• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಗ್ಮೋರೆ ಶ್ರೀರಾಮ ಸೇನೆಯ ಕಾರ್ಯಕರ್ತನಲ್ಲ: ಪ್ರಮೋದ್ ಮುತಾಲಿಕ್ ಸಂದರ್ಶನ

By ಯಶಸ್ವಿನಿ ಎಂ.ಕೆ
|

ಮೈಸೂರು, ಜೂನ್ 18 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಬಂಧಿತನಾಗಿದ್ದಾನೆ. ಆದರೆ ಈತ ಶ್ರೀರಾಮ ಸೇನೆಯ ಕಾರ್ಯಕರ್ತ ಎಂಬುದನ್ನು ಸ್ವತಃ ಶ್ರೀ ರಾಮಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಅಲ್ಲಗಳೆದಿದ್ದಾರೆ.

ಪರಶುರಾಮ್ ವಾಗ್ಮೋರೆ ನಮ್ಮ ಶ್ರೀರಾಮ ಸೇನೆಯ ಕಾರ್ಯಕರ್ತನೇ ಅಲ್ಲ ಎಂಬ ಹೇಳಿಕೆ ಕೊಟ್ಟಿದ್ದು, ಈ ಪ್ರಕರಣದ ಕುರಿತು ಒನ್ ಇಂಡಿಯಾಗೆ ಪ್ರಮೋದ್ ಮುತಾಲಿಕ್ ನೀಡಿರುವ ಸಂದರ್ಶನದ ವಿವರ ಇಲ್ಲಿದೆ ನೋಡಿ...

ಪ್ರಶ್ನೆ: ಪರಶುರಾಮ್ ವಾಗ್ಮೋರೆ ನಿಮ್ಮ ಸಂಘಟನೆಯ ನೇತೃತ್ವ ವಹಿಸಿದ್ದನೇ ?

ಪ್ರಶ್ನೆ: ಪರಶುರಾಮ್ ವಾಗ್ಮೋರೆ ನಿಮ್ಮ ಸಂಘಟನೆಯ ನೇತೃತ್ವ ವಹಿಸಿದ್ದನೇ ?

ಪ್ರಮೋದ್ ಮುತಾಲಿಕ್: ಅವನಿಗೂ, ಶ್ರೀರಾಮ ಸೇನೆಗೂ ಯಾವುದೇ ಸಂಬಂಧವಿಲ್ಲ. ಅವನು ನಮ್ಮ ಸೇನೆಯ ಸಂಘಟಕನೂ ಅಲ್ಲ, ಕಾರ್ಯಕರ್ತನೂ ಅಲ್ಲ. ಗೌರಿ ಲಂಕೇಶ್ ರೊಂದಿಗೆ ನಮ್ಮದು ಇದ್ದದ್ದು ವೈಚಾರಿಕ ಸಂಘರ್ಷವೇ ಹೊರತು, ಶಾರೀರಿಕವಾಗಿ ಕೊಲ್ಲುವ ಹೇಯಕೃತ್ಯವಲ್ಲ.

ಶ್ರೀರಾಮ ಸೇನೆ ಅಂದಿಗೂ, ಇಂದಿಗೂ ಗೌರಿ ಹತ್ಯೆಯನ್ನು ಖಂಡಿಸಿತ್ತು. ಹಾಗಾಗಿ ಗೌರಿ ಹತ್ಯೆಯಲ್ಲಿ ನಮ್ಮ ಸಂಘಟನೆಯ ಪಾತ್ರ ಎಳ್ಳಷ್ಟೂ ಇಲ್ಲ. ಇದು ಸ್ಪಷ್ಟ.

ಪರಶುರಾಮ್ ವಾಗ್ಮೋರೆಯ ಕುರಿತಾಗಿ ಎಸ್ ಐಟಿ ತಂಡದವರು ಇಲ್ಲಿಯವರೆಗೂ ಹಿಂದೂ ಸಂಘಟನೆಯ ಕಾರ್ಯಕರ್ತ ಎಂದು ಎಲ್ಲಿಯೂ ಕೂಡ ಸ್ಪಷ್ಟಪಡಿಸಿದಲ್ಲ. ಸಾಮಾಜಿಕ ಜಾಲತಾಣದಲ್ಲಿಯೇ ಇದರ ಕುರಿತಾಗಿ ಟ್ರೆಂಡ್ ಕ್ರಿಯೇಟ್ ಆಗಿ, ನಮಗೆ ಆಗದವರು ಈ ತೆರನಾದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿದ್ದ ಮಹೇಶ್ ಚಂದ್ರ ಗುರು ಸ್ಫೋಟಕ ಸಂದರ್ಶನ

ಪ್ರಶ್ನೆ: ವಾಗ್ಮೋರೆ ನಿಮ್ಮೊಂದಿಗೆ ತೆಗೆಸಿಕೊಂಡಿರುವ ಫೋಟೋ ಬಗ್ಗೆ ಏನ್ ಹೇಳ್ತಿರಾ?

ಪ್ರಶ್ನೆ: ವಾಗ್ಮೋರೆ ನಿಮ್ಮೊಂದಿಗೆ ತೆಗೆಸಿಕೊಂಡಿರುವ ಫೋಟೋ ಬಗ್ಗೆ ಏನ್ ಹೇಳ್ತಿರಾ?

ಪ್ರಮೋದ್ ಮುತಾಲಿಕ್: ನಾನೊಬ್ಬ ಹಿಂದೂ ಲೀಡರ್. ನನಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಎಲ್ಲರಿಗೂ ಫೋಟೋಗೆ ಪೋಸ್ ಕೊಡಬೇಕಾಗಿರುವುದು ನಾಯಕ ಪಟ್ಟಕ್ಕೇರಿರುವ ನನ್ನ ಕರ್ತವ್ಯ ಕೂಡ. ಹಾಗೆಂದ ಮಾತ್ರಕ್ಕೆ ಅವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಗೆ ಹೇಳುತ್ತಿರಿ.

ಛೆ, ಇದೆಂಥ ಮಾತು! ಗೌರಿಯನ್ನು ನಾಯಿಗೆ ಹೋಲಿಸಿದರೇ ಮುತಾಲಿಕ್?!

ಪ್ರಶ್ನೆ: ಪರಶುರಾಮ್ ವಾಗ್ಮೋರೆ ಕುಟುಂಬಕ್ಕೆ ಸಹಾಯ ಹಸ್ತ ಚಾಚುವಂತೆ ಕೇಳಿರುವುದು?

ಪ್ರಶ್ನೆ: ಪರಶುರಾಮ್ ವಾಗ್ಮೋರೆ ಕುಟುಂಬಕ್ಕೆ ಸಹಾಯ ಹಸ್ತ ಚಾಚುವಂತೆ ಕೇಳಿರುವುದು?

ಪ್ರಮೋದ್ ಮುತಾಲಿಕ್: ನಮ್ಮ ಸಂಘಟನೆ ಯಾರಿಗೂ ಸಹಾಯ ಹಸ್ತ ಕೇಳಿಲ್ಲ. ಸಹಾಯ ಹಸ್ತ ಚಾಚುವಂತೆ ಕೇಳಿರುವುದು ಪರಶುರಾಮ್ ವಾಗ್ಮೋರೆಯ ಸ್ನೇಹಿತರು. ಅವರು ಸಂಘಟನೆಯ ಹೆಸರು ಹೇಳಿಕೊಂಡು ಸಹಾಯ ಕೇಳಿಲ್ಲವಲ್ಲ. ಅವರ ದಯನೀಯ ಸ್ಥಿತಿಯನ್ನು ನೋಡಿಕೊಂಡು ಹೆಲ್ಪ ಮಾಡಿ ಎಂದು ಕೇಳಿಕೊಂಡಿದ್ದಾರೆ ಅಷ್ಟೇ.

 ಪ್ರಶ್ನೆ: ವಾಗ್ಮೋರೆ ತಪ್ಪಿತಸ್ಥ ಎಂದು ಸಾಬೀತಾದರೇ ನಿಮ್ಮ ನಿಲುವೇನು ?

ಪ್ರಶ್ನೆ: ವಾಗ್ಮೋರೆ ತಪ್ಪಿತಸ್ಥ ಎಂದು ಸಾಬೀತಾದರೇ ನಿಮ್ಮ ನಿಲುವೇನು ?

ಪ್ರಮೋದ್ ಮುತಾಲಿಕ್: ನಾನು ಈ ಕುರಿತಾಗಿ ಏನು ಹೇಳಲಾರೆ. ಈ ಹಿಂದೆ ಬೇಡದ ಅದೆಷ್ಟೋ ಕೇಸುಗಳಲ್ಲಿ ಹಿಂದೂ ನಾಯಕರನ್ನು ಜೈಲಿಗಟ್ಟಿ ಮಜಾ ತೆಗೆದುಕೊಂಡಿದ್ದ ಕಾಂಗ್ರೆಸ್ಸಿಗರು ಇಂದು ಅದೇ ಕೆಲಸ ಮಾಡುತ್ತಿದ್ದಾರೆ. ಅವನನ್ನು ಬಂಧಿಸಿ ಎಷ್ಟೋ ದಿನ ಕೇಸನ್ನು ತಳ್ಳಿ ನಂತರ ನಿರಪರಾಧಿ ಎಂದು ಹೊರಗಟ್ಟುವುದನ್ನು ನಾನು ನೋಡುವುದು ಖಚಿತ.
ಉದಾಹರಣೆಗೆ ನಾನೇ ಪಬ್ ದಾಳಿ ವಿಚಾರದಲ್ಲಿ ಕೋರ್ಟ್ ಗೆ ಅಲೆದಿಲ್ಲವೇ ಹೇಳಿ ?

 ಪ್ರಶ್ನೆ: ಹಿಂದೂ ಸಂಘಟನೆಗಳು ಗೌರಿ ಹತ್ಯೆಗೆ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ ?

ಪ್ರಶ್ನೆ: ಹಿಂದೂ ಸಂಘಟನೆಗಳು ಗೌರಿ ಹತ್ಯೆಗೆ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ ?

ಪ್ರಮೋದ್ ಮುತಾಲಿಕ್: ನಮ್ಮ ಕಾಂಗ್ರೆಸ್ ಹಾಗೂ ಕೆಲವು ಬುದ್ದಿ ಜೀವಿಗಳಿಗೆ ಗೌರಿ ಹಂತಕರು, ಕೊಲೆಗಡುಕರು ಬೇಕಾಗಿಲ್ಲ. ಬದಲಾಗಿ ಅವರಿಗೆ ಹಿಂದೂ ನಾಯಕರೇ ಟಾರ್ಗೆಟ್ ಆಗಿ ಪರಿಣಮಿಸಿದ್ದಾರೆ. ಅವರದ್ದು ಆಪಾದನೆಯಷ್ಟೇ. ಬೇಡದ ಸುಳ್ಳುಗಳನ್ನು ಹೇಳಿ ತನಿಖೆಯ ಮೂಲ ಹಾದಿಯನ್ನೇ ಇಂತಹವರು ತಪ್ಪಿಸಿದ್ದಾರೆ.
ಗೌರಿ ಲಂಕೇಶ್ ಅವರು ಹೆಚ್ಚು ಸಂಪರ್ಕ ಹೊಂದಿದ್ದು ನಕ್ಸಲೈಟ್ ಗಳ ಜೊತೆ, ಕನ್ನಯ್ಯರವರಂತಹ ದೇಶದ್ರೋಹಿಗಳ ಜೊತೆ. ಅವರ ಬಗ್ಗೆ ವಿಚಾರಣೆಯೇ ನಡೆಯುತ್ತಿಲ್ಲ ಏಕೆ ?

 ಪ್ರಶ್ನೆ: ಎಸ್ ಐಟಿ ತನಿಖೆ ಬಗ್ಗೆ ನಿಮಗೆ ಅನುಮಾನವೇ ?

ಪ್ರಶ್ನೆ: ಎಸ್ ಐಟಿ ತನಿಖೆ ಬಗ್ಗೆ ನಿಮಗೆ ಅನುಮಾನವೇ ?

ಪ್ರಮೋದ್ ಮುತಾಲಿಕ್: ಹೌದು, ಅನುಮಾನ ಖಂಡಿತ ಇದೆ. ಆದರೆ ಎಸ್ ಐಟಿ ಬಗ್ಗೆ ಅಲ್ಲ. ಅದರ ಹಿಂದಿನ ಕಾಣದ ಕೈಗಳ ಬಗ್ಗೆ. ಎಲ್ಲಿಯೂ ತನಿಖೆಯ ಜಾಡು ಬಿಡದವರು. ಏಕಾಏಕಿ ಹಿಂದು ಸಂಘಟಕರು, ಕಾರ್ಯಕರ್ತರು ಎನ್ನುವುದನ್ನು ಹೇಗೆ ಹೊರ ಬಿಟ್ಟರು. ಎಲ್ಲಿಯೂ ನಕ್ಸಲೈಟ್ ರನ್ನು ವಿಚಾರಣೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಿಲ್ಲ.
ಅವರ ಜೊತೆಗಾರರನ್ನು ತನಿಖೆ ಮಾಡುವ ಕುರಿತು ಬಹಿರಂಗಗೊಳಿಸಿಲ್ಲ. ಇದು ಹೇಗೆ ಸಾಧ್ಯವಾಯಿತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮೈಸೂರು ಸುದ್ದಿಗಳುView All

English summary
Pramod Muthalik Said Parashuram Wagmore is not the activist of our Sri Rama Sena. Here is an exclusive interview of Sri Rama Sena leader Pramod Muthalik.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more