ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್ ನೆನದ ಮೋದಿ, ಸುಮಲತಾರನ್ನು ಬೆಂಬಲಿಸಿ ಎಂದರು

|
Google Oneindia Kannada News

Recommended Video

ಅಂಬರೀಶ್ ಬಗ್ಗೆ ಮಾತನಾಡಿ ಸುಮಲತಾಗೆ ಬೆಂಬಲ ಕೋರಿದ ನರೇಂದ್ರ ಮೋದಿ | Lok Sabha Elections 2019

ಮೈಸೂರು, ಏಪ್ರಿಲ್ 09: ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ ಅವರು ಜೊತೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡುವಂತೆಯೂ ಕರೆ ನೀಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮ್ಮ ಭಾಷಣದ ಮಧ್ಯೆ ಅಂಬರೀಶ್ ಅವರನ್ನು ನನಪಿಸಿಕೊಂಡ ಮೋದಿ, ಅಬರೀಶ್ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ, ಅಂಬರೀಶ್ ಅವರ ಜೊತೆ ಸೇರಿ ಸುಮಲತಾ ಅವರು ಕನ್ನಡಕ್ಕಾಗಿ ಕೆಲಸ ಮಾಡಿದ್ದಾರೆ ಎಂದರು.

ಜ್ಯೋತಿಷ್ಯ: ನರೇಂದ್ರ ಮೋದಿಗೆ ಸಡ್ಡು ಹೊಡೆಯಬಲ್ಲ ಜಾತಕ ದೇವೇಗೌಡರದು ಮಾತ್ರ ಜ್ಯೋತಿಷ್ಯ: ನರೇಂದ್ರ ಮೋದಿಗೆ ಸಡ್ಡು ಹೊಡೆಯಬಲ್ಲ ಜಾತಕ ದೇವೇಗೌಡರದು ಮಾತ್ರ

ಅಂಬರೀಶ್ ಕನ್ನಡಕ್ಕೆ ಮಾಡಿರುವ ಕೆಲಸ ಶ್ಲಾಘನೀಯ, ಅವರ ಆ ಪ್ರಯತ್ನಗಳನ್ನು ನಾವು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ನೀವೆಲ್ಲರೂ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತೀರೆಂದು ನಾನು ನಂಬಿದ್ದೇನೆ ಎಂದು ಮೋದಿ ಅವರು ಹೇಳಿದರು.

ರಾಹುಲ್‌ಗೆ ಜೆಡಿಎಸ್, ರಾಜ್ಯದ ಜನರ ಮೇಲೆ ನಂಬಿಕೆ ಇಲ್ಲ : ಮೋದಿ ರಾಹುಲ್‌ಗೆ ಜೆಡಿಎಸ್, ರಾಜ್ಯದ ಜನರ ಮೇಲೆ ನಂಬಿಕೆ ಇಲ್ಲ : ಮೋದಿ

Narendra Modi remembered Ambareesh, requested to support Sumaltaha

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೆಂಬಲ ನೀಡಿದೆ. ಮಂಡ್ಯದಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಹಾಗಾಗಿ ಮೋದಿ ಅವರು ಮೈಸೂರು ಸಮಾವೇಶದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿಗೆ ಜೆಡಿಎಸ್ ಮೇಲೆ ಸಂಶಯವಿದೆ: ನರೇಂದ್ರ ಮೋದಿರಾಹುಲ್ ಗಾಂಧಿಗೆ ಜೆಡಿಎಸ್ ಮೇಲೆ ಸಂಶಯವಿದೆ: ನರೇಂದ್ರ ಮೋದಿ

ಮಂಡ್ಯದಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದೆಯಾದರೂ ಬಿಜೆಪಿಯ ಪ್ರಮುಖ ಮುಖಂಡರು ಈವರೆಗೂ ಸುಮಲತಾ ಪರ ಪ್ರಚಾರಕ್ಕೆ ಆಗಮಿಸಿರಲಿಲ್ಲವೆಂಬ ಕೊರತೆ ಕಾಣುತ್ತಿತ್ತು, ಆದರೆ ಇಂದು ಖುದ್ದು ಮೋದಿಯವರೆ ಸುಮಲತಾ ಅವರಿಗೆ ಬೆಂಬಲ ನೀಡಿ ಎಂದಿರುವುದು ಸುಮಲತಾ ಅವರ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ.

English summary
Narendra Modi remembered Ambareesh in Mysuru BJP rally. He said people should support Sumalatha Ambareesh in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X