ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಹಿನ್ನೆಲೆ: ಈ ದಿನಗಳಂದು ಅರಮನೆಗೆ ಪ್ರವೇಶ ನಿರ್ಬಂಧ

|
Google Oneindia Kannada News

Recommended Video

Mysore Dasara 2018 : ಈ ದಿನಗಳಲ್ಲಿ ಅರಮನೆ ಪ್ರವೇಶ ನಿರ್ಬಂಧ | Oneindia Kannada

ಮೈಸೂರು, ಅಕ್ಟೋಬರ್.04 :ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ದಸರೆಗೆ ಜಿಲ್ಲೆಯಲ್ಲಿ ಸಂತಸ ಮನೆಮಾಡಿದೆ. ಅಂದಹಾಗೆ ದಸರಾ ಮಹೋತ್ಸವವೆಂದರೆ ಮೊದಲು ನೆನಪಾಗುವುದು ರಾಜರ ವೈಭವದ ಪೂಜೆ-ಪುನಸ್ಕಾರಗಳು.

ಅವುಗಳನ್ನು ನೆರವೇರಿಸಲು ರಾಜಮನೆತನ ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕು. ಈ ಅಂಗವಾಗಿ ಮೈಸೂರು ರಾಜಮನೆತನದವರು ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯವನ್ನು ಇಂದಿನಿಂದ ಅಂದರೆ ಅ.4ರಿಂದ ನ.2ರವರೆಗೆ ಆಯ್ದ ದಿನಗಳಲ್ಲಿ ಕೈಗೊಳ್ಳಲಿದ್ದಾರೆ.

ಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿ

ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ.

Religious worships will take place in the palace from October 4

ನಾಡಹಬ್ಬ ದಸರಾಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ಯಾಕೇಜ್ ಟೂರ್ನಾಡಹಬ್ಬ ದಸರಾಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ಯಾಕೇಜ್ ಟೂರ್

ಯಾವ ಸಮಯದಲ್ಲಿ, ಎಲ್ಲೆಲ್ಲಿ ನಿರ್ಬಂಧ?
ಅ.4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆ ಒಳಾವರಣ ಹಾಗೂ ಹೊರಾವರಣ, 10ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಅರಮನೆಯ ಒಳಾವರಣಕ್ಕೆ(ಅಂದು ಮಧ್ಯಾಹ್ನ 2.30ರ ನಂತರ ಹೊರಾವರಣಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ), 18ರಂದು ಮಧ್ಯಾಹ್ನ 1.30ರವರೆಗೆ, 19ರಂದು ಸಂಪೂರ್ಣ ದಿನ ಮತ್ತು ನ.2ರವರೆಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Mysore Dasara 2018: Religious worships will take place in the palace from October 4 to November 2. So some day entry to the palace is restricted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X