ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಬರಿಮಲೆಗೆ ಮಹಿಳೆಯರ ಪ್ರವೇಶ: ಮಾಸ್ಟರ್ ಪ್ಲಾನ್ ಮಾಡಿದ್ದು ಮಡಿಕೇರಿಯಲ್ಲಿ!

|
Google Oneindia Kannada News

Recommended Video

ಶಬರಿಮಲೆಗೆ ಮಹಿಳೆಯರ ಪ್ರವೇಶ: ಮಾಸ್ಟರ್ ಪ್ಲಾನ್ ಮಾಡಿದ್ದು ಮಡಿಕೇರಿಯಲ್ಲಿ! | Oneindia Kannada

ಮೈಸೂರು, ಜನವರಿ 4: ಶಬರಿಮಲೆಗೆ ಆ ಇಬ್ಬರು ಮಹಿಳೆಯರು ಪ್ರವೇಶಿಸುವ ಮೊದಲು ಪ್ಲಾನ್ ಮಾಡಿಕೊಂಡಿದ್ದು ಕರ್ನಾಟಕದ ಮಡಿಕೇರಿಯಲ್ಲಿ ಎಂಬ ಸ್ಫೋಟಕ ಮಾಹಿತಿ ಲಭಿಸಿದೆ.

ಶ್ರೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಿಸಿ 800 ವರ್ಷದ ಸಂಪ್ರದಾಯ ಮುರಿದ ಬಿಂದು ಮತ್ತು ಕನಕದುರ್ಗಾ ದೇವಾಲಯ ಪ್ರವೇಶಿಸುವ ಎರಡು ದಿನಗಳ ಮುಂಚೆ ವಿರಾಜಪೇಟೆಯಲ್ಲಿ ತಂಗಿದ್ದರು.

ಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳುಶಬರಿಮಲೆ ದೇವಾಲಯ ಪ್ರವೇಶಿಸಿದ 'ಅವಳು' ಬ್ರಾಹ್ಮಣ ಕುಟುಂಬದವಳು

ಕನಕದುರ್ಗಾ ಹಾಗೂ ಬಿಂದು ಇಬ್ಬರೂ ಕೇರಳ ಪೊಲೀಸರ ಜತೆ ವಿರಾಜಪೇಟೆಗೆ ಬಂದು, ಇಲ್ಲಿಯೇ ಶ್ರೀ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ಕಾರ್ಯತಂತ್ರ ರೂಪಿಸಿದ್ದರೆಂದು ತಿಳಿದು ಬಂದಿದೆ. ಕೇರಳದ ಕೋಯಕ್ಕೊಡು ನಿವಾಸಿಯಾದ ಉಪನ್ಯಾಸಕಿ ಹಾಗೂ ದಲಿತ ಹಕ್ಕು ಹೋರಾಟಗಾರ್ತಿ ಬಿಂದು ತನ್ನೊಂದಿಗೆ ಮಲಪ್ಪುರಂ ನಿವಾಸಿ ಕೇರಳ ಸರ್ಕಾರದ ಪಡಿತರ ಇಲಾಖೆಯಲ್ಲಿ ಗುತ್ತಿಗೆ ಸಿಬ್ಬಂದಿ ಕನಕದುರ್ಗಾರೊಂದಿಗೆ ಗಡಿ ಪ್ರದೇಶ ಕೊಡಗಿನ ವಿರಾಜಪೇಟೆಗೆ ಬಂದಿದ್ದರು.

ಶಬರಿಮಲೆ ಗರ್ಭಗುಡಿ ಪ್ರವೇಶಿಸಿದರೇ 46 ವರ್ಷದ ಶ್ರೀಲಂಕಾ ಮಹಿಳೆ?ಶಬರಿಮಲೆ ಗರ್ಭಗುಡಿ ಪ್ರವೇಶಿಸಿದರೇ 46 ವರ್ಷದ ಶ್ರೀಲಂಕಾ ಮಹಿಳೆ?

ಕಳೆದ ವಾರ ಅಂದರೆ ಡಿಸೆಂಬರ್ 29 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಈ ಇಬ್ಬರೂ ಮಹಿಳೆ ಯರು ವಿರಾಜಪೇಟೆಗೆ ಬಂದಿದ್ದಾರೆ. ವಿರಾಜಪೇಟೆಯ ದೊಡ್ಡಟ್ಟಿ ಚೌಕ್ ನಲ್ಲಿರುವ ಸೀತಾಲಕ್ಷ್ಮಿ ಲಾಡ್ಜ್ ನಲ್ಲಿ ಬಿಂದು ತನ್ನ ಹೆಸರಿನಲ್ಲಿ ರೂಂ ಪಡೆದಿದ್ದಾರೆ. ಇವರೊಂದಿಗೆ ಮಫ್ತಿಯಲ್ಲಿ ಬಂದಿದ್ದ ಕೇರಳ ಪೊಲೀಸ್ ಸಿಬ್ಬಂದಿ, ಇಬ್ಬರೂ ಮಹಿಳೆಯರನ್ನು ಸುರಕ್ಷಿತವಾಗಿ ಲಾಡ್ಜ್ ಸೇರಿಸಿದ ಬಳಿಕ ಅಲ್ಲಿಂದ ತೆರಳಿದ್ದಾರೆ. ಮುಂದೆ ಓದಿ...

 ಸೀತಾಲಕ್ಷ್ಮಿ ಲಾಡ್ಜ್ ನಲ್ಲೇ ತಂಗಿದ್ದರು

ಸೀತಾಲಕ್ಷ್ಮಿ ಲಾಡ್ಜ್ ನಲ್ಲೇ ತಂಗಿದ್ದರು

ಬಿಂದು ಮತ್ತು ಕನಕದುರ್ಗಾ ಎರಡು ದಿನಗಳ ಕಾಲ ಸೀತಾಲಕ್ಷ್ಮಿ ಲಾಡ್ಜ್ ನಲ್ಲೇ ತಂಗಿದ್ದರು. ಹೊರಹೋಗದೆ ರೂಮ್ ಗೆ ಊಟ, ತಿಂಡಿ ತರಿಸಿಕೊಂಡಿದ್ದರು. ಡಿಸೆಂಬರ್ 31ರ ಸೋಮವಾರ ಬೆಳಿಗ್ಗೆ 10 ಗಂಟೆ 28 ನಿಮಿಷಕ್ಕೆ ಲಾಡ್ಜ್ ರೂಮ್ ಖಾಲಿ ಮಾಡಿ, ಕೇರಳದತ್ತ ಸಾಗಿದ್ದಾರೆ.

 ಶಬರಿಮಲೆಗೆ ಎಂಟ್ರಿ

ಶಬರಿಮಲೆಗೆ ಎಂಟ್ರಿ

ಲಾಡ್ಜ್ ಗೆ ಬರುವಾಗ ಬಣ್ಣದ ಧಿರಿಸಿನಲ್ಲಿ ಬಂದಿದ್ದ ಬಿಂದು ಮತ್ತು ಕನಕದುರ್ಗಾ ಲಾಡ್ಜ್ ರೂಂ ಖಾಲಿ ಮಾಡಿ, ಈ ಲಾಡ್ಜ್ ನಿಂದಲೇ ಶಬರಿಮಲೆಗೆ ಎಂಟ್ರಿ ಪಡೆಯುವ ಸಂಬಂಧ ಪ್ಲಾನ್ ರೂಪಿಸಿದ್ದಲ್ಲದೇ, ಎಲ್ಲಾ ರೀತಿಯ ಸಿದ್ಧತೆಗಳನ್ನು ವಿರಾಜಪೇಟೆಯಲ್ಲಿಯೇ ಕೈಗೊಂಡಿರುವುದು ಸ್ಪಷ್ಟವಾಗಿದೆ.

'ಅಯ್ಯಪ್ಪ... ಇದೆಂಥ ಪರೀಕ್ಷೆ! ಹಿಂದಿನ ಬಾಗಿಲಿಂದ ಹೋಗಿ ದರ್ಶನ ಪಡೆಯೋದಾ?!''ಅಯ್ಯಪ್ಪ... ಇದೆಂಥ ಪರೀಕ್ಷೆ! ಹಿಂದಿನ ಬಾಗಿಲಿಂದ ಹೋಗಿ ದರ್ಶನ ಪಡೆಯೋದಾ?!'

 ಮೊಬೈಲ್ ನಲ್ಲಿ ಸೆರೆ

ಮೊಬೈಲ್ ನಲ್ಲಿ ಸೆರೆ

ಶಬರಿಮಲೆ ಸನ್ನಿಧಿ ತಪ್ಪಲಿನ ಪಂಪಾ ಕ್ಷೇತ್ರಕ್ಕೆ ಮಂಗಳವಾರ ನಡುರಾತ್ರಿ ತೆರಳಿದ ಬಿಂದು ಹಾಗೂ ಕನಕದುರ್ಗಾ ಪೊಲೀಸ್ ಭದ್ರತೆಯಲ್ಲೇ ಅಯ್ಯಪ್ಪ ಸನ್ನಿಧಿ ಪ್ರವೇಶಿಸಿ ಎಲ್ಲಾ ಸಂಪ್ರದಾಯ, ನಂಬಿಕೆಗಳನ್ನು ನುಚ್ಚು ನೂರು ಮಾಡಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ವಿರಾಜಪೇಟೆಗೆ ಈ ಇಬ್ಬರನ್ನು ಕರೆತಂದು ಬಿಟ್ಟಿದ್ದ ಕೇರಳ ಪೊಲೀಸರು, ಇವರು ಶಬರಿಮಲೆ ಸನ್ನಿಧಿಗೆ ಪ್ರವೇಶ ಪಡೆಯುವ ಸಂದರ್ಭ ಜತೆಯಲ್ಲಿದ್ದು, ಅಯ್ಯಪ್ಪನ ದರ್ಶನ ಪಡೆಯುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆಂದು ಹೇಳಲಾಗಿದೆ.

 ಮಾಂಸಾಹಾರ ಸೇವನೆ

ಮಾಂಸಾಹಾರ ಸೇವನೆ

ಕೇರಳದಲ್ಲಿದ್ದರೆ ದೇವಾಲಯ ಪ್ರವೇಶ ತಂತ್ರ ಬಯಲಾದೀತು ಎಂಬ ದೃಷ್ಟಿಯಿಂದ ಕೇರಳ ಗಡಿಯ ವೀರಾಜಪೇಟೆಗೆ ಇಬ್ಬರೂ ಮಹಿಳೆಯರನ್ನು ಕರೆತಂದು, ಇಲ್ಲಿ ಎರಡು ದಿನಗಳ ಕಾಲ ಇರಿಸಿ, ಇಲ್ಲಿಂದಲೇ ಅಗತ್ಯ ಸಿದ್ಧತೆ ಕೈಗೊಂಡು ನಂತರ ವೀರಾಜಪೇಟೆಯಿಂದ ಒಂದೂವರೆ ದಿನಗಳ ಪ್ರಯಾಣ ಕೈಗೊಂಡು ಪಂಪಾ ಕ್ಷೇತ್ರ ಪ್ರವೇಶಿಸಿ ಅಲ್ಲಿಂದ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ತೆರಳಿರುವುದು ಸ್ಪಷ್ಟವಾಗಿದೆ. ಅಲ್ಲದೇ ಹೊರಡುವಾಗ ಇಬ್ಬರೂ ಮಹಿಳೆಯರು ಕಪ್ಪು ಬಟ್ಟೆ ಧರಿಸಿ ವಿರಾಜಪೇಟೆಯಿಂದ ತೆರಳಿದ್ದಾರೆ. ಇಬ್ಬರೂ ಲಾಡ್ಜ್ ನಲ್ಲಿದ್ದ ಸಂದರ್ಭ ಯಾವುದೇ ರೀತಿಯ ವೃತ ಪಾಲಿಸದೆ ಮಾಂಸಾಹಾರ ಸೇವಿಸಿದ್ದರು ಎಂದು ಲಾಡ್ಜ್ ಸಿಬ್ಬಂದಿ ಮಾಲೀಕರಿಗೆ ತಿಳಿಸಿದ್ದಾರೆ.

English summary
Two women below 50 enter Kerala's Sabarimala temple: Women plan was created in Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X