ಮೈಸೂರಲ್ಲಿ ಸ್ಪಾ ನೆಪದಲ್ಲಿ ವೇಶ್ಯಾವಾಟಿಕೆ; ಓರ್ವ ಮಹಿಳೆ ಬಂಧನ

ಮೈಸೂರು, ಮಾರ್ಚ್ 19: ಸ್ಪಾ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮೈಸೂರು ನಗರದ ಸಿಸಿಬಿ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹೈ-ವೇ ಸರ್ಕಲ್ ನಲ್ಲಿರುವ ಡ್ರೀಮ್ ಸ್ಪಾ ಮತ್ತು ಬ್ಯೂಟಿ ಜೋನ್ ಎಂಬ ಮಸಾಜ್ ಸೆಂಟರ್ ಮೇಲೆ ಮಾರ್ಚ್ ೧೭ ರಂದು ದಾಳಿ ಮಾಡಿ ಅಲ್ಲಿ ಮಸಾಜ್ ಮಾಡುವ ನೆಪದಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಮಂಡ್ಯ ನಿವಾಸಿ ಎಲಿಜಬೆತ್ ರಾಣಿ ಕೋಂ ಲಾರೆನ್ಸ್ (38) ಎಂದು ಗುರುತಿಸಲಾಗಿದ್ದು, ಈಕೆಯನ್ನು ದಸ್ತಗಿರಿ ಮಾಡಿ, ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

Prostitution At A Spa In Mysuru; Arrest A Woman

ವೇಶ್ಯಾವಾಟಿಕೆಗೆ ಗಿರಾಕಿ ಆಗಿ ಬಂದಿದ್ದ ಮಧು ಬಿನ್ ಶೇಷಪ್ಪ, ವಿಜಯನಗರ, ಮೈಸೂರು ಎಂಬಾತನನ್ನು ವಿಚಾರಣೆಗೊಳಪಡಿಸಿದ್ದು, ಇದೇ ವೇಳೆ ವೇಶ್ಯಾವಾಟಿಕೆಯಿಂದ ಸಂಪಾದಿಸಿದ್ದ 6000 ರೂ. ಹಣ, ಮೊಬೈಲ್ ಫೋನ್ ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತೆಯು ಅನ್‌ ಲೈನ್‌ ಮೂಲಕ ಗಿರಾಕಿಗಳನ್ನು ಹುಡುಕುತಿದ್ದಳು ಎಂದು ಪೋಲೀಸರು ತಿಳಿಸಿದ್ದಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Prostitution At A Spa In Mysuru; Arrest A Woman

ಒಂದೆಡೆ ಕೊರೊನಾ ವೈರಸ್ ಭೀತಿ ಎಲ್ಲೆಡೆ ಹರಡುತ್ತಿದ್ದು ಜನ ಮನೆಯಿಂದ ಹೊರಗೆ ಹೋಗಲು ಭಯಪಡುತ್ತಿದ್ದರೂ, ವೇಶ್ಯಾವಾಟಿಕೆ ದಂಧೆಗಳು ಮಾತ್ರ ಯಾವುದೇ ಆತಂಕವಿಲ್ಲದೇ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಡುವೆ ಮಸಾಜ್ ಸೆಂಟರ್ ನೆಪದಲ್ಲಿ ಕೆಲವು ಮಹಿಳೆಯರೇ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವುದು ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಪ್ರಕರಣಗಳಿಂದ ಸಾಬೀತಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+