Pancharatna Rath Yatra: ಎಚ್.ಡಿ.ದೇವೇಗೌಡರ 100 ಕಿ.ಮೀ ರೋಡ್ ಶೋ ರದ್ದು
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿರುವ ಮಾರ್ಚ್ 26ರಂದು ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಕುಂಬಳಗೋಡಿನಿಂದ ಮೈಸೂರಿನವರೆಗೆ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಕಾರ್ಯಕ್ರಮವನ್ನು ನಾಲ್ಕು ಕಿ.ಮೀ.ಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.
ಮೈಸೂರು ಮಾರ್ಚ್ 20: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣಾ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ಮತದಾರರ ಮನ ಗೆಲ್ಲಲು ಭರ್ಜರಿ ತಯಾರಿ ನಡೆಸಿವೆ. ಈ ನಡುವೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸಿದ್ಧವಾಗಿದೆ.
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿರುವ ಮಾರ್ಚ್ 26ರಂದು ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಕುಂಬಳಗೋಡಿನಿಂದ ಮೈಸೂರಿನವರೆಗೆ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಕಾರ್ಯಕ್ರಮವನ್ನು ನಾಲ್ಕು ಕಿ.ಮೀ.ಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.

ವೈದ್ಯರ ಸಲಹೆ ಮೇರೆಗೆ ದೇವೇಗೌಡರ ರೋಡ್ ಶೋ ರದ್ದುಗೊಳಿಸಿರುವುದಾಗಿ ಜೆಡಿಎಸ್ ತಿಳಿಸಿದೆ. ರೋಡ್ ಶೋ ಬದಲಿಗೆ ಕೇವಲ ಸಮಾರೋಪ ಸಮಾರಂಭ ಮಾಡಲು ನಿರ್ಧರಿಸಲಾಗಿದೆ ಎಂದು ಪಕ್ಷ ಮಾಹಿತಿ ನೀಡಿದೆ. ಈ ಸಮಾರೋಪ ಸಮಾರಂಭದಲ್ಲಿ ಹೆಚ್.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ.
ರೋಡ್ ಶೋ ರದ್ದುಗೊಳಿಸಿರುವ ಬಗ್ಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ವೈದ್ಯರ ಸಲಹೆ ಮೇರೆಗೆ ನೂರು ಕಿಮೀ ರೋಡ್ ಶೋರದ್ದು ಮಾಡಲಾಗಿದೆ. ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ. ವೃದ್ಯರು ಈ ಸಮಯದಲ್ಲಿ ಇಷ್ಟು ದೊಡ್ಡ ರೋಡ್ ಶೋ ಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಮಾವೇಶ ಜಾಗದಲ್ಲಿ ಎರಡರಿಂದ ಮೂರು ಕಿ.ಮೀ ರೋಡ್ ಶೋ ಮಾಡ್ತೀವಿ ಅಷ್ಟೆ. ಮೈಸೂರಿನಲ್ಲಿ ನಿಗದಿಯಂತೆ ಸಮಾರಂಭ ಸಮಾರಂಭ ನಡೆಯುತ್ತದೆ ಎಂದು ಹೇಳಿದ್ದಾರೆ.
ಕುಂಬಳಗೋಡಿನಿಂದ ಮೈಸೂರಿನವರೆಗೆ ಸುಮಾರು ನೂರು ಕಿಮಿ ದೂರ ಬೃಹತ್ ರೋಡ್ ಶೋ ನಡೆಸುವ ಬಗ್ಗೆ ಈ ಹಿಂದೆ ಜೆಡಿಎಸ್ ಸಿರ್ಧಾರ ಕೈಗೊಂಡಿತ್ತು. ಆ ರೋಡ್ ಶೋದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗುವ ಯೋಜನೆ ಕೂಡ ಹಾಕಿಕೊಂಡಿತ್ತು.

ಪಂಚರತ್ನ ರಥಯಾತ್ರೆ
ರಾಜ್ಯಾದ್ಯಂತ ಕೈಗೊಂಡಿರುವ ಪಂಚರತ್ನ ಯೋಜನೆ ರಥಯಾತ್ರೆ ರೈತಾಪಿ ವರ್ಗಕ್ಕೆ ವರದಾನ ಎಂದು ಜೆಡಿಎಸ್ ಹೇಳುತ್ತದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಕ್ಷ, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ. ಇದಕ್ಕಾಗಿ ಪಂಚರತ್ನ ಯಾತ್ರೆ ಹೆಸರಿನಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದೆ.
'ಪಂಚರತ್ನ ರಥಯಾತ್ರೆ; ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ' ಹೆಸರಿನಲ್ಲಿ ಈ ರಥಯಾತ್ರೆ ಕೈಗೊಂಡಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ಬಿಂಬಿಸಲಾಗುತ್ತಿದೆ. ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ಕೂಡ ಈ ಐದು ಅಂಶಗಳೇ ಪ್ರಮುಖ ಯೋಜನೆಗಳಾಗಿರುತ್ತವೆ.
ನವೆಂಬರ್ 1ರಂದು ಮುಳಬಾಗಿಲು ಕ್ಷೇತ್ರದಲ್ಲಿ ರಥಯಾತ್ರೆ ಆರಂಭವಾಗಿ, ದಿನಕ್ಕೊಂದು ಕ್ಷೇತ್ರದಂತೆ ಕ್ರಮವಾಗಿ ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ, ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ತುಮಕೂರು ಜಿಲ್ಲೆಯ ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು, ಹಾಸನ ಜಿಲ್ಲೆಯ ಬೇಲೂರು, ಅರಸೀಕೆರೆ, ಹಾಸನ, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಪುನಃ ನವೆಂಬರ್ 30ರಂದು ತುಮಕೂರು ಜಿಲ್ಲೆಯ ಕುಣಿಗಲ್, ಡಿಸೆಂಬರ್ 1ರಂದು ತುಮಕೂರು ಗ್ರಾಮಾಂತರ ಹಾಗೂ ಡಿಸೆಂಬರ್ 2ರಿಂದ ಕ್ರಮವಾಗಿ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ನಲ್ಲಿ ರಥಯಾತ್ರೆ ನಡೆಯಿತು.
ಮೊದಲ ಹಂತದ ರಥಯಾತ್ರೆ ನವೆಂಬರ್ 1ರಂದು ಮುಳಬಾಗಿಲಿನಲ್ಲಿ ಶುರುವಾಗಿ ಡಿಸೆಂಬರ್ 6ಕ್ಕೇ ಆನೇಕಲ್ ನಲ್ಲಿ ಮುಗಿಯಿತು.ಅಕ್ಟೋಬರ್ 27ರಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥಕ್ಕೆ ಸಾಂಕೇತಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದರು.












Click it and Unblock the Notifications