ಮೈಸೂರು; ಮೂಡಾ ಸೈಟ್ ಇ- ಹರಾಜು, ವಿವರಗಳು

ಮೈಸೂರು, ಮಾರ್ಚ್ 16; ಮೈಸೂರಿನಲ್ಲಿ ನಿವೇಶನ ಖರೀದಿ ಮಾಡಿ ಮನೆ ಕಟ್ಟಬೇಕು ಎಂಬ ಕನಸು ಇರುವವರಿಗೆ ಅವಕಾಶ ಸಿಕ್ಕಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರೀಮಿಯಂ ಸೈಟ್‌ಗಳ ಹರಾಜಿಗೆ ದಿನಾಂಕ ನಿಗದಿ ಮಾಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಮಾರ್ಚ್ 22, 24, 26 ಮತ್ತು 31ರಂದು ಪ್ರೀಮಿಯಂ ನಿವೇಶನಗಳ ಇ- ಹರಾಜು ನಡೆಸಲಿದೆ. ಹರಾಜಿನಲ್ಲಿ ಪಾಲ್ಗೊಳ್ಳಲು ಜನರು ಮೊದಲು ಹೆಸರು ನೋಂದಾಯಿಸಬೇಕು.

ಮಾರ್ಚ್ 19, 22, 25 ಮತ್ತು 29ರ ತನಕ ಹೆಸರುಗಳನ್ನು ನೋಂದಣಿ ಮಾಡಿಸಬಹುದಾಗಿದೆ. ಕೊನೆ ಕ್ಷಣದ ತನಕ ಕಾಯಬೇಡಿ ತಕ್ಷಣ ಹೆಸರು ನೋಂದಾಯಿಸಿ ಎಂದು ಮೂಡಾ ಅಧ್ಯಕ್ಷ ಎಚ್‌. ವಿ. ರಾಜೀವ್‌ ಅವರು ಕರೆ ನೀಡಿದ್ದಾರೆ.

Register Name To Participate In E Auction Of Muda Premium Sites

ಮೈಸೂರಿನಲ್ಲಿ ನಿವೇಶನ ಕೊಂಡು ಏಕೆ ಮನೆ ಕಟ್ಟಬೇಕು ಎಂದು ವಿಡಿಯೋ ಸಂದೇಶದಲ್ಲಿ ಅವರು ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಪ್ರೀಮಿಯಂ ನಿವೇಶನಗಳ ಇ- ಹರಾಜಿನಲ್ಲಿ ಭಾಗವಹಿಸಿ ನಿವೇಶನ ನಿಮ್ಮದಾಗಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಈ ವಿಡಿಯೋ ಮೂಡಾ ಫೇಸ್ ಬುಕ್ ಪುಟದಲ್ಲಿ ಲಭ್ಯವಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಪ್ರೀಮಿಯಂ ನಿವೇಶನಗಳ ಹರಾಜು ಕುರಿತುತ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ನಿವೇಶನ ಹರಾಜು ನೋಂದಣಿ ಸಂಬಂಧಿಸಿದಂತೆ ಯಾವುದೇ ಗೊಂದಲವಿದ್ದರೂ ಇಲ್ಲಿ ಮಾಹಿತಿ ಸಿಗಲಿದೆ.

Register Name To Participate In E Auction Of Muda Premium Sites

ಮಧ್ಯವರ್ತಿಗಳ ಪ್ರವೇಶವೂ ಅಗತ್ಯವಿಲ್ಲ. ಜನರು ನೇರವಾಗಿ ಸಹಾಯವಾಣಿಗೆ ಭೇಟಿ ನೀಡಿ ಸಂದೇಹ ಬಗೆಹರಿಸಿಕೊಳ್ಳಬಹುದು. ನೋಂದಣಿಯನ್ನೂ ಮಾಡಬಹುದು ಎಂದು ಮೂಡಾ ಹೇಳಿದೆ.

ಆನ್ ಲೈನ್ ಮೂಲಕವೂ ನೋಂದಣಿಗೆ ಅವಕಾಶವನ್ನು ನೀಡಲಾಗಿದೆ. ಜನರು
www.mudamysore.gov.in and www.eproc.karnataka.gov.in ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+