ಇದು ಸಮಸ್ಯೆಯ ವೈಭವೀಕರಣವಲ್ಲ, ನವಿರಾದ 'ಒಂದು ಪ್ರೀತಿಯ ಕಥೆ'

ಮೈಸೂರು, ಜು.26: ಬೆಂಗಳೂರು ಥಿಯೇಟರ್‌ ಕಲೆಕ್ಟೀವ್‌ ಚಿತ್ರತಂಡ ಅಭಿನಯನ ಒಂದು ಪ್ರೀತಿಯ ಕಥೆ ನಾಟಕ ಜು.29ರಂದು ಸಂಜೆ 7 ಗಂಟೆಗೆ ಮೈಸೂರಿನ ಕಿರುರಂಗ ಮಂದಿರದಲ್ಲಿ ತೆರೆಕಾಣಲಿದೆ.

ಮರಾಠಿ ಮೂಲದ ವಿಜಯ್‌ ತೆಂಡೂಲ್ಕರ್‌ ಅವರ ಮಿತ್ರಾಚಿ ಗೋಷ್ಟ್‌ ಎನ್ನುವ ನಾಟಕವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ನಾಟಕವನ್ನು ವೆಂಕಟೇಶ್‌ ಪ್ರಸಾದ್‌ ನಿರ್ದೇಶಿಸಿದ್ದಾರೆ. ಪ್ರೀತಿ ಎನ್ನುವುದು ದೇಶ ಕಾಲಗಳನ್ನು ಮೀರಿದ ಒಂದು ಸಂವೇದನೆಯಾಗಿದೆ. ಇದು ಎಲ್ಲಾ ಜೀವಿಗಳಲ್ಲಿ ಇರುವ ಬಿಡಿಸಲಾಗದ ಅನುಬಂಧ.

ವಯಸ್ಸಿನಲ್ಲಿ ಮನದಾಳದಿಂದ ಚಿಮ್ಮುವ ಪ್ರೀತಿ, ಕೆಲವೊಮ್ಮೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಮೂಡುವ ಅಸಹಾಯಕತೆ, ಈ ಎಲ್ಲಾ ತೊಳಲಾಟಗಳನ್ನು ಅರ್ಥೈಸಿಕೊಂಡು ಜತೆಗಿರುವ ಗೆಳೆತನ, ಅದರ ಜತೆಗೆ ಸಲಿಂಗ ಕಾಮಿಗಳ ಆಲೋಚನೆಗಳನ್ನು ಸ್ವೀಕರಿಸದ ಸಮಾಜ, ಅವರ ಪ್ರೀತಿ ಮಿಲುವನ್ನು ಪ್ರಶ್ನಿಸಲು ಮಾತ್ರ ಸಾಧ್ಯ, ಈ ನಾಟಕ ಸಲಿಂಗಕಾಮಿಗಳ ತೊಳಲಾಟವನ್ನೂ ಹೇಳುತ್ತದೆ.

 Ondu Preetiya Kathe - A Play Based on Lesbian Love Story

ಯಾವುದೇ ಕಾಲದಲ್ಲಾದರೂ ನಮ್ಮ ಸವಾಲುಗಳು ಇಂದಿಗೂ ಸುಧಾರಿಸಿಲ್ಲ, ಅಂದಿನಿಂದ ಎದುರಿಸುತ್ತಿರುವ ಸವಾಲುಗಳು ಕೂಡ ಬದಲಾಗಿಲ್ಲ, ನಮ್ಮದೇ ಸಮಾಜದ ಒಂದು ಭಾಗವಾದ ಸಲಿಂಗ ಕಾಮಿಗಳ ಭಾವನೆಗಳನ್ನು ಈ ನಾಟಕ ತೋರಿಸುತ್ತದೆ. ನಾಗರಿಕ ಜಗತ್ತಿನಲ್ಲಿ ಪ್ರೀತಿಗಿರಬಹುದಾದ ನೈತಿಕ ಚೌಕಟ್ಟು, ಸಾಮಾಜಿಕ ಕಟ್ಟುಪಾಡುಗಳು, ರೂಪುರೇಷೆಗಳು ಇನ್ಯಾವುದೇ ಸಂವೇದನೆಗೂ ಕಾಣುವುದಿಲ್ಲ.

 Ondu Preetiya Kathe - A Play Based on Lesbian Love Story

ದ್ವೇಷ, ಸಿಟ್ಟು, ಅಸೂಯೆಯನ್ನು ವ್ಯಕ್ತಪಡಿಸುವಷ್ಟು ಸುಲಭವಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದು ಆಧುನಿಕ ಜಗತ್ತಿನ ಬಹುದೊಡ್ಡ ವ್ಯಂಗ್ಯವಾಗಿದೆ.

ಪ್ರೀತಿಯ ಪರಿಭಾಷೆಗಳು ಕಾಲ ಕಾಲಕ್ಕೆ ಬದಲಾಗುತ್ತಿದ್ದರೂ,ಪ್ರೀತಿಗಂಟಿದ ಪೂರ್ವಾಗ್ರಹಗಳು ಇಂದು ನಿನ್ನೆಯದಲ್ಲ, ಅವುಗಳಲ್ಲಿ ಬಹಳ ಮುಖ್ಯವಾದುದು,ಗಂಡು ಹೆಣ್ಣಿನ ನಡುವಿನ ಪ್ರೀತಿಯೇ ಸಹಜ ಪ್ರೀತಿ, ಉಳಿದಿದ್ದೆಲ್ಲ ಅಸಹಜ ಪ್ರೀತಿ ಎಂಬುದು.

ಅಂತಾನೋತ್ಪತ್ತಿಯೇ ಪ್ರೀತಿಯ ಬಹುಮುಖ್ಯ ಅಗತ್ಯ ಎಂಬ ಸಾಮಾಜಿಕ, ಧಾರ್ಮಿಕ ಕಾರಣಗಳೂ ಈ ಪೂರ್ವಾಗ್ರಹವನ್ನು ಬೆಳೆಸಿವೆ. ಪೋಷಿಸಿವೆ. ನಮ್ಮೆಲ್ಲರಲ್ಲಿ ಬೇರುಬಿಟ್ಟು ಮರವಾಗಿಸಿವೆ. ಈ ಪೂರ್ವಾಗ್ರಹಗಳ ಆಚೆ ಇರಬಹುದಾದ ಒಂದು ಸಹಜ ಪ್ರೀತಿಯ ಕಥೆಯೇ ಒಂದು ಪ್ರೀತಿಯ ಕಥೆ.

ಮೈಸೂರಿನ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ನಡೆದಿರಬಹುದಾದ ಈ ಕಥೆ ಗಂಡು-ಹೆಣ್ಣಿನ ಮಧ್ಯೆ ಇರುವ ಪ್ರೀತಿ ಎಷಟು ಸಹಜವೋ ಅಷ್ಟೇ ಸಹಜವಾಗಿ ಹೆಣ್ಣು ಮತ್ತೊಂದು ಹೆಣ್ಣಿನ ಮೇಲೆ ತೋರುವ ಪ್ರೀತಿಯನ್ನು ಪ್ರತಿಫಲಿಸುತ್ತದೆ. ಸಲಿಂಗ ಪ್ರೀತಿಪ್ರಕೃತಿಗೆ ವಿರುದ್ಧವಾದುದು, ಅಸಹಜವಾದುದು ಎನ್ನುವ ಪೂರ್ವಾಗ್ರಹವನ್ನು ತೊಲಗಿಸುವ ನಿಟ್ಟಿನಲ್ಲಿ ಈ ನಾಟಕವನ್ನು ಪ್ರಯೋಗಿಸಲಾಗುತ್ತಿದೆ.

ಸಲಿಂಗ ಪ್ರೇಮಿಗಳನ್ನು ಮುಖ್ಯವಾಹಿನಿಯ ಕಲಾಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡಿದ್ದೇ ಹೆಚ್ಚು ಅಥವಾ ಅವರು ವ್ಯವಸ್ಥೆಯ ಬಲಿಪಶುಗಳು ಎಂಬುದನ್ನು ವೈಭವೀಕರಿಸಿ ಬಿಂಬಿಸಲಾಗುತ್ತದೆ.

ಆದರೆ ಈ ಎರಡೂ ಸಿದ್ಧ ಮಾದರಿಯ ಸಾಧ್ಯತೆಗಳಾಚೆಗೆ ಸಲಿಂಗ ಪ್ರೀತಿ ಅತ್ಯಂತ ಸಹಜ ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ತೋರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+