ಮೈಸೂರು : ಮತ್ತೊಂದು ರೈಲ್ವೆ ಟಿಕೆಟ್ ಕೌಂಟರ್ ಆರಂಭ

ಮೈಸೂರು, ಜ. 9 : ಮೈಸೂರಿನಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ ಕಂಪ್ಯೂಟರೀಕೃತ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್‌ಅನ್ನು ಆರಂಭಿಸಿದೆ. ಸದ್ಯ, ನಗರದಲ್ಲಿ ಒಟ್ಟು 3 ಮುಂಗಡ ಟಿಕೆಟ್ ಕೇಂದ್ರಗಳು ಇವೆ.

ಶಿವಾಜಿ ರಸ್ತೆಯ ಎನ್‌.ಆರ್.ಮೊಹಲ್ಲಾ ಅಂಚೆ ಕಚೇರಿಯಲ್ಲಿ ನೂತನ ಮುಂಗಡ ಟಿಕೆಟ್ ಕೌಂಟರ್ ಶುಕ್ರವಾರ ಆರಂಭಗೊಂಡಿದೆ. ತತ್ಕಾಲ್ ಸೇರಿದಂತೆ ಎಲ್ಲಾ ಬಗೆಯ ಮುಂಗಡ ಟಿಕೆಟ್‌ಗಳನ್ನು ಈ ಕೇಂದ್ರದಿಂದ ಬುಕ್ ಮಾಡಬಹುದಾಗಿದೆ. [ರೈಲ್ವೆ ಇಲಾಖೆಯ 5 ಹೊಸ ಯೋಜನೆಗಳು ಯಾವವು?]

Mysuru

ಸರ್ಕಾರಿ ರಜಾ ದಿನ ಮತ್ತು ಭಾನುವಾರ ಹೊರತುಪಡಿಸಿ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರತಿದಿನ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ನೂತನ ಕೇಂದ್ರ ಉದ್ಘಾಟನೆಯಿಂದ ನಗರದ ಜನರಿಗೆ ಟಿಕೆಟ್ ಬುಕ್ ಮಾಡಲು ಮತ್ತಷ್ಟು ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]

ಈ ಕೇಂದ್ರದಲ್ಲಿ ಟಿಕೆಟ್ ಬುಕ್ ಮಾಡಿಸಿದರೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ದ್ವಿತೀಯ ದರ್ಜೆಗೆ ರೂ.15, 3ಎ ಟಿಕೆಟ್‌ಗಳಿಗೆ 20 ಮತ್ತು 2ಎ ಟಿಕೆಟ್‌ಗಳಿಗೆ 30 ರೂ. ಸೇವಾ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ನರೇಗಾದಲ್ಲಿ 2 ಲಕ್ಷ ವಂಚನೆ : ಕೊಳ್ಳೇಗಾಲ ತಾಲೂಕು ಪಿಜಿ ಪಾಳ್ಯ ಗ್ರಾಮ ಪಂಚಾಯಿತಿಯ ಇಬ್ಬರು ಅಧ್ಯಕ್ಷರು, ಇಬ್ಬರು ಅಧಿಕಾರಿಗಳು ಸೇರಿಕೊಂಡು ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ 2.47 ಲಕ್ಷ ರೂ. ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ನಾಲ್ವರ ವಿರುದ್ಧವೂ ಶಿಸ್ತುಕ್ರಮ ಕೈಗೊಂಡು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಿಫಾರಸು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+