ಬಿಎಸ್ ವೈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದ ಪ್ರತಾಪ್ ಸಿಂಹ

Recommended Video

      ಬಿಎಸ್ ವೈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ ಎಂದ ಪ್ರತಾಪ್ ಸಿಂಹ | Oneindia Kannada

      ಮೈಸೂರು, ಫೆಬ್ರವರಿ 28:ಉಗ್ರರ ಮೇಲೆ ಪ್ರತಿದಾಳಿಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗುತ್ತದೆ ಎಂಬ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ವಿಚಾರವನ್ನು
      ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.

      ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ.ಉಗ್ರರ ಮೇಲೆ ಪ್ರತಿದಾಳಿಗೆ ಗಡಿ ನಿಯಂತ್ರಣ ರೇಖೆ ದಾಟಲು 1971 ರ ನಂತರ ಯಾವ ಪ್ರಧಾನಿಯೂ ಒಪ್ಪಿರಲಿಲ್ಲ.ಮೋದಿ ಅಂತಹ ಧೈರ್ಯ ತೋರಿದ್ದಾರೆ.ಇಂತಹ ಧೈರ್ಯವಂತ ಪ್ರಧಾನಿ ಜತೆ ದೇಶ ನಿಲ್ಲುತ್ತೆ, ಹೀಗಾಗಿ ಸೀಟು ಹೆಚ್ಚಾಗುತ್ತೆ ಎನ್ನುವ ಅರ್ಥದಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎಂದು ಉತ್ತರಿಸಿದ್ದಾರೆ.

      Pratap Simha defended former CM BS Yeddyurappas statement

      ಇದರಲ್ಲಿ ಯಾವುದೇ ತಪ್ಪಿಲ್ಲ, ತಪ್ಪಾಗಿ ಅರ್ಥೈಸಲಾಗುತ್ತಿದೆ ಅಷ್ಟೇ. ನಮಗೆ ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ.ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಚಾರದಲ್ಲಿ ಬಾಯಿಗೆ ಬಂದ ಹಾಗೇ ಮಾತಾಡಿರುವುದು ಸರಿಯಲ್ಲ. ಹೀಗೆ ಮಾತಾಡಿ ಮಾತಾಡಿಯೇ ಅವರು ಕೆಟ್ಟರು. ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+