ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಲ್ಲೆಯಲ್ಲಿ ಆರು ಕಡೆ ಸಿದ್ಧವಾದ ‘ನಮ್ಮ ಕ್ಲಿನಿಕ್’, ಇಲ್ಲಿದೆ ವಿವರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್‌, 30: ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆ ನೀಡುವ ಸಲುವಾಗಿ ಇದೀಗ ಮೈಸೂರು ಜಿಲ್ಲೆಯ ಆರು ಪ್ರದೇಶಗಳಲ್ಲಿ "ನಮ್ಮ ಕ್ಲಿನಿಕ್‌" ಸಿದ್ಧವಾಗಿದೆ.

ಮೈಸೂರು ನಗರದ ಹೂಟಗಳ್ಳಿ, ಶ್ರೀರಾಂಪುರ ಮತ್ತು ಯರಗನಹಳ್ಳಿ (ರಮ್ಮನಹಳ್ಳಿ) ಹಾಗೂ ಗ್ರಾಮಾಂತರ ವಿಭಾಗದಲ್ಲಿ ತಿ.ನರಸೀಪುರ, ಎಚ್.ಡಿ.ಕೋಟೆ ಸೇರಿ ಒಟ್ಟು 6 "ನಮ್ಮ ಕ್ಲಿನಿಕ್‌"ಗಳು ಸೇವೆಗೆ ಸಿದ್ಧವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡುತ್ತಿದ್ದಂತೆ ಮೈಸೂರಿನಲ್ಲೂ ಈ ಕ್ಲಿನಿಕ್‌ಗಳು ಸೇವೆಗೆ ಲಭ್ಯವಾಗಲಿವೆ. ''ಸದ್ಯಕ್ಕೆ ಜಿಲ್ಲೆಯಲ್ಲಿ ನಗರ ಸೇರಿ ಆರು ಕಡೆ ಈ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಆಯ್ಕೆ ಮಾಡಿರುವ ಸ್ಥಳಗಳು ಗ್ರಾಮೀಣ ಹಾಗೂ ಅರೆ ನಗರ ವಾಸಿಗಳಿಗೆ ಸುಲಭವಾಗಿ ಸಿಗುವಂತಹ ಪ್ರದೇಶಗಳೇ ಆಗಿವೆ. ಇದರಿಂದ ಎಲ್ಲಾ ಗ್ರಾಮೀಣ ಹಾಗೂ ಅರೆ ನಗರವಾಸಿಗಳು ಸುಲಭವಾಗಿ ಕ್ಲಿನಿಕ್‌ಗೆ ಬಂದು ಸೇರಬಹುದು. ಇದು ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಸಿಎಂ ಚಾಲನೆ ಕೊಟ್ಟ ದಿನದಿಂದಲೇ ಈ ಸೇವೆ ಜನರಿಗೆ ಲಭ್ಯವಾಗಲಿದೆ,'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ತಿಳಿಸಿದ್ದಾರೆ.

41 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ- ಐಸಿಯುಗೆ ಚಾಲನೆ: ಹೇಗಿರಲಿದೆ ಸೇವೆ..?41 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ- ಐಸಿಯುಗೆ ಚಾಲನೆ: ಹೇಗಿರಲಿದೆ ಸೇವೆ..?

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಿಂತ ಭಿನ್ನ

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗಿಂತ ಈ ಕ್ಲಿನಿಕ್ ಭಿನ್ನವಾಗಿರುತ್ತವೆ. ಜನಸಮುದಾಯದ ಆರೋಗ್ಯದ ಬಗ್ಗೆ ಆಯಾ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿಗಾವಹಿಸುತ್ತವೆ. ಅಲ್ಲದೇ ಕಾಲಕಾಲಕ್ಕೆ ಮನೆಗೆ ಭೇಟಿ ನೀಡುವ ವ್ಯವಸ್ಥೆಯೂ ಇದೆ. ಆದರೆ, ಕ್ಲಿನಿಕ್‌ಗಳು ಜನರ ಅಗತ್ಯಕ್ಕಷ್ಟೇ ಲಭ್ಯವಿರುತ್ತದೆ.

Namma Clinic ready at six locations of Mysuru district, here See details

ಅವರು ಅಗತ್ಯವಿದ್ದಾಗ ಅಷ್ಟೇ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೇ ಖಾಸಗಿ ಕ್ಲಿನಿಕ್‌ಗಳ ಮಾದರಿಯಲ್ಲಿ ಎಲ್ಲಾ ಸೌಲಭ್ಯಗಳು ಕೂಡ ಲಭ್ಯವಿರುತ್ತದೆ. ಜೊತೆಗೆ ಟಿಲಿಮೆಡಿಸಿನ್ ಹಾಗೂ ಅತ್ಯಾಧುನಿಕ ಸೇವೆಗಳನ್ನೂ ಪೂರೈಸುವ ಉದ್ದೇಶವಿದೆ. ಸದ್ಯಕ್ಕೆ ಈ ಸೇವೆ ಯಾವ ಮಟ್ಟದಲ್ಲಿ ಜನರಿಗೆ ಲಭ್ಯವಾಗಲಿದೆ ಎಂಬುದು ಕ್ಲಿನಿಕ್ ಆರಂಭದ ಬಳಕವಷ್ಟೇ ತಳಿಯಲಿದೆ.

Namma Clinic ready at six locations of Mysuru district, here See details

ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌ಗಳ ಆರಂಭ

ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಪ್ರಾರಂಭಿಸುವ ಯೋಜನೆ ಇದಾಗಿದ್ದು, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಕ್ಲಿನಿಕ್ ತಲೆ ಎತ್ತಿವೆ. ನಗರದ ಬಡ ಹಾಗೂ ಮಧ್ಯಮ ವರ್ಗದವರು, ಕೊಳಚೆ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ವಾರ್ಡ್ ಹಾಗೂ ಪಂಚಾಯತಿ ಮಟ್ಟದಲ್ಲಿ ಈ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಕ್ಲಿನಿಕ್‌ಗಳು ನೆರವಾಗಲಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ತಿಳಿಸಿದ್ದಾರೆ. ಈಗಾಗಲೇ ಮೈಸೂರಿನ 6 ಕ್ಲಿನಿಕ್‌ಗಳಿಗೆ ವೈದ್ಯರು ಸೇರಿದಂತೆ ಎಲ್ಲಾ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ರಾಜ್ಯಾದ್ಯಂತ ಇರುವ ಎಲ್ಲಾ ಕ್ಲಿನಿಕ್‌ಗಳನ್ನೂ ಸಿಎಂ ಏಕ ಕಾಲದಲ್ಲಿ ಸೇವೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಜಿಲ್ಲೆಯ ಆರು ಕ್ಲಿನಿಕ್‌ಗಳೂ ಅಂದಿನಿಂದಲೇ ಸಾರ್ವಜನಿಕರ ಬಳಕೆಗೆ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Namma Clinic ready in six locations of Mysuru district to provide essential health care services for public. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X