ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್‌ ರೈಲಿಗೆ ಎಲ್‌ಎಚ್‌ಬಿ ಕೋಚ್‌

ಮೈಸೂರು, ಏಪ್ರಿಲ್ 26 : ಮೈಸೂರು-ವಾರಣಾಸಿ ನಡುವೆ ಸಂಚಾರ ನಡೆಸುವ ಎಕ್ಸ್‌ಪ್ರೆಸ್ ರೈಲಿಗೆ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಮೈಸೂರು-ವಾರಣಾಸಿ ನಡುವೆ ವಾರಕ್ಕೆ ಎರಡು ಬಾರಿ ರೈಲು ಸಂಚಾರ ನಡೆಸುತ್ತದೆ.

ದೂರ ಪ್ರಯಾಣದ ರೈಲುಗಳಲ್ಲಿ ಲಿಂಕ್ ಹೋಫ್‌ಮ್ಯಾನ್ ಬುಶ್ (ಎಲ್‌ಎಚ್‌ಬಿ) ಕೋಚ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಈ ಯೋಜನೆ ಭಾಗವಾಗಿಯೇ ಮೈಸೂರು-ವಾರಣಾಸಿ ರೈಲಿಗೆ ಎಲ್‌ಎಚ್‌ಬಿ ಕೋಚ್ ಆಳವಡಿಕೆ ಮಾಡಲಾಗಿದೆ.

ಎಲ್‌ಎಚ್‌ಬಿ ಕೋಚ್‌ಗಳನ್ನು ಜರ್ಮನಿ ತಂತ್ರಜ್ಞಾನದಲ್ಲಿ ತಯಾರು ಮಾಡಲಾಗಿದೆ. ದೂರ ಪ್ರಯಾಣ ಮಾಡುವಾಗ ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಂತರಾಷ್ಟ್ರೀಯ ವಿನ್ಯಾಸದಲ್ಲಿ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ.

LHB coaches

ಮೈಸೂರು-ವಾರಣಾಸಿ ನಡುವೆ ವಾರದಲ್ಲಿ ಎರಡು ದಿನ ರೈಲು ಸಂಚಾರ ನಡೆಸುತ್ತದೆ. ಗುರುವಾರ ಮೈಸೂರಿನಿಂದ ರೈಲು ಹೊರಡುತ್ತದೆ. ಶನಿವಾರ ವಾರಣಾಸಿಯಿಂದ ಮೈಸೂರಿಗೆ ರೈಲು ಹೊರಡುತ್ತದೆ.

ಮುಂದಿನ ಕೆಲವು ದಿನಗಳಲ್ಲಿ ಮೈಸೂರಿನಿಂದ ಸಂಚಾರ ನಡೆಸುವ ಮೈಸೂರು-ಹೌರಾ ಎಕ್ಸ್‌ಪ್ರೆಸ್, ಮೈಸೂರು-ಹಜರತ್ ನಿಜಾಮುದ್ದೀನ್ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸಹ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+