ಹಾವೇರಿ ಮೂಲದ ನವೀನ್ ನಂಜನಗೂಡಿನ ಆದರ್ಶ ಶಾಲೆ ವಿದ್ಯಾರ್ಥಿ!

ಮೈಸೂರು, ಮಾ.2: ಉಕ್ರೇನ್-ರಷ್ಯಾ ಯುದ್ದದಲ್ಲಿ ಮೃತಪಟ್ಟಿರುವ ನವೀನ್ ಮೂಲ ಹಾವೇರಿಯಾದರೂ ಆತ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಓದಿದ್ದು ಮಾತ್ರ ಮೈಸೂರಿನ ನಂಜನಗೂಡಿನ ಆದರ್ಶ ಶಾಲೆಯಲ್ಲಿ!

ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಮೂಲತಃ ಹಾವೇರಿ ಜಿಲ್ಲೆಯ ಚಳಗೇರಿಯವರಾದರೂ, ಉದ್ಯೋಗಕ್ಕಾಗಿ ನಂಜನಗೂಡಿನಲ್ಲಿದ್ದರು. ಇಲ್ಲಿನ ಖಾಸಗಿ ಪೇಪರ್ ಮಿಲ್ ನಲ್ಲಿ ವೆಹಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ಕೆಲಸ ಮಾಡುವಾಗ ಇಲ್ಲೆ ವಾಸ್ತವ್ಯ ಹೂಡಿದ್ದರು. ಈ ವೇಳೆ ನವೀನ್ 1 ರಿಂದ 5 ನೇ ತರಗತಿ ತನಕ ನಂಜನಗೂಡಿನ ಲಯನ್ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದರು. ತರುವಾಯ 6 ರಿಂದ 10 ನೇ ತರಗತಿವರೆಗೆ ಆದರ್ಶ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. 625 ಅಂಕಗಳಿಗೆ 604 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಮೊದಲ ಸ್ಥಾನ ಪಡೆದುಕೊಂಡನು. ಪಿಯುಸಿಯನ್ನೂ ನಂಜನಗೂಡಿನ ಯೂನಿಟಿ ಕಾಲೇಜಿನಲ್ಲಿಯೇ 2016-18ನೇ ಸಾಲಿನಲ್ಲಿ ಪೂರ್ಣಗೊಳಿಸಿದ್ದನು

ತಂದೆ ನಿವೃತ್ತರಾದ ಮೇಲೆ ಇಲ್ಲಿನ ಹೌಸಿಂಗ್ ಬೋರ್ಡ್ ಬಡಾವಣೆಯಿಂದ ನವೀನ್ ಕುಟುಂಬದವರು ತಮ್ಮ ಮೂಲ ನೆಲೆಯಾದ ಹಾವೇರಿಗೆ ಹೋಗಿದ್ದರು. ಕಳೆದ ಎರಡು ದಿನದ ಹಿಂದೆ ಉಕ್ರೇನ್‌ನಿಂದ ನವೀನ್ ನಂಜನಗೂಡಿನ ಸ್ನೇಹಿತರ ಜೊತೆ ಮಾತನಾಡಿದ್ದನು. ಈಗ ನವೀನ್ ಅಗಲಿಕೆ ನಂಜನಗೂಡಿನ ನವೀನ್ ಸ್ನೇಹಿತರಲ್ಲಿ ಬೇಸರ ಮೂಡಿಸಿದೆ.

 Naveen, who died in the Ukraine-Russia war is An Adarsha school student in Nanjangud

''ಆರು ತಿಂಗಳ ಹಿಂದೆಯಷ್ಟೆ ನಂಜನಗೂಡಿಗೆ ಆಗಮಿಸಿ ಸಹಪಾಠಿಗಳೊಡನೆ ಮಡಿಕೇರಿ ಪ್ರವಾಸಕ್ಕೆ ಹೋಗಿ ಬಂದ. ಬಹಳ ಪ್ರತಿಭಾವಂತ. ಶೈಕ್ಷಣಿಕವಾಗಿ ನಮ್ಮ ಬಡಾವಣೆಯ ಎಲ್ಲ ಮಕ್ಕಳಿಗಿಂತ ಮುಂದಿದ್ದ,'' ಎಂದು ನವೀನ್ ವಾಸವಿದ್ದ ಬಡಾವಣೆ ನಿವಾಸಿ ಕೆಂಪೇಗೌಡ ನೆನಪು ಹಂಚಿಕೊಂಡರು.

''ೆಬ್ರವರಿ 7ರಂದು ನವೀನ್ ಕಾಲೇಜಿಗೆ ೆನ್ ಮಾಡಿ, ತನ್ನ ಪಿಯುಸಿ ಅಂಕಪಟ್ಟಿ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದ. ಉಕ್ರೇನ್ ಶಿಕ್ಷಣದ ಕುರಿತು ಮಾತನಾಡಿದ್ದ,'' ಎಂದು ಯೂನಿಟಿ ಕಾಲೇಜಿನ ಉಪನ್ಯಾಸಕ ಇ.ಕೆ.ರಾಮಮೋಹನ್ ತಿಳಿಸಿದ್ದಾರೆ.

ಸಂಸದರಿಂದ ವಾಟ್ಸಪ್ ಗ್ರೂಪ್ ರಚನೆ :

ಉಕ್ರೇನ್ ಹಾವೇರಿ ಮೂಲಕ ನವೀನ್ ಮೃತಪಟ್ಟ ಬೆನ್ನಿನಲ್ಲೇ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪಸಿಂಹ ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ವಾಟ್ಸಪ್ ಗ್ರೂಪ್ ರಚನೆ ಮಾಡಿದ್ದಾರೆ. ಇವರಿಗೆ ಸಂಸದ ತೇಜಸ್ವಿ ಸೂರ್ಯ ಕೂಡ ಸಾಥ್ ನೀಡಿದ್ದಾರೆ.

 Naveen, who died in the Ukraine-Russia war is An Adarsha school student in Nanjangud

ಚಾಮರಾಜೇಂದ್ರ ಮೃಗಾಲಯದಲ್ಲಿ ಬುಧವಾರ ನೂತನವಾಗಿ ನಿರ್ಮಾಣಗೊಂಡಿರುವ ಕೆಳ ಸೇತುವೆ ಉದ್ಘಾಟನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉಕ್ರೇನ್-ರಷ್ಯಾ ಯುದ್ಧದಲ್ಲಿ ಹಾವೇರಿ ವಿದ್ಯಾರ್ಥಿ ನವೀನ್ ಮೃತಪಟ್ಟಿರುವುದು ಅತೀವ ನೋವುಂಟು ಮಾಡಿದೆ. ನವೀನ್ ನಂಜನಗೂಡಿನ ಆದರ್ಶ ಶಾಲೆ ವಿದ್ಯಾರ್ಥಿ. ಈ ಹಿಂದೆ ಕತಾರ್ ಹಾಗೂ ಆ್ಘಾನಿಸ್ತಾನದಲ್ಲಿ ಜನರನ್ನು ರಕ್ಷಣೆ ಮಾಡುವಾಗ ಒಂದು ಸಾವಾಗಿರಲಿಲ್ಲ. ಆದರೆ ಮೋದಿ ಆಡಳಿತದಲ್ಲಿ ಸುರಕ್ಷತೆ ಮಾಡುವ ವೇಳೆ ಮೊದಲ ಸಾವು ಸಂಭವಿಸಿದೆ. ಇದು ನೋವು ತಂದಿದೆ ಎಂದರು.

ಉಕ್ರೇನ್‌ನಲ್ಲಿ ಯಾರೆಲ್ಲಾ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಅವರ ನೇರ ಸಂಪರ್ಕದಲ್ಲಿದ್ದೇವೆ. ಅವರ ಅನುಕೂಲಕ್ಕಾಗಿ ನಾನು ಮತ್ತು ಸಂಸದ ತೇಜಸ್ವಿ ಸೂರ್ಯ ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿ ಕೊಡುತ್ತಿದ್ದೇವೆ ಎಂದರು.

ಅಂದಾಜಿನ ಪ್ರಕಾರ, ಉಕ್ರೇನ್‌ನಲ್ಲಿ 10 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಯುದ್ಧದ ವಿಚಾರದಲ್ಲಿ ಭಾರತ ಆಲಿಪ್ತ ನೀತಿ ತಾಳಿದ್ದು, ವಿದ್ಯಾರ್ಥಿಗಳಿಗೆ ಆತಂಕ ತಂದಿದೆ. ಸದ್ಯ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ತಕ್ಷಣ ಸಿಕ್ಕ ರೈಲುಗಳನ್ನ ಬಳಸಿಕೊಂಡು ಹಂಗೇರಿ ಸೇರಿದಂತೆ ಪಕ್ಕದ ಸ್ಥಳಗಳಿಗೆ ತಲುಪಿದರೇ ಅಲ್ಲಿಂದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+