ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಪ್ರೊ.ಕೃಷ್ಣೇಗೌಡ, ಡಿ.ಮಾದೇಗೌಡಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 31: ವಾಗ್ಮಿ ಹಾಗೂ ಚಿಂತಕ ಪ್ರೊ.ಕೃಷ್ಣೇಗೌಡ ಹಾಗೂ ರಾಜಕೀಯ ಧುರೀಣ, ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀತ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. 2022-23ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಭಾನುವಾರ ಪ್ರಕಟಿಸಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 67 ಮಂದಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Kannada Rajyotsava Award 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ, 67 ಗಣ್ಯ ಪಟ್ಟಿ ಇಲ್ಲಿದೆKannada Rajyotsava Award 2022ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ, 67 ಗಣ್ಯ ಪಟ್ಟಿ ಇಲ್ಲಿದೆ

ವೃತ್ತಿಯಿಂದ ಅಧ್ಯಾಪಕರು ಹಾಗೂ ಪ್ರವೃತ್ತಿಯಿಂದ ಹಾಸ್ಯಗಾರರಾದ ಪ್ರೊ.ಕೃಷ್ಣೇಗೌಡ ಅವರು ಎಲ್ಲೇ ವೇದಿಕೆ ಹತ್ತಿದರೆ ಸಾಕು ನಿರರ್ಗಳವಾಗಿ, ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ. ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಗ್ರಾಮದವರಾದ ಕೇಷ್ಣೇಗೌಡರು 1958ರಲ್ಲಿ ಜನಿಸಿದ್ದರು. ಹುಟ್ಟೂರಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದ ಅವರು, ಮೈಸೂರಿನಲ್ಲಿ ಪದವಿ ಪಡೆದುಕೊಂಡರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು 1983ರಿಂದ ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿದ್ದರು.

Pro Krishnegowda and Politician D Madegowda from Mysore win Kannada Rajoytsava Award

ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಕೃಷ್ಣೇಗೌಡರು ಅಲ್ಲಿಯೇ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಸ್ಯಗೋಷ್ಠಿ ಮೂಲಕ ಕನ್ನಡದ ಕಂಪನ್ನು ವಿವಿಧ ರಾಜ್ಯ ಹಾಗೂ ವಿದೇಶಗಳಿಗೂ ಪಸರಿಸಿದ್ದಾರೆ. ಆ ಮೂಲಕ ಹರಟೆ ಮಲ್ಲ, ಮಾತಿನ ಮಲ್ಲ ಎಂಬ ಬಿರುದು ಪಡೆದುಕೊಂಡಿದ್ದಾರೆ.

ಉತ್ತಮ ಸಾಹಿತಿಯಾಗಿರುವ ಕೃಷ್ಣೇಗೌಡರು ಕವಣೆ ಕಲ್ಲು, ಕೃಷ್ಣ ವಿನೋದ' 'ಜಲದಕಣ್ಣು ಕೃತಿಗಳನ್ನು ಕೂಡ ಪ್ರಕಟಿಸಿದ್ದಾರೆ.

ಬಿಜೆಪಿ ರಾಜಕೀಯ ಧುರೀಣ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಅವರಿಗೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಮೈಸೂರಿನ ಚಾಮರಾಜ ಕ್ಷೇತ್ರದ ಪ್ರಬಲ ಒಕ್ಕಲಿಗ ಮುಖಂಡರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ಕುಂಬಾರಕೊಪ್ಪಲು ಗ್ರಾಮದಲ್ಲಿ ಶೂನ್ಯ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮಾದೇಗೌಡ ಅವರೇ ಕಾರಣ. ಮೈಸೂರಿನ ಪ್ರತಿಷ್ಠಿತ ಸಂಸ್ಥೆಯಾದ ರಾಮಕೃಷ್ಣ ಆಶ್ರಮಕ್ಕೂ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

1942 ರಲ್ಲಿ ಜನಿಸಿದ ಮಾದೇಗೌಡರು ಬಿ.ಎ. ಬಿ.ಎಲ್‌ ಪದವೀಧರರು. ಎಂಭತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಇದ್ದಾಗ ಅವರನ್ನು ಸಿಐಟಿಬಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಧ್ಯಕ್ಷರಾಗಿ ಅವರು ಮಾಡಿದ ಸಾಧನೆಯನ್ನು ಪರಿಗಣಿಸಿ, ಹುಡ್ಕೋ ಪ್ರಕಟಿಸಿದ ಪುಸ್ತಕದ ರಕ್ಷಾಪುಟದಲ್ಲಿ ಮನೆ ಎಂಬ ಕನ್ನಡ ಪದ ಬಳಕೆ ಮಾಡಲಾಗಿತ್ತು. ಅಲ್ಲದೆ ಎಸ್‌ ಎಂ ಕೃಷ್ಣ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸಾಧಕರ ವಿಭಾಗದಲ್ಲಿ ಇವರಿಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದರೆ, ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಸಂಸ್ಥೆಗಳ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.

ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ 1925ರ ಜೂನ್ 11ರಂದು ಸ್ವಾಮಿ ಬ್ರಹ್ಮಾನಂದರ ದೀಕ್ಷಾ ಶಿಷ್ಯರಾದ ಸ್ವಾಮಿ ಸಿದ್ದೇಶ್ವರಾನಂದ ಅವರಿಂದ ಸ್ಥಾಪನೆಯಾಯಿತು. ರಾಮಕೃಷ್ಣ ಆಶ್ರಮದ ವಿವಿಧ ಕೇಂದ್ರಗಳಿಂದ ಬರುವ ಸನ್ಯಾಸಿಗಳು ಮತ್ತು ಬ್ರಹ್ಮಚಾರಿಗಳಿಗೆ ವಿದ್ವಾಂಸರು ಇಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಖ್ಯಾತ ಸಾಹಿತಿ ಕುವೆಂಪು ವಿದ್ಯಾರ್ಥಿ ದಿನಗಳಲ್ಲಿ ಈ ಆಶ್ರಮದಲ್ಲಿ ಆರಂಭಿಕ ತರಬೇತಿ ಮತ್ತು ಶ್ರೀರಾಮಕೃಷ್ಣರ ನೇರ ಶಿಷ್ಯರಾದ ಸ್ವಾಮಿ ಶಿವಾನಂದರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದಿದ್ದರು. ಅಧ್ಯಾತ್ಮದ ಜತೆಗೆ ಆಶ್ರಮ ಶೈಕ್ಷಣಿಕ ಕ್ರಾಂತಿಯನ್ನೂ ಮಾಡುತ್ತಿದೆ. ಬಡವರಿಗೆ ನಾನಾ ರೀತಿಯಲ್ಲಿ ನೆರವಾಗುತ್ತಿದೆ.

English summary
Pro Krishnegowda and Politician D Madegowda from Mysore were awarded for Kannada Rajoytsava,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X