CET Exam 2025: ಮೈಸೂರಿನಲ್ಲಿ ಸಿಇಟಿ ಪರೀಕ್ಷೆಗೆ ಪೊಲೀಸ್ ಕಣ್ಗಾವಲು
ಮೈಸೂರು, ಏಪ್ರಿಲ್ 12: ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಸುಸೂತ್ರವಾಗಿ ಪರೀಕ್ಷೆ ಬರೆಯುವಂತೆ ಸಿದ್ಧತೆಗಳನ್ನು ನಗರದ 38 ಪರೀಕ್ಷಾ ಕೇಂದ್ರಗಳಲ್ಲಿ ಮಾಡಿಕೊಳ್ಳಲಾಗುತ್ತಿದೆ. ನಗರ, ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆಯಲಿದ್ದಾರೆ.
ಸಿಇಟಿ ಪರೀಕ್ಷೆಯು ಏಪ್ರಿಲ್ 16 ಮತ್ತು 17ರಂದು ನಡೆಯಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಬೆಂಗಳೂರು ಕನಾಟಕ ಪರೀಕ್ಷಾ ಪ್ರಾಧಿಕಾರ ಮಾಡಿದ್ದು, ಮೈಸೂರು ನಗರದಲ್ಲಿ ಹಲವು ಕಾಲೇಜುಗಳಲ್ಲಿ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಟೆರಿಷಿಯನ್ ಪದವಿ ಪೂರ್ವ ಕಾಲೇಜು, ಸಿದ್ದಾರ್ಥನಗರ, ಸೆಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಬನ್ನಿಮಂಟಪ, ಸೆಂಟ್ ಫಿಲೋಮಿನಾ ಪದವಿ ಕಾಲೇಜು, ಬನ್ನಿಮಂಟಪ, ವಿಭಜಿತ ಮಹಾರಾಜ ಸರ್ಕಾರಿ ಪದವಿ ಪೂರ್ವ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪೀಪಲ್ಸ್ ಪಾರ್ಕ್, ಡಿ.ಬನುಮಯ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮೈಸೂರಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೆ, ದೇವರಾಜ ಬಾಲಿಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ಜಾಕಿ ಕ್ವಾರ್ಟರ್ಸ್, ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಎನ್.ಎಸ್.ರಸ್ತೆ, ಸದ್ವಿದ್ಯಾ ಪದವಿ ಪೂರ್ವ ಕಾಲೇಜು, ನಾರಾಯಣಶಾಸ್ತ್ರಿ ರಸ್ತೆ, ಮರಿಮಲಪ್ಪ ಪದವಿ ಪದವಿ ಪೂರ್ವ ಕಾಲೇಜು, ಮೈಸೂರು, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೆಎಲ್ಬಿರಸ್ತೆ, ಎಂ.ಎಂ.ಕೆ ಅಂಡ್ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು
ಕೃಷ್ಣಮೂರ್ತಿಪುರಂ, ಶಾರದ ವಿಲಾಸ ಪದವಿ ಪೂರ್ವ ಕಾಲೇಜು, ಕೃಷ್ಣಮೂರ್ತಿಪುರಂ, ಶಾರದ ವಿಲಾಸ ಪದವಿ ಕಾಲೇಜು, ಕೃಷ್ಣಮೂರ್ತಿಪುರಂ, ಗೋಪಾಲಸ್ವಾಮಿ ಶಿಶು ವಿಹಾರ ಸ್ವತಂತ್ರ ಪದವಿ ಪೂರ್ವ ಕಾಲೇಜು, ಶ್ರೀ ಜಯಚಾಮರಾಜೇಂದ್ರ ಪಿ.ಯು ಕಾಲೇಜು ವಿಶ್ವೇಶ್ವರ ನಗರ ಮೈಸೂರು, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು, ಜೆ.ಪಿ.ನಗರ ಮೈಸೂರು.

ಬೇಸ್ ಪದವಿ ಪೂರ್ವ ಕಾಲೇಜು, ಹೆಚ್.ಡಿ.ಕೋಟೆ ರಸ್ತೆ, ಮೈಸೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ರಾಮಕೃಷ್ಣ ವಿದ್ಯಾಕೇಂದ್ರ ಕ್ಯಾಂಪ್, ಪಿ.ಯು ಕಾಲೇಜು, ವಿದ್ಯಾವರ್ಧಕ ಸಂಘ, ಬಿ.ಎಂ.ಶ್ರೀ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಅನಿಕೇತನ ರಸ್ತೆ, ಕುವೆಂಪುನಗರ, ಶ್ರೀ ಕಾವೇರಿ ಪದವಿಪೂರ್ವ ಕಾಲೇಜು, ಕುವೆಂಪುನಗರ ಬಿ-ಬ್ಲಾಕ್, ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಕುವೆಂಪುನಗರ, ವಿಜಯ ವಿಠಲ ಪದವಿ ಪೂರ್ವ ಕಾಲೇಜು, ಸರಸ್ವತಿಪುರಂ, ಟಿಟಿಎಲ್ ಸ್ವತಂತ್ರ ಪಿ.ಯು ಕಾಲೇಜು, ಸರಸ್ವತಿ ಪುರಂ.
ಜೆ.ಎಸ್.ಎಸ್. ಬಾಲಕಿಯರ ಪದವಿ ಪೂರ್ವ ಕಾಲೇಜು, ಎಸ್.ಬಿ.ಆರ್.ಆರ್. ಮಹಾಜನ ಪದವಿ ಪೂರ್ವ ಕಾಲೇಜು, ಮಹಾಜನ ಪಬ್ಲಿಕ್ ಸ್ಕೂಲ್, ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜು, ಜಯಲಕ್ಷ್ಮೀಪುರಂ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಎಂ.ಜಿ.ಕೊಪ್ಪಲು, ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪಿ.ಯು ಕಾಲೇಜು ವಿಜಯನಗರ 2ನೇ ಹಂತ, ಅಧ್ಯಯನ ಪಿ.ಯು ಕಾಲೇಜು, ತ್ರಿವೇಣಿ ಸಕಲ್, ಬಸುದೇವ ಸೋಮಾನಿ ಕಾಲೇಜು, ವಿಶ್ವಮಾನವ ಜೋಡಿ ರಸ್ತೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಒಂಟಿಕೊಪ್ಪಲು, ಮಹಾರಾಜ ಕಾಲೇಜು (ಯುನಿವರ್ಸಿಟಿ ಆಫ್ ಮೈಸೂರು) ಜೆಎಲ್ಬಿ ರಸ್ತೆ, ಜೆ.ಎಸ್.ಎಸ್ ಬಾಲಕಿಯರ ಪ್ರೌಢಶಾಲೆ, ಸರಸ್ವತಿಪುರಂ ಇಲ್ಲಿ ಪರೀಕ್ಷೆಯು ನಡೆಯಲಿದೆ.
ಪರೀಕ್ಷೆ ನಡೆಯಲಿರುವ ಹಿನ್ನಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದ್ದು, ಕಾಲೇಜು ವ್ಯಾಪ್ತಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರು ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಹಾಗೂ ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್, ಬ್ರೌಸಿಂಗ್ ಸೆಂಟರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶಿಸಲಾಗಿದೆ. ಜೊತೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಸೆಕ್ಷನ್ 163 ರೀತ್ಯ ಪರೀಕ್ಷಾ ಕೇಂದ್ರದ ಸುತ್ತಲೂ ಇನ್ನೂರು ಮೀಟರ್ ವ್ಯಾಪ್ತಿಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.












Click it and Unblock the Notifications