ಮೈಸೂರಿಗರು ಶೀಘ್ರದಲ್ಲೇ ಸೈಕಲ್ ಸವಾರಿ ಮಾಡಬಹುದು

ಮೈಸೂರು, ಮೇ 18 : ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್ ಬಳಕೆ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಸಾರ್ವಜನಿಕ ಸೈಕಲ್ ಸೇವೆ (ಪಿಬಿಎಸ್) ಸೇವೆಯನ್ನು ನಗರದಲ್ಲಿ ಆರಂಭಿಸಲಿದೆ. ಈ ಯೋಜನೆಗೆ ಸುಮಾರು 19 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಸಾರ್ವಜನಿಕ ಸೈಕಲ್ ಸೇವೆ ( public bicycle service- PBS) ಆರಂಭಕ್ಕೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, 2016ರ ಫೆಬ್ರವರಿಯಲ್ಲಿ ಮೈಸೂರಿಗರು ಸೈಕಲ್ ಮೂಲಕ ಸಂಚರಿಸಬಹುದಾಗಿದೆ. 550 ಸೈಕಲ್‌ಗಳು ರಸ್ತೆಗೆ ಇಳಿಯಲಿದ್ದು, 52 ನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗುತ್ತದೆ.[ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನ]

Bicycle

ಪಿಬಿಎಸ್ ಮ್ಯಾನೇಜ್‌ಮೆಂಟ್, ಟ್ರಾಕ್ ಗುರುತಿಸುವಿಕೆ, ಕಂಟ್ರೋಲ್ ರೂಂ ಸ್ಥಾಪನೆ, ನಿಲ್ದಾಣಗಳ ಗುರುತಿಸುವಿಕೆ ಮುಂತಾದ ಕಾರ್ಯಗಳನ್ನು ಆರಂಭಿಸಲಾಗಿದೆ. ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಈ ಯೋಜನೆಯನ್ನು ನಿರ್ವಹಣೆ ಮಾಡಲಿದೆ. [ಬೆಂಗಳೂರು ದೇಶದ ಸೈಕಲ್ ರಾಜಧಾನಿಯಾಗಲಿ!]

ಎಲ್ಲೆಲ್ಲಿ ಸೈಕಲ್ ಲಭ್ಯ : ಪ್ರಾಯೋಗಿಕವಾಗಿ ರೇಸ್ ಕೋರ್ಸ್, ಕುಕ್ಕರಹಳ್ಳಿ ಕೆರೆ, ಅರಮನೆ, ಚಾಮುಂಡಿ ಬೆಟ್ಟ, ಲಷ್ಕರ್ ಮೊಹಲ್ಲಾ, ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಸೈಕಲ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರಾಯೋಗಿಕ ಸೇವೆಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಸ್ಥಳಗಳಲ್ಲಿ ಸೇವೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ.

ಟ್ರಾಕ್ ಗುರುತಿಸುವಿಕೆ : ಯಾವ ಪ್ರದೇಶದಲ್ಲಿ ಸೈಕಲ್ ಟ್ರಾಕ್ ನಿರ್ಮಾಣ ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮೊದಲು ವಿದೇಶಿಯರು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿ ಟ್ರಾಕ್ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+