ಅದ್ಧೂರಿಯಾಗಿ ಜರುಗಿದ ನಂಜುಂಡೇಶ್ವರನ ಪಂಚ ಮಹಾರಥೋತ್ಸವ

ಮೈಸೂರು, ಮಾರ್ಚ್ 28 : ನಂಜನಗೂಡು ಎಂದ ಕೂಡಲೇ ನೆನಪಾಗುವುದು ನಂಜುಡೇಶ್ವರ. ಇದೇ ನಂಜನಗೂಡಿನಲ್ಲಿ ಇಂದು ಬೆಳಿಗ್ಗೆ 6.05ರಿಂದ 6.20ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅದ್ಧೂರಿಯಾಗಿ ಗೌತಮ ಪಂಚ ಮಹಾರಥೋತ್ಸವ ಸಂಪನ್ನಗೊಂಡಿದೆ. ಸಾವಿರಾರು ಸಂಖ್ಯೆಯ ಭಕ್ತರು ದೇವಾಲಯದ ಆವರಣದಲ್ಲಿ ನೆರೆದಿದ್ದು ರಥೋತ್ಸವವನ್ನು ಕಣ್ತುಂಬಿಕೊಂಡರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿವರ್ಷವೂ ನಡೆಯುವ ಈ ಜಾತ್ರೆಯಲ್ಲಿ ಪಂಚರಥಗಳ ದರ್ಶನ ನಡೆಯಲಿದ್ದು ಗಣಪತಿ, ಸುಬ್ರಹ್ಮಣ್ಯ, ನಂಜುಂಡೇಶ್ವರ, ಪಾರ್ವತಿ, ಚಂಡಿಕೇಶ್ವರ ರಥಗಳನ್ನು ಭಕ್ತರು ಎಳೆಯುತ್ತಾರೆ. 90 ಅಡಿ ಎತ್ತರವಿರುವ ನಂಜುಂಡೇಶ್ವರನ ಭವ್ಯ ರಥವನ್ನು ಜಾತಿ ಧರ್ಮಗಳ ಬೇಧವಿಲ್ಲದೆ ಎಲ್ಲಾ ವರ್ಗದ ಜನರು ಸೇರಿ ಭಕ್ತಿ ಭಾವದಿಂದ ಎಳೆದರು.

ಪ್ರಸಾದ ವಿತರಣೆಗೆ ಸಜ್ಜು;-
ಇನ್ನು ನಂಜನಗೂಡಿನ ದೊಡ್ಡಜಾತ್ರೆಯಲ್ಲಿ ಹರಿಕೆ ಹೊತ್ತವರು ಹಾಗೂ ಸಂಘಸಂಸ್ಥೆಗಳವರು ಭಕ್ತಾಧಿಗಳಿಗೆ ನೀರು, ಮಜ್ಜಿಗೆ, ಪಾನಕ ಸೇರಿದಂತೆ ತಿಂಡಿ ತಿನಿಸುಗಳ ಪಧಾರ್ಥಗಳನ್ನು ಪ್ರಸಾದದ ರೂಪದಲ್ಲಿ ಉದಾರವಾಗಿ ಹಂಚಿದರು. ಕಳೆದ 31 ವರ್ಷಗಳಿಂದ ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವಿತರಿಸುತ್ತಿರುವ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀಕಂಠೇಶ್ವರಸ್ವಾಮಿ ಸೇವಾ ಸಮಿತಿಯವರು ಈ ಬಾರಿ 30 ಸಾವಿರ ಸಿಹಿ ಅಂಟಿನುಂಡೆಗಳನ್ನು ಪ್ರಸಾದವಾಗಿ ವಿತರಿಸಿದರು.

Nanjundeshwar Pancha rathotsava in Nanjangud, Mysuru

ಬಾದಾಮಿ,ಗೋಡಂಬಿ,ದ್ರಾಕ್ಷಿ,ಖರ್ಜೂರ ಸೇರಿದಂತೆ ಇನ್ನಿತರ ಪಧಾರ್ಥಗಳನ್ನು ಬಳಸಿ ತಯಾರಿಸುವ ಸಿಹಿ ಅಂಟಿನುಂಡೆಯನ್ನು ಸಿದ್ಧಪಡಿಸಲು ನಗರದ ಶೃಂಗೇರಿ ಶಂಕರಮಠದ ಆವರಣದಲ್ಲಿ 70 ಮಂದಿ ನುರಿತ ಬಾಣಸಿಗರ ತಂಡ ಮೂರು ದಿನಗಳಿಂದ ಬೀಡುಬಿಟ್ಟಿದೆ.
Nanjundeshwar Pancha rathotsava in Nanjangud, Mysuru

ಸಂಜೆವೇಳೆಗೆ ದೇವಾಲಯದ ಮುಂಭಾಗ ಹಾಗೂ ಮೊಗಸಾಲೆಯಲ್ಲಿ ಸಾವಿರಾರು ಸಂಖ್ಯೆಯ ಜನರು ನೆರೆದು ಸಂಜೆ ದೇವಾಲಯದ ಆವರಣದಲ್ಲಿ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿ ಕಪಿಲಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಮುಂದಾಗುವ ಮೂಲಕ ಜಾತ್ರೆಯ ಕಲರವವನ್ನು ಸೃಷ್ಟಿಸಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+