• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂವರು ಮಕ್ಕಳನ್ನು ಅನಾಥರನ್ನಾಗಿ ಮಾಡಿದ ಮಾರಮ್ಮನ ಪ್ರಸಾದ

|
   Chamarajanagar: ಚಾಮರಾಜನಗರದ ಮಾರಮ್ಮ ದೇವಸ್ಥಾನದ ಪ್ರಸಾದಕ್ಕೆ ಬಲಿಯಾಯ್ತು 14 ಜೀವಗಳು

   ಮೈಸೂರು, ಡಿಸೆಂಬರ್ 17: ಚಾಮರಾಜನಗರದ ಕಿಚ್ಚುಗುತ್ತಿಯ ಸುಳ್ವಾಡಿ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ತಿಂದು ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

   ಮೈಲಿಬಾಯಿ ಮೃತರು, ಮೈಲಿಬಾಯಿ ಅವರ ಪತಿ ಕೃಷ್ಣನಾಯ್ಕ ಅವರು ಡಿಸೆಂಬರ್ 14ರಂದು ಮೃತಪಟ್ಟಿದ್ದರು. ಮೈಲಿಬಾಯಿ ಸ್ಥಿತಿ ಗಂಭೀರವಾಗಿದ್ದ ಕಾರಣ ಕಳೆದ ನಾಲ್ಕು ದಿನದಿಂದ ಐಸಿಯುನಲ್ಲಿಟ್ಟಿದ್ದರು. ಇದೀಗ ಅವರು ಮೃತಪಟ್ಟಿದ್ದು ಮೂರು ಮಕ್ಕಳನ್ನು ಅನಾಥರಾಗಿದ್ದಾರೆ.

   ಮೈಲಿಬಾಯಿಯನ್ನು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪತಿ ಹಾಗೂ ಪತ್ನಿ ಇಬ್ಬರೂ ಕೂಡ ವಿಷ ಪ್ರಸಾದ ಸೇವಿಸಿ ಮನೆಗೆ ತೆರಳಿದ್ದರು, ಮಕ್ಕಳಿಗೂ ಪ್ರಸಾದ ನೀಡಿದ್ದರು ಆದರೆ ತಕ್ಷಣಕ್ಕೆ ಮಕ್ಕಳು ಪ್ರಸಾದ ಸೇವಿಸಿರಲಿಲ್ಲ.

   ಅಪ್ಪ ಹೋದರು..ಅಮ್ಮನನ್ನಾದರೂ ಉಳಿಸಿಕೊಡಿ...ಮಕ್ಕಳ ಗೋಳು

   ಅಷ್ಟರಲ್ಲಿ ಮೈಲಿಬಾಯಿಗೆ ವಾಂತಿ ಆರಂಭವಾಯಿತು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಆಗುವುದಿಲ್ಲ ಎಂದ ಬಳಿಕ ಕೊಳ್ಳೇಗಾಲ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ವಿಷ ಸೇವಿಸಿರುವುದು ಗೊತ್ತಾಯಿತು ಅಲ್ಲಿಂದ ನೇರವಾಗಿ ಮೈಸೂರಿಗೆ ಕರೆತರಲಾಯಿತು.

   ವಿಧಿಯಾಟ ನೋಡಿ! ಪ್ರಸಾದ ತಯಾರಿಸಿದ್ದು ಅಪ್ಪ, ತಿಂದು ಮೃತಳಾದ ಮಗಳು!

   ಆದರೆ ಇಷ್ಟೆಲ್ಲಾ ಹೋರಾಟದ ಮಧ್ಯೆ ಪತಿ ತನ್ನ ಆರೋಗ್ಯದ ಬಗ್ಗೆ ಲೆಕ್ಕಿಸಿರಲಿಲ್ಲ ಪತ್ನಿಯನ್ನು ಬದುಕಿಸಿಕೊಳ್ಳುವುದು ಹೇಗೆ ಎನ್ನುವ ಆತಂಕದಲ್ಲೇ ಇದ್ದರು. ಬಳಿಕ ಕೃಷ್ಣನಾಯ್ಕ ಅವರಿಗೆ ಅಂಬ್ಯುಲೆನ್ಸ್‌ನಲ್ಲೇ ವಾಂತಿಯಾಗಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು.

   ಬಳಿಕ ಮೈಲಿ ಬಾಯಿಯನ್ನು ಮಕ್ಕಳೇ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಮೂವರು ಹೆಣ್ಣುಮಕ್ಕಳಿರುವ ಕಾರಣ ಅವರ ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿ ಪರ ಊರಿಗೆ ತೆರಳಿ ಸ್ವಲ್ಪ ಹಣ ಸಂಪಾದಿಸುತ್ತಿದ್ದರು. ಆದರೆ ಇದೀಗ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

   English summary
   In sulwadi maramma tepmle poisoning case death toll raised to 14 and three children lost their mother.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X