ಅತ್ಯಾಚಾರವೆಸಗಿ ಪೆರೋಲ್ ಮೇಲೆ ಹೊರಗೆ ಬಂದಿದ್ದ ವ್ಯಕ್ತಿ ಸಾವು

ಮೈಸೂರು, ಜನವರಿ 28: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಪೋಕ್ಸೊ ಪ್ರಕರಣದಡಿ ಜೀವಾವಧಿ ಶಿಕ್ಷೆಗೊಳಗಾಗಿ ಈಚೆಗೆ ಪೆರೋಲ್ ಮೇಲೆ ಹೊರಬಂದಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

Recommended Video

      Mysuru Gets Its First Ever Muslim Woman Mayor | Mysore | Mayor | Tasneem

      ಮೈಸೂರಿನ ವಾಲೆ ಮಹೇಶ (36) ಎಂಬಾತನೇ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಶಿಕ್ಷೆಗೊಳಗಾದವ. ಅಪ್ರಾಪ್ತೆಗೆ ಹೆಣ್ಣು ಮಗು ಜನಿಸಿತ್ತು. 2017ರ ಡಿಸೆಂಬರ್ 21ರಂದು ಮೈಸೂರು ನ್ಯಾಯಾಲಯವು ಮಹೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೈಲು ಶಿಕ್ಷೆ ಅನುಭವಿಸುತ್ತಿದ್ದ ಈತ ಕರುಳು ಬೇನೆಯಿಂದ ಬಳಲುತ್ತಿದ್ದ. ಆದ್ದರಿಂದ ಚಿಕಿತ್ಸೆಗೆಂದು ಪೆರೋಲ್ ಮೇಲೆ ಇತ್ತೀಚೆಗೆ ಹೊರ ಬಂದಿದ್ದ.

      ಫೆಬ್ರುವರಿ ಮೊದಲ ವಾರದಲ್ಲೇ ಮತ್ತೆ ಜೈಲಿಗೆ ಹೋಗಬೇಕಿತ್ತು. ಆದರೆ ಚಿಕಿತ್ಸೆ ಫಲಿಸದೇ ತನ್ನ ಮನೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಆತನ ಕೋರಿಕೆಯಂತೆ ಸಂತ್ರಸ್ತ ಅಪ್ರಾಪ್ತೆಗೆ ಜನಿಸಿದ್ದ ಮಗುವಿಗೆ ಮಹೇಶನ ಮೃತದೇಹದ ಅಂತಿಮ ದರ್ಶನ ಮಾಡಿಸಲಾಯಿತು. ಪೆರೋಲ್ ಮೇಲೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ತಾನು ಸತ್ತರೆ ಆ ಮಗುವನ್ನು ಕರೆತಂದು ತನ್ನ ಮುಖ ದರ್ಶನ ಮಾಡಿಸಿ ನಂತರವೇ ಅಂತ್ಯಕ್ರಿಯೆ ಮಾಡಿ ಎಂದು ತನ್ನ ತಂದೆ ಮತ್ತು ತಂಗಿಯ ಬಳಿ ಕೇಳಿಕೊಂಡಿದ್ದ ಎನ್ನಲಾಗಿದೆ.

      Person Accused In Rape Case Died In Mysuru

      ಅದರಂತೆ ಆತನ ತಂದೆ ಮತ್ತು ತಂಗಿ ಬಾಲಕಿಯ ಅಜ್ಜಿಗೆ ವಿಷಯ ತಿಳಿಸಿ ಮಗುವನ್ನು ಕರೆತರುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಆಕೆ ತನ್ನ ಮೊಮ್ಮಗಳನ್ನು ಕರೆದೊಯ್ದು ಮಹೇಶನ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+