ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತಿ ಮೂಲಕ ಸಚಿವ ಸ್ಥಾನ ಕೇಳ್ಬೇಡಿ, ನಾ ಒಪ್ಪಲ್ಲ ಎಂದ ಪೇಜಾವರ ಶ್ರೀಗಳು

|
Google Oneindia Kannada News

ಮೈಸೂರು, ಆಗಸ್ಟ್ 27: "ಯಾವುದೇ ಕಾರಣಕ್ಕೂ ಜಾತಿಯನ್ನು ಆಧಾರವಾಗಿಟ್ಟುಕೊಂಡು ಸಚಿವ ಸ್ಥಾನ ಕೇಳುವುದು ತಪ್ಪು. ನಾನು ಈ ಕುರಿತಾಗಿ ಸರ್ಕಾರಕ್ಕೆ ಯಾವುದೇ ಒತ್ತಡ ಹೇರುವುದಿಲ್ಲ" ಎಂದು ಹೇಳಿದ್ದಾರೆ ಪೇಜಾವರ ಶ್ರೀಗಳು.

"ಹಿಂದೂಗಳು ಒಟ್ಟಿಗಿರೋಣ ಎಂದಿದ್ದೇ ತಪ್ಪಾ?" ಎಂಬಿ ಪಾಟೀಲ್ ಹೇಳಿಕೆಗೆ ಪೇಜಾವರ ಶ್ರೀ ಪ್ರತ್ಯುತ್ತರ

Recommended Video

ವೈಯಕ್ತಿಕ ನಿಂದನೆ ಮಾಡಿದ್ರೆ ಏನೂ ಪ್ರಯೋಜನವಿಲ್ಲ | Oneindia Kananda

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಪೇಜಾವರ ಶ್ರೀಗಳಿಗೆ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ತಾವು ಸರ್ಕಾರಕ್ಕೆ ಮನವಿ ಮಾಡಬೇಕೆಂದು ಆ.26ರ ಸೋಮವಾರ ಕೋರಿಕೊಂಡ ವೇಳೆ ಅವರು ಹೀಗೆ ತಿರಸ್ಕರಿಸಿದ್ದಾರೆ.

Pejawara shree reacts over minister post to community basis

"ಜಾತಿ ಆಧಾರದ ಮೇಲೆ ಸಚಿವ ಸ್ಥಾನ ಕೇಳುವುದು ತಪ್ಪು. ಇದರ ಬಗ್ಗೆ ನಾನು ಸರ್ಕಾರಕ್ಕೆ ಒತ್ತಡ ಹೇರುವುದಿಲ್ಲ. ನಾನು ಮಠಾಧೀಶ, ಯಾವುದೇ ಪಕ್ಷಕ್ಕೆ ಸೇರಿದವನಲ್ಲ" ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

Pejawara shree reacts over minister post to community basis

ಶಾಸಕ ರಾಮದಾಸ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬ್ರಾಹ್ಮಣ ಸಂಘದಿಂದ ರಾಮದಾಸ್ ಪರ ಮಾತನಾಡಿದ್ದು, ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಪೇಜಾವರ ಶ್ರೀಗಳ ಮೂಲಕ ಒತ್ತಡ ಹೇರಲು ಪ್ರಯತ್ನಿಸಲಾಗಿತ್ತು. ಮೈಸೂರು ನಗರ ಹಾಗೂ ಗ್ರಾಮಾಂತರ ಬ್ರಾಹ್ಮಣ ಸಂಘದಿಂದ ಪೇಜಾವರ ಶ್ರೀಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಶ್ರೀಗಳು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

English summary
Pejawara shree reacts over minister post to community basis. Shreegalu reacted that, Don’t ask minister post as a caste basis. I am a pontiff, I will not belong to any party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X