ಮೈಸೂರಿನಲ್ಲಿ ಝೊಮೆಟೊ ಕಂಪನಿ ನೌಕರರ ಪ್ರತಿಭಟನೆ

ಮೈಸೂರು, ಜುಲೈ 4: ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಝೊಮೆಟೊ ಕಂಪನಿ ವಿರುದ್ಧ ನೌಕರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಝೊಮೆಟೊ ರೈಡರ್ಸ್ ಯೂನಿಯನ್ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಯೂನಿಯನ್ ಮುಖಂಡ ರೆಹಮಾನ್ ಮಾತನಾಡಿ, ಗ್ರಾಹಕರಿಗೆ ಆಹಾರ ಪೂರೈಕೆ ಮಾಡುವ ನಮಗೇ ಸೂಕ್ತ ಸೌಲಭ್ಯವಿಲ್ಲ. ನಗರದ ಯಾವುದೇ ಭಾಗವಿದ್ದರೂ ಸೇವೆ ನೀಡುತ್ತೇವೆ. ಆದರೆ ನಮಗೆ ಸಿಗುತ್ತಿರುವ ಸೌಲಭ್ಯ ಕಡಿಮೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನವಶ್ಯಕವಾಗಿ ಯಾರನ್ನೋ ಕೆಲಸಕ್ಕೆ ಸೇರಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಪದೇ ಪದೇ ಆರ್ಡರ್ ಗೆ ದರ ಬದಲಾಯಿಸಬಾರದು. ಚಾಲಕರ ಸಮಸ್ಯೆಗಳನ್ನು ಬಗೆಹರಿಸಬೇಕು. ಚಾಲಕರಿಗೆ ಅಪಘಾತ ವಿಮೆಯನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

Mysuru Zomato delivery boys protest against company rules

ಡಬ್ಬಲ್ ಆರ್ಡರ್ ಗಳನ್ನು ನೀಡಬೇಕು. ಪ್ರೈಮ್ ಸೇವೆಯನ್ನು ರದ್ದುಪಡಿಸಬೇಕು. ಮಿನಿಮಮ್ ಗ್ಯಾರಂಟಿ ನೀಡುವಂತಿರಬೇಕು. ಕ್ಯಾಶ್ ಡೆಪಾಸಿಟ್ ದರ ಹೆಚ್ಚಳ ಮಾಡಬೇಕು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವವರನ್ನು ಬಿಟ್ಟು ಹೊಸ ನೇಮಕಾತಿ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+