ಮೈಸೂರಿನಲ್ಲಿ ಸಲೂನ್ ಮಾಲೀಕನ ಕೊಲೆ; ಏಳು ಜನರ ಬಂಧನ

ಮೈಸೂರು, ಜೂನ್ 22: ಯುವ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಪಡೆದಿದ್ದ 7 ಜನ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ತಿಂಗಳ 17ನೇ ತಾರೀಖು ಬೆಳಗ್ಗೆ 10:30ಕ್ಕೆ ಯುವ ಉದ್ಯಮಿ ಅಶ್ರಿತ್ ಎಂಬ ವ್ಯಕ್ತಿ ವಿಜಯನಗರದ 4ನೇ ಹಂತದಲ್ಲಿ ಟೀ ಕುಡಿಯಲು ಬೈಕ್​ನಲ್ಲಿ ಬರುತ್ತಿದ್ದಾಗ ಆತನ ಬೈಕಿಗೆ ಡಿಕ್ಕಿ ಹೊಡೆದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಿದ್ದರು.

ಕೊಲೆಯಾದ ಅಶ್ರಿತ್ ಈ ಹಿಂದೆ ರಾಜಾರಾಮ್​​ ಎಂಬ ವ್ಯಕ್ತಿಯ ಬಳಿ ಹೇರ್ ಮತ್ತು ಸ್ಕಿನ್ ಸಲೂನ್​ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ವೈಷಮ್ಯ ಉಂಟಾದ ಕಾರಣ ಅಶ್ರಿತ್ ಬೇರೆ ಸಲೂನ್ ತೆರೆದಿದ್ದ. ಇದರಿಂದ ಆಕ್ರೋಶಿತನಾದ ರಾಜಾರಾಮ್ ಒಳಗೊಳಗೇ ದ್ವೇಷ ಕಾರುತ್ತಿದ್ದ. ನಂತರ ಅಶ್ರಿತ್​​ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ.

 Police Arrested 7 In Salon Owner Murder Case

ಹಂತಕರು ಜೂನ್ 17ರಂದು ಅಶ್ರಿತ್​​ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಅದರಲ್ಲಿ ಪ್ರಮುಖ ಆರೋಪಿಯಾಗಿರುವ ರಾಜಾರಾಮ್​ ತಲೆ ಮರೆಸಿಕೊಂಡಿದ್ದು, ಉಳಿದ ಹಂತಕರಾದ ನವೀನ್, ಅಶೋಕ್, ಪ್ರಶಾಂತ್, ಜಾನಿ, ದಿನೇಶ್, ಮಹೇಶ್ ಮತ್ತು ಮುಬಾರಕ್ ಎಂಬ 7 ಬೆಂಗಳೂರು ಮೂಲದ ಸುಪಾರಿ ಹಂತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್, 1 ಕಾರ್, 1 ಚಾಕುವನ್ನು ವಶಪಡಿಸಕೊಳ್ಳಲಾಗಿದೆ. ಪೊಲೀಸರು ಪ್ರಮುಖ ಆರೋಪಿ, ಸುಪಾರಿ ನೀಡಿದ ರಾಜಾರಾಮ್​​ ಪತ್ತೆಗಾಗಿ ಬಲೆ ಬೀಸಿ, ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+