ನಂಜನಗೂಡು: ಮಹದೇವನಗರದ 700 ನಿವಾಸಿಗಳಿಂದ ಮತದಾನ ಬಹಿಷ್ಕಾರ
ತಮ್ಮ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ನಂಜನಗೂಡಿನ ಮಹದೇವ ನಗರದ ಮತದಾರರು ಉಪಚುನಾವಣೆಯ ಮತದಾನದಿಂದ ದೂರ ಉಳಿದಿದ್ದಾರೆ. 700 ಜನ ಮತದಾರರಲ್ಲಿ ಕೇವಲ12 ಜನ ಮತದಾನ ಮಾಡಿದ್ದಾರೆ.
ನಂಜನಗೂಡು, ಏಪ್ರಿಲ್ 9: ತಮ್ಮ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ನಂಜನಗೂಡಿನ ಮಹದೇವ ನಗರದ ಮತದಾರರು ಉಪಚುನಾವಣೆಯ ಮತದಾನದಿಂದ ದೂರ ಉಳಿದಿದ್ದಾರೆ.[LIVE ಗುಂಡ್ಲುಪೇಟೆ: ಮತದಾರರಲ್ಲಿ ಉತ್ಸಾಹ, ಶೇಕಡಾ 17 ಮತದಾನ]
ಮಹದೇವನಗರದಲ್ಲಿ ಸುಮಾರು 700 ಜನ ಮತದಾರರಿದ್ದು ಇಲ್ಲಿವರೆಗೆ ಕೇವಲ 12 ಜನ ಮತದಾನ ಮಾಡಿದ್ದಾರೆ. ಮತದಾನ ಮಾಡುವ ಬದಲು ಇಲ್ಲಿನ ನಾಗರಿಕರು ಗುಂಪು ಸೇರಿ ಜನ ಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ.[LIVE ಗುಂಡ್ಲುಪೇಟೆ: ಮತದಾರರಲ್ಲಿ ಉತ್ಸಾಹ, ಶೇಕಡಾ 17 ಮತದಾನ]

'ಯಾರೇ ಆಯ್ಕೆಯಾಗಿ ಬಂದರೂ ಅಷ್ಟೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಯಾವುದೇ ಅಗತ್ಯ ಸೌಲಭ್ಯಗಳನ್ನೂ ನೀಡುತ್ತಿಲ್ಲ,' ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಆದರೆ ಇಲ್ಲಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಜನರನ್ನು ಮನವೊಲಿಸುವ ಮನಸ್ಸು ಮಾತ್ರ ಮಾಡಿಲ್ಲ.












Click it and Unblock the Notifications