ವೀಡಿಯೋ ವೈರಲ್:ಬ್ಯಾಟ್ ಹಿಡಿದು ಫೀಲ್ಡಿಗಿಳಿದ ಯದುವೀರ್ ಪತ್ನಿ ತ್ರಿಷಿಕಾ
ಮೈಸೂರು, ಏಪ್ರಿಲ್ 21:ಯದುವಂಶದ ಸೊಸೆ ತ್ರಿಷಿಕಾ ಕುಮಾರಿ ಸಿಂಗ್ ಇಂದು ಭಾನುವಾರ ಬೆಳಗ್ಗೆ ಬ್ಯಾಟ್, ಬಾಲು ಹಿಡಿದು ಕ್ರಿಕೆಟ್ ಆಡಿದರು.ಅರೆ, ಇದೇನು ಎಂದು ಅಚ್ಚರಿಪಡಬೇಡಿ.
ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆನಪಿನಾರ್ಥ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಬ್ಯಾಟಿಂಗ್ ಮಾಡುವ ಮೂಲ ತ್ರಿಷಿಕಾ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಅರಸು ಮಂಡಳಿ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ತ್ರಿಷಿಕಾ ಅವರು ಕ್ರಿಕೆಟ್ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಖುಷಿಪಟ್ಟರು.
ಹಾಗೆಯೇ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಸ್ಫರ್ಧಾಳುಗಳು, ತಂಡಗಳಿಗೆ ಶುಭ ಹಾರೈಸಿದರು. ಇವರ ಪ್ರೋತ್ಸಾಹಕ್ಕೆ ಆಟಗಾರರು ಇದೀಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತ್ರಿಷಿಕಾ ಅವರು ಬ್ಯಾಟಿಂಗ್ ಮಾಡಿದ ದೃಶ್ಯವನ್ನು ಸ್ಥಳದಲ್ಲಿದ್ದವರು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ.

ಸದ್ಯ ರಾಣಿ ತ್ರಿಷಿಕಾ ಕುಮಾರಿಯವರು ಬ್ಯಾಟ್ ಬೀಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.












Click it and Unblock the Notifications