Yaduveer Wadiyar: ಯದುವೀರ್ ಒಡೆಯರ್ ದಾಖಲೆಯ ಗೆಲುವಿಗೆ ಕಾರಣಗಳೇನು?

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ಮತ್ತೊಮ್ಮೆ ವಿಜಯದ ಕಹಳೆ ಮೊಳಗಿಸಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೊದಲ ಪ್ರಯತ್ನದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ಧ ದಾಖಲೆಯ 1.39 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಯದುವೀರ್ ಕಾಂಗ್ರೆಸ್‌ನ ಎಂ.ಲಕ್ಷ್ಮಣ್ ವಿರುದ್ಧ 1,39,262 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಯದುವೀರ್ ಒಟ್ಟು 7,95,503 ಮತಗಳನ್ನು ಪಡೆದುಕೊಂಡಿದ್ದಾರೆ. 2019ರಲ್ಲಿ ಪ್ರತಾಪ್ ಸಿಂಹ ಅವರಿಗೆ 6,88,974 ಪಡೆದಿದ್ದರೆ, ಕಾಂಗ್ರೆಸ್‌ನ ವಿಜಯಶಂಕರ್‌ 5,50,327 ಮತಗಳನ್ನು ಪಡೆದಿದ್ದರು. ಪ್ರತಾಪ್ ಸಿಂಹ 1,38,647 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ 615 ಹೆಚ್ಚುವರಿ ಮತಗಳನ್ನು ಯದುವೀರ್ ಒಡೆಯರ್ ಪಡೆದುಕೊಂಡಿದ್ದಾರೆ.

Reasons behind Yaduveer Wadiyar Win in Mysuru Lok Sabha Election 2024

ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ಮತ ಎಣಿಕೆಯ ವೀಕ್ಷಕ ಮೊಹಮದ್ ಇಜಾಜ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು. ಪ್ರಾರಂಭದಲ್ಲೇ ಯದುವೀರ್‌ಗೆ ಅಂಚೆ ಎಣಿಕೆಯಲ್ಲಿ 2610 ಮತಗಳ ಅಲ್ಪ ಮುನ್ನಡೆ ದೊರೆಯಿತು. ನಂತರ ಮೊದಲ ಸುತ್ತಿನಲ್ಲಿ ಯದುವೀರ್‌ಗೆ 41473 ಮತಗಳು ಬಂದರೆ, ಲಕ್ಷ್ಮಣ್ ಅವರಿಗೆ 32164 ಮತಗಳು ಬಂದವು. ಅಲ್ಲಿಂದ 19 ಸುತ್ತಿನವರೆಗೂ ಪ್ರತಿ ಸುತ್ತಿನಲ್ಲೂ ಯದುವೀರ್ ಮುನ್ನಡೆ ಕಾಯ್ದುಕೊಂಡು ಬಂದರು. ಯಾವ ಹಂತದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ.

ನರಸಿಂಹರಾಜದಲ್ಲೇ ಹೆಚ್ಚು

ಪ್ರಾರಂಭದಿಂದಲೇ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ 80,955 ಮತಗಳ ಲೀಡ್ ಸಿಕ್ಕಿತು. ಬಿಜೆಪಿ ಅಭ್ಯರ್ಥಿಗೆ 40,784 ಮತಗಳು ಬಂದರೆ, ಕಾಂಗ್ರೆಸ್ ಅಭ್ಯರ್ಥಿಗೆ 1,21,739 ಮತಗಳು ಬಂದವು. ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಗೆ 46746 ಲೀಡ್, ಚಾಮರಾಜ ವಿಧಾನ ಸಭಾ ಕ್ಷೇತ್ರ 53732 ಲೀಡ್ ಬಂದಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 36459 ಮತಗಳ ಲೀಡ್ ಬಂದರೆ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 27378 ಮತಗಳ ಅಂತರ ಯದುವೀರ್ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.

ಯದುವೀರ್ ಗೆಲುವಿಗೆ ಕಾರಣಗಳೇನು?

  • ರಾಜವಂಶದ ಕುಡಿ ಎಂಬ ಹೆಗ್ಗಳಿಕೆ.
  • ಯದುವೀರ್ ಅವರ ವರ್ಚಸ್ಸು, ಸದ್ಗುಣ, ಎಲ್ಲರನ್ನೂ ಪ್ರೀತಿಸುವ ಗುಣ.
  • ಮೈಸೂರು ಜನ ರಾಜಮನೆತನದ ಮೇಲೆ ಇಟ್ಟಿರುವ ಗೌರವ.
  • ಬಿಜೆಪಿಯ ವ್ಯವಸ್ಥಿತ ಸಂಘಟನೆ.
  • ಬಿಜೆಪಿ ಸಾಂಪ್ರದಾಯಿಕ ಮತ ಕೈಹಿಡಿದಿದ್ದು.
  • ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಪ್ರಚಾರ.

ಲಕ್ಷ್ಮಣ್ ಸೋಲಿಗೆ ಕಾರಣಗಳು

  • ಕೈಹಿಡಿಯದ ಗ್ಯಾರಂಟಿ ಆಧಾರಿತ ಪ್ರಚಾರ.
  • ಒಲಿಯದ ಒಕ್ಕಲಿಗ ಸಮುದಾಯದ ಮತ.
  • ವೈಯಕ್ತಿಕ ವರ್ಚಸ್ಸಿನ ಕೊರತೆ.
  • ಜಿಲ್ಲೆಯ ಮತದಾರರನ್ನು ಸೆಳೆಯುವಲ್ಲಿ ಇಬ್ಬರು ಸಚಿವರ ವೈಫಲ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+