ಮೈಸೂರಿನಲ್ಲಿ ಭತ್ತ-ರಾಗಿ ಖರೀದಿ ಪ್ರಕ್ರಿಯೆ ಆರಂಭ: ಬೆಲೆ ವಿವರ ಇಲ್ಲಿದೆ
ಮೈಸೂರು, ಮಾರ್ಚ್ 06: ಮೈಸೂರು ಜಿಲ್ಲೆಗೆ ರಾಗಿ ಹಾಗೂ ಭತ್ತ ಬೆಳೆಗಾರರು ಗಮನಿಸಬೇಕಾದ ಮುಖ್ಯವಾದ ಮಾಹಿತಿ ಇಲ್ಲಿದೆ. ಈಗಾಗಲೇ ಭತ್ತ ಮತ್ತು ರಾಗಿ ಬೆಳೆದಿರುವ ರೈತರು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮಾರಾಟ ಮಾಡಲು ಇಚ್ಛಿಸಿದಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರ ಅನುಕೂಲಕ್ಕಾಗಿ ಜಿಲ್ಲೆಯಾದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಮೈಸೂರು ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ನೋಂದಣಿ ಹಾಗೂ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮೈಸೂರು ತಾಲೂಕಿನ ಎ.ಪಿ.ಎಂ.ಸಿ ಆವರಣ ಬಂಡಿಪಾಳ್ಯ, ನಂಜನಗೂಡು ತಾಲೂಕಿನ ಎ.ಪಿ.ಎಂ.ಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ಟಿ.ನರಸೀಪುರ ತಾಲೂಕಿನ ಎ.ಪಿ.ಎಂ.ಸಿ ಆವರಣ, ಟಿ ನರಸೀಪುರ, ಎ.ಪಿ.ಎಂ.ಸಿ ಆವರಣ, ಬನ್ನೂರು, ಹುಣಸೂರು ತಾಲೂಕಿನ ಎ.ಪಿ.ಎಂ.ಸಿ ಆವರಣ, ಹುಣಸೂರು, ಎ.ಪಿ.ಎಂ.ಸಿ ಆವರಣ, ರತ್ನಪುರಿ, ಕೆ.ಆರ್.ನಗರ ತಾಲೂಕಿನ ಎ.ಪಿ.ಎಂ.ಸಿ ಆವರಣ,

ಕೆ.ಆರ್.ನಗರ, ಸಾಲಿಗ್ರಾಮ ತಾಲೂಕಿನ ಎ.ಪಿ.ಎಂ.ಸಿ ಆವರಣ ಸಾಲಿಗ್ರಾಮ, ಪ್ರವಾಸಿ ಮಂದಿರ (ಶ್ರೀರಾಮ ದೇವಸ್ಥಾನದ ಹತ್ತಿರ) ಚುಂಚನಕಟ್ಟೆ, ಸರಗೂರು ತಾಲೂಕಿನ ಎ.ಪಿ.ಎಂ.ಸಿ ಆವರಣ ಸರಗೂರು, ಪಿರಿಯಾಪಟ್ಟಣ ತಾಲೂಕಿನ ಎ.ಪಿ.ಎಂ.ಸಿ ಆವರಣ ಪಿರಿಯಾಪಟ್ಟಣ, ಎ.ಪಿ.ಎಂ.ಸಿ ಆವರಣ, ಬೆಟ್ಟದಪುರ, ರೈತ ಸಂಪರ್ಕ ಕೇಂದ್ರ, ಹಾರನಹಳ್ಳಿ, ರೈತ ಸಂಪರ್ಕ ಕೇಂದ್ರ, ರಾವಂದೂರು ಇಲ್ಲಿ ಖರೀದಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಮತ್ತು ರಾಗಿಯನ್ನು ಮಾರಾಟ ಮಾಡಲು ಜಿಲ್ಲೆಯಲ್ಲಿ ನೊಂದಾಯಿಸಿಕೊಂಡಿರುವ ರೈತರಿಂದ ಜಿಲ್ಲೆಯಲ್ಲಿ ತೆರೆಯಲಾಗಿರುವ ಖರೀದಿ ಕೇಂದ್ರಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆ ಶುರುವಾಗಿದೆ. ನೋಂದಾಯಿತ ರೈತರಿಂದ ಪ್ರತಿ ಕ್ವಿಂಟಾಲ್ ಭತ್ತಕ್ಕೆ 2300 ರೂಪಾಯಿ ದರದಂತೆ ಹಾಗೂ ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂಪಾಯಿ ದರದಂತೆ ಆಹಾರ ಧಾನ್ಯವನ್ನು ಖರೀದಿಸಲಾಗುತ್ತಿದೆ.
ನೋಂದಾಯಿತ ರೈತರು ತಮ್ಮ ತಮ್ಮ ತಾಲೂಕಿನಲ್ಲಿ ತೆರೆಯಲಾಗಿರುವ ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಈ ಜಿಲ್ಲೆಯ ಖರೀದಿ ಏಜೆನ್ಸಿಯವರು ನಿಗದಿಪಡಿಸಿದ ದಿನಾಂಕದಂದು ಎಫ್. ಎ. ಕ್ಯೂ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಖರೀದಿ ಕೇಂದ್ರಕ್ಕೆ ನೀಡಬಹುದಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications