ವಿವಿಪ್ಯಾಟ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?
ದೇಶದೆಲ್ಲೆಡೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಟ್ಯಾಂಪರಿಂಗ್ ಚರ್ಚೆಯಾಗುತ್ತಿದ್ದರೆ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಆ ಗೊಂದಲ ಇಲ್ಲ. ಯಾಕೆ ಈ ಸ್ಟೋರಿ ಓದಿ.
Recommended Video

ಬೆಂಗಳೂರು, ಏಪ್ರಿಲ್ 13: ದೇಶದೆಲ್ಲೆಡೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಟ್ಯಾಂಪರಿಂಗ್ ವಿಚಾರ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಚುನಾವಣಾ ಆಯೋಗ ವಿವಿಪ್ಯಾಟ್ ಒಳಗೊಂಡ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳ ಬಳಕೆ ಆರಂಭಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಇದು ಬಳಕೆಯಾಗಲಿದೆ.
[ಉಪಚುನಾವಣೆಗೆ ಹೊಸ ವಿವಿಪ್ಯಾಟ್ ಮತ ಯಂತ್ರಗಳು]

ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕೆ ಮತ್ತು ಪಾರದರ್ಶಕ ಚುನಾವಣೆ ನಡೆಸುವುದಕ್ಕಾಗಿ ಮೊದಲ ಬಾರಿಗೆ ಪೂರ್ಣ ಮಟ್ಟದಲ್ಲಿ ವಿವಿಪ್ಯಾಟ್ ಗಳನ್ನು ಒಳಗೊಂಡ ಮತಯಂತ್ರಗಳನ್ನು ಚುನಾವಣಾ ಆಯೋಗ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಳಸಿತ್ತು. ಇದೀಗ ವಿಧಾನಸಭೆ ಚುನಾವಣೆಗೂ ಇದನ್ನು ಬಳಸುತ್ತಿದೆ.
ಈ ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಲಾಗಿರುತ್ತದೆ. ಇವಿಎಂನಲ್ಲಿ ಮತದಾನ ಮಾಡುತ್ತಿದ್ದಂತೆ ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಚೀಟಿಯೊಂದು ವಿವಿಪ್ಯಾಟ್ ನಲ್ಲಿ ಕಾಣಿಸಿಕೊಳ್ಳುತ್ತದೆ.
ವಿವಿ ಪ್ಯಾಟ್ ನ ಗ್ಲಾಸಿನಲ್ಲಿ ಈ ಚೀಟಿ 7 ಸೆಕೆಂಡ್ ಗಳ ಕಾಲ ಮತದಾರರಿಗೆ ಕಾಣಿಸಿಕೊಳ್ಳುತ್ತದೆ. ನಂತರ ಇದು ಬಾಕ್ಸಿನೊಳಗೆ ಬೀಳುತ್ತದೆ.
ಒಂದೊಮ್ಮೆ ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷವುಂಟಾದಲ್ಲಿ ವಿವಿಪ್ಯಾಟ್ ಬಾಕ್ಸ್ ನಲ್ಲಿ ದಾಖಲಾದ ಮತಗಳನ್ನು ಚುನಾವಣಾಧಿಕಾರಿ ಅನುಮತಿಯೊಂದಿಗೆ ಸಿಬ್ಬಂದಿ ತಕ್ಷಣಕ್ಕೆ ಎಣಿಕೆ ಮಾಡಬಹುದಾಗಿದೆ.
ಹೀಗಾಗಿ ಯಾವುದೇ ಗೊಂದಲಗಳಿಗೂ ಇಲ್ಲಿ ಅವಕಾಶವಿಲ್ಲ.
ಇವಿಎಂ-ವಿವಿಪ್ಯಾಟ್ ವ್ಯತ್ಯಾಸ
ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್)ನಲ್ಲಿ ಕೇವಲ ಕಂಟ್ರೋಲ್ ಯೂನಿಟ್ ಮತ್ತುಬ್ಯಾಲೆಟ್ ಯೂನಿಟ್ ಇರುತ್ತದೆ. ಬ್ಯಾಲೆಟ್ ಯೂನಿಟ್ ಅಂದರೆ ಮತ ಚಲಾಯಿಸುವ ಯಂತ್ರ. ಕಂಟ್ರೋಲ್ ಯೂನಿಟ್ ಅಂದರೆ ಈ ಮತಗಳು ಹೋಗಿ ಸಂಗ್ರಹವಾಗುವ ಯಂತ್ರ.
ವಿವಿಪ್ಯಾಟ್ ನಲ್ಲಿ, ಇವುಗಳ ಜತೆಗೆ ವಿವಿಪ್ಯಾಟ್ ಯಂತ್ರ ಇರುತ್ತದೆ. ಇದು ಬ್ಯಾಲೆಟ್ ಯೂನಿಟ್ ಪಕ್ಕದಲ್ಲಿ ಇರುತ್ತದೆ. ನೀವು ಮತ ಚಲಾಯಿಸಿದ ತಕ್ಷಣ ಇದರಲ್ಲಿ ನೋಡಿ ನಿಮ್ಮ ಮತ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು.












Click it and Unblock the Notifications