ಸಿಎಎ ಪರವಾಗಿ ಮೈಸೂರಿನಲ್ಲಿ ನಡೆಯಿತು ಪೋಸ್ಟ್ ಕಾರ್ಡ್ ಅಭಿಯಾನ

ಮೈಸೂರು, ಜನವರಿ 13: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಪೌರತ್ವ ಕಾಯ್ದೆ-2019 ವಿಷಯವಾಗಿ ಮುಸ್ಲಿಮರ ಮನಸ್ಸಿನಲ್ಲಿರುವ ಆತಂಕವನ್ನು ಹೋಗಲಾಡಿಸುವ ದೃಷ್ಟಿಯಿಂದ ಪೋಸ್ಟ್ ಕಾರ್ಡ್ ಅಭಿಯಾನವನ್ನು ವಿವೇಕಾನಂದ ವೃತ್ತದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ. ರಾಮರಾಸ್ ಚಾಲನೆ ನೀಡಿದರು. ಕೃಷ್ಣರಾಜ ಕ್ಷೇತ್ರದ 270 ಬೂತ್ ಗಳಲ್ಲೂ ಪೋಸ್ಟ್ ಕಾರ್ಡ್ ಅಭಿಯಾನವನ್ನು ಆಯೋಜಿಸಲಾಗಿದ್ದು, ಒಂದು ಲಕ್ಷ ಅಂಚೆ ಪತ್ರಗಳನ್ನು ಸಾರ್ವಜನಿಕರಿಂದ ಸಿಎಎ ಗೆ ಬೆಂಬಲ ವ್ಯಕ್ತಪಡಿಸಿ ಹಾಕಲಾಯಿತು.

ಎಲ್ಲರಿಗೂ, ಪೌರತ್ವ ತಿದ್ದುಪಡಿ ಕಾಯ್ದೆಯ ತಿದುಪ್ದಡಿಯಿಂದ ಯಾವುದೇ ಧರ್ಮದ, ವಿಶೇಷವಾಗಿ ಮುಸಲ್ಮಾನರ ಪೌರತ್ವಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲವೆಂದು ಶಾಸಕರು ತಿಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯ ಹಲವು ಮುಖ್ಯವಾದ ವಿಚಾರಗಳನ್ನು ನೆರೆದಿದ್ದ ಎಲ್ಲರಿಗೂ ತಿಳಿಸಿಕೊಟ್ಟರು.

Postcard Awareness Programme In Mysuru

ಮುಸಲ್ಮಾನರಲ್ಲಿ ವಿನಾಕಾರಣ ಹಲವು ಗೊಂದಲಗಳನ್ನು ಮೂಡಿಸಿ ಪ್ರಚೋದನೆ ಮಾಡಿ ರಾಜಕಾರಣವನ್ನಾಗಿಸಿ ಗಲಭೆ ಉಂಟುಮಾಡಲು ಪ್ರಯತ್ನಿಸುತ್ತಿರುವವರ ಮನಸ್ಥಿತಿಯನ್ನು ಖಂಡಿಸಿ ಇಂಥವರ ಗೊಂದಲ ಮತ್ತು ಪ್ರಚೋದನೆಗಳಿಗೆ ಒಳಗಾಗದೇ ಭಾವೈಕ್ಯದಿಂದ ಬದುಕು ನಡೆಸೋಣ ಎಂದು ಕರೆಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+