ಆತ್ಮಹತ್ಯೆ ಮಾಡಿಕೊಂಡಿದ್ದ ಗಂಗಾಧರ್ ಮಗಳ ನೆರವಿಗೆ ಬಂದ ಪ್ರಥಮ್!
ಮೈಸೂರಿನ ಕುಟುಂಬಕ್ಕೆ ಧನ ಸಹಾಯ ನೀಡಿದ ಬಿಗ್ ಬಾಸ್ ರಿಯಾಲಿಟಿ ಶೋ ವಿನ್ನರ್ ಪ್ರಥಮ್. ಮಗಳ ಕಾಲೇಜು ಶುಲ್ಕ ಭರಿಸಲಾಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಗಂಗಾಧರ್.
ಬೆಂಗಳೂರು, ಜೂನ್ 24: ಮಗಳ ವಿದ್ಯಾಭ್ಯಾಸದ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ಬೃಂದಾವನ ಬಡಾವಣೆಯ ಗಂಗಾಧರ್ ಅವರ ಮನೆಗೆ 'ಬಿಗ್ ಬಾಸ್ ರಿಯಾಲಿಟಿ ಶೋ'ನ ವಿಜೇತ ಪ್ರಥಮ್ ಭೇಟಿ ನೀಡಿ ಕುಟುಂಬದವರಿಗೆ ಸ್ವಾಂತನ ಹೇಳಿದರು.
ಗಂಗಾಧರ್ ಅವರ ಪುತ್ರಿ ಸ್ನೇಹಾ ಅವರಿಗೆ ಸಮಾಧಾನ ಹೇಳಿದ ಪ್ರಥಮ್, ಆಕೆ ವ್ಯಾಸಂಗ ಪೂರ್ಣಗೊಳಿಸಲು ನೆರವಾಗುವಂತೆ 25 ಸಾವಿರ ರೂ.ನ ಚೆಕ್ ವಿತರಿಸಿದರಲ್ಲದೆ, ಮುಂದಿನ ವ್ಯಾಸಂಗಕ್ಕೂ ಧನ ಸಹಾಯ ಮಾಡುವ ಭರವಸೆ ನೀಡಿದರು. ಸ್ನೇಹ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.

ಸ್ನೇಹಾ ಅವರ ಅಂತಿಮ ವರ್ಷದ ಬಿ.ಎಸ್ಸಿ.ಯ ಶುಲ್ಕವನ್ನು ಕಟ್ಟಲು ನಿಗದಿಗೊಳಿಸಲಾಗಿದ್ದ ಕೊನೆಯ ದಿನವರೆಗೂ ಹಣ ಹೊಂದಿಸಲಾಗದ ಅಸಹಾಯಕ ಪರಿಸ್ಥಿತಿಯಿಂದಾಗಿ ಮನನೊಂದಿದ್ದ ಗಂಗಾಧರ್, ಜೂನ್ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.












Click it and Unblock the Notifications