ಎಚ್.ಡಿ.ಕೋಟೆ ಗಿರಿಜನರಿಗಾಗಿ ಅಂಬ್ಯುಲೆನ್ಸ್ ನೀಡಿದ ಆರ್‌ಬಿಐ

ಮೈಸೂರು, ಅಕ್ಟೋಬರ್ 28 : ಭಾರತೀಯ ರಿಸರ್ವ್ ಬ್ಯಾಂಕ್ ಎಚ್. ಡಿ. ಕೋಟೆ ತಾಲೂಕಿನ ಹಾಡಿ ಪ್ರದೇಶದ ವಾಪ್ತಿಯಲ್ಲಿ ವಾಸಿಸುವ ಜನರಿಗೆ ಅನುಕೂಲವಾಗಲೆಂದು 2 ಅಂಬ್ಯುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದೆ.

ಬುಧವಾರ ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆ ಮೈಸೂರು ಜಿಲ್ಲಾಡಳಿತಕ್ಕೆ ಅಂಬ್ಯುಲೆನ್ಸ್ ಹಸ್ತಾಂತರ ಮಾಡಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪಾಲ್ಗೊಂಡಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ. ಅಮರ್ನಾಥ್ ಮಾತನಾಡಿ, "ಎಚ್. ಡಿ. ಕೋಟೆಯ ಬುಡಕಟ್ಟು ಜನಾಂಗದವರಿಗೆ ತುರ್ತು ಸಮಯದಲ್ಲಿ ಅನುಕೂಲವಾಗಲಿ ಎಂದು ಕೊಡುಗೆ ನೀಡಿದ್ದು, ವಾಹನಗಳನ್ನು ಹಾಡಿಯಲ್ಲಿ ವಾಸಿಸುವ ಜನರಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ" ಎಂದರು.

Reserve Bank Note Mudran Unit Donated Two Ambulances

ನೋಟು ಮುದ್ರಣ ಸಂಸ್ಥೆಯ ವ್ಯವಸ್ಥಾಪಕ ಎನ್. ಜಿ. ಮುರುಳಿ ಮಾತನಾಡಿ, "ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ಅನೇಕ ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ನೀಡುತ್ತಾ ಬರಲಾಗಿದೆ. 29.2 ಲಕ್ಷ ರೂ. ಮೌಲ್ಯದ ಎರಡು ಅಂಬ್ಯುಲೆನ್ಸ್ ವಾಹನಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ" ಎಂದು ಹೇಳಿದರು.

ಮೈಸೂರಿನ ಆರ್. ಬಿ. ಐ ನೋಟು ಮುದ್ರಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಮೇಶ್ ಕುಮಾರ್ ಲಭ, ಸಹಾಯಕ ಪ್ರಧಾನ ವ್ಯವಸ್ಥಾಪಕ ಅಜಿತ್ ಕುಮಾರ್ ಕರಣ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+