ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ

ಮೈಸೂರು, ಮೇ 13: ಮೈಸೂರು ವಿಶ್ವವಿದ್ಯಾಲಯ ವಿದೇಶಿ ವಿದ್ಯಾರ್ಥಿಗಳಿಗಾಗಿ ಹೊಸದೊಂದು ಯೋಜನೆಯನ್ನು ಘೋಷಿಸಲು ಮುಂದಾಗಿದೆ. ನೋಟು ಅಮಾನ್ಯೀಕರಣ ಮತ್ತು ದುಬಾರಿ ಶುಲ್ಕ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಸಿತ ಕಂಡಿತ್ತು.ಇದರಿಂದ ಚಿಂತೆಗೀಡಾಗಿದ್ದ ವಿವಿ ಈ ಸಾಲಿನಿಂದಲೇ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಶೇ.50 ರಷ್ಟು ಶುಲ್ಕವನ್ನು ಕಡಿತ ಮಾಡಲು ನಿರ್ಧರಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ 65 ವಿಭಾಗಗಳಿವೆ. ಖಾಸಗಿ ವಿವಿಯಲ್ಲಿ ಕೇವಲ ನಾಲ್ಕೈದು ಪಿಜಿ ವಿಭಾಗವಿರುತ್ತದೆ. ಆದರೆ 65 ವಿಭಾಗ ಹೊಂದಿರುವ ಮೈಸೂರು ವಿವಿ ಮುಂಚೂಣಿಯ ಸ್ಥಾನವನ್ನು ಪಡೆದಿದೆ.

ದೇಶದ ಉನ್ನತ ವಿದ್ಯಾಲಯಗಳಲ್ಲಿ ಮುಂಚೂಣಿ ಸ್ಥಾನ ಪಡೆದಿರುವ ಖ್ಯಾತಿ ಮೈಸೂರು ವಿವಿಗಿರುವ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕಾಗಿ ವಿದೇಶಿಗರು ಮುಗಿ ಬೀಳುವ ಕಾಲವೊಂದಿತ್ತು. ಕಳೆದ ನಾಲ್ಕು ವರ್ಷದಿಂದ ಹತ್ತಾರು ರಾಷ್ಟ್ರಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಸಹ ನಡೆಸುತ್ತಿದ್ದರು.

Mysuru University decreased 50% of entrance fees for foreigners

ಆದರೆ ಅಮಾನ್ಯೀಕರಣ ಮತ್ತು ಹೆಚ್ಚಿನ ಶುಲ್ಕದಿಂದಾಗಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ದಿಢೀರ್ ಕುಸಿತ ಕಂಡಿತ್ತು. ಇದರಿಂದ ಎಚ್ಚೆತ್ತುಕೊಳ್ಳಲು ವಿವಿ ಈ ನಿರ್ಧಾರ ಕೈಗೊಂಡಿದೆ.

ಕಳೆದೆರಡು ವರ್ಷಗಳಿಂದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 1000 ದಿಂದ 1500 ಕೊರತೆ ಎದ್ದು ಕಂಡಿತು. ಈ ಹಿನ್ನೆಲೆಯಲ್ಲಿ ಈ ವರ್ಷದಿಂದಲೇ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶೇ.50ರಷ್ಟು ಶುಲ್ಕ ಕಡಿತಗೊಳಿಸಲಾಗಿದೆ.

ಕಳೆದ ತಿಂಗಳು ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಶುಲ್ಕ ಕಡಿತ ಮಾಡಲು ಒಪ್ಪಿಗೆ ಸೂಚಿಸಲಾಯಿತು. ಈ ಸಾಲಿನಲ್ಲಿ ದಾಖಲಾಗುವ ಪ್ರತಿ ವಿದೇಶಿ ವಿದ್ಯಾರ್ಥಿಗಳು 30 ಸಾವಿರ ಪಾವತಿಸಿದರೆ ಸಾಕು, ಇನ್ನು ಮುಂದೆ ಮೈಸೂರು ವಿವಿಯಲ್ಲಿ ಸುಲಭವಾಗಿ ವಿದ್ಯಾಭ್ಯಾಸ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+