಾ ಮಕ್ಕಳ ಬ್ಯಾಗ್ ತೂಕ ಮಾಡಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಈ ವಿಷಯವನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಮಕ್ಕಳು ಭಾರವಾದ ಬ್ಯಾಗ್‌ಗಳನ್ನು ಹೊತ್ತು ಶಾಲೆಗೆ ಬರುವ ಬಗ್ಗೆ ಪೋಷಕರ ಮತ್ತು ಶಾಲಾ ಆಡಳಿತ ಮಂಡಳಿ ಗಮನ ಸೆಳೆಯಲು ಮೈಸೂರಿನಲ್ಲಿ ಇಂದು ವಿಶಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಖಾಸಗಿ ಶಾಲೆಗಳ ಮಕ್ಕಳ ಬ್ಯಾಗ್‌ಗಳನ್ನು ತೂಕ ಮಾಡಲಾಯಿತು.

ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದ್ದ ಈ ವಿಶಿಷ್ಟ ಪ್ರತಿಭಟನೆಯಲ್ಲಿ ಪೀಪಲ್ಸ್ ಲೀಗಲ್ ಫಾರ್ಮ್ ಸಂಚಾಲಕ ಪಿ.ಬಾಬುರಾಜ್ ಪಾಲ್ಗೊಂಡಿದ್ದರು. ಶಾಲಾ ಮಕ್ಕಳ ಬ್ಯಾಗ್‌ಗಳನ್ನು ತೂಕ ಮಾಡಿದಾಗ ಬ್ಯಾಗ್‌ಗಳು ಮಕ್ಕಳಿಗಿಂತ ಶೇ 30 ರಷ್ಟು ತೂಕವಿರುವುದು ತಿಳಿದುಬಂತು. [ಕಾಮುಕರಿಂದ ಮಕ್ಕಳ ರಕ್ಷಿಸಲು ಲಾವಣ್ಯ ಹೋರಾಟ]

ಮಕ್ಕಳಿಗಿಂತ ಬ್ಯಾಗ್ ಶೇ 10 ರಷ್ಟು ಭಾರವಾಗಿದ್ದರೆ ಮಕ್ಕಳು ಭವಿಷ್ಯದಲ್ಲಿ ದೈಹಿಕ ಸಮಸ್ಯೆಯಿಂದ ಬಳಲುತ್ತಾರೆ ಎಂದು ಎಚ್ಚರಿಕೆ ನೀಡಿದರು.ಯುಕೆಜಿಯಿಂದ ಮೂರನೇ ತರಗತಿ ವರೆಗಿನ ಮಕ್ಕಳ ಬ್ಯಾಗ್‌ಗಳನ್ನು ಪಕ್ಷದ ಕಾರ್ಯಕರ್ತರು ತೂಕ ಮಾಡಿದರು.

School

ನಗರದ ವಿವಿಧ ಭಾಗಗಳಲ್ಲಿ ಇಂತಹ ತೂಕ ಪರೀಕ್ಷೆಯನ್ನು ನಡೆಸಿ ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಸುವ ಕುರಿತು ಕಾನೂನು ರೂಪಿಸುವಂತೆ ಕೋರಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಲು ಪಕ್ಷದ ಕಾರ್ಯಕರ್ತರು ತೀರ್ಮಾನಿಸಿದ್ದಾರೆ. [ಶಾಲೆಗಳ ಬಗ್ಗೆ ಶಿಕ್ಷಣ ಸಚಿವರಿಗೆ ಜೆಡಿಎಸ್ ಪತ್ರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+