Mysuru Riots: ಅಘೋಷಿತ ಬಂದ್ ವಾತಾವರಣ: ಸರ್ಕಾರದ ವಿರುದ್ಧ ಸಂಸದ ಕೆಂಡ

ಬೆಂಗಳೂರು, ಫೆಬ್ರವರಿ 11: ಮೈಸೂರಿನಲ್ಲಿ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೊಮವಾರ (ಫೆಬ್ರವರಿ 10) ರಂದು ರಾತ್ರಿ ನಡೆದ ಗಲಾಟೆಗೆ ಅಪ್ಡೇಟ್ ಸಿಕ್ಕಿದೆ. ಠಾಣೆ ಬಳಿಕ ನಡೆದ ಹೈಡ್ರಾಮಾ, ಗಲಾಟೆ ವೇಳೆ ಕಿಡಿಗೇಡಿಗಳ ಗುಂಪನಿಂದ 14 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಅಷ್ಟೇ ಅಲ್ಲದೇ ಪೊಲೀಸರ ಸುಮಾರು 10 ವಾಹನಗಳಿಗೆ ಹಾನಿ ಉಂಟಾಗಿದೆ. ಇದಕ್ಕೆಲ್ಲವು ಸರ್ಕಾರದ ತುಷ್ಠೀಕರಣ ಕಾರಣವೆಂದು ಬಿಜೆಪಿ ಸಂಸದ ಪಿಸಿ ಮೋಹನ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮುಸ್ಲಿಂ ಸಹೋದರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕೀಯವು ಈ ಕಾನೂನು ಬಾಹಿರತೆಯನ್ನು ನೇರವಾಗಿ ಉತ್ತೇಜಿಸುತ್ತದೆ. ಕಾನೂನು ಉಲ್ಲಂಘಿಸುವವರನ್ನು ಪ್ರೋತ್ಸಾಹಿಸುತ್ತಿದೆ. ಕಾನೂನು ಜಾರಿಯನ್ನು ದುರ್ಬಲಗೊಳಿಸುತ್ತದೆ. ಕರ್ನಾಟಕಕ್ಕೆ ಉತ್ತಮ ನಾಯಕತ್ವ ಬೇಕಿದೆ ಎಂದು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಕಿಡಿ ಕಾರಿದ್ದಾರೆ.

Mysuru Udayagiri Riots Over Poster Congress Govt s Appeasement Fueled the Riots P C Mohan

ಮೈಸೂರು ಜನತೆಯನ್ನೂ ಈ ಘಟನೆ ಬೆಚ್ಚಿ ಬೀಳಿಸಿದೆ. ಕಾಂಗ್ರೆಸ್ ತುಷ್ಠೀಕರಣ ರಾಜಕೀಯದಿಂದ ಕೆಲವರಿಗೆ ಉತ್ತೇಜನ ಸಿಕ್ಕಂತಾಗುತ್ತಿದೆ ಎಂದು ಹಿಂದಿನಿಂದಲೂ ಬಿಜೆಪಿ ಹೇಳುತ್ತಿತ್ತು. ಇದೀಗ ಅಂಥದ್ದೇ ಆರೋಪಗಳನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಎದುರಿಸುತ್ತಿದೆ.

ಉದಯಗಿರಿ ಠಾಣೆಗೆ RTO ಅಧಿಕಾರಿಗಳು

ತಡರಾತ್ರಿ ನಡೆದ ಗಲಾಟೆಯಿಂದ ಅನೇಕ ವಾಹನಗಳಿಗೆ ಹಾನಿ ಆಗಿಯವೆ. ಈ ಡ್ಯಾಮೇಜ್ ಆದ ವಾಹನ ಮಹಜರು ಮಾಡಲು ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳು ಇಂದು ಮಂಗಳವಾರ ಮಧ್ಯಾಹ್ನ ಉದಯಗಿರಿ ಠಾಣೆಗೆ ಆಗಮಿಸಿದ್ದಾರೆ. ವಾಹನಗಳ ಮಹಜರು ಮಾಡಿ ಆಗ ಹಾನಿ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಅಘೋಷಿತ ಬಂದ್

ಗಲಾಟೆ ಬಳಿಕ ಠಾಣೆ ವ್ಯಾಪ್ತಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಮಾಡಲಾಗುತ್ತಿದೆ. ಸ್ಥಳದಲ್ಲಿ ಪೊಲೀಸರ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ರಸ್ತೆಯಲ್ಲಿ ಯಾರು ಓಡಾಡದಂತೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಸ್ಥಳವು ಉದ್ವಿಘ್ನಗೊಂಡು ತಣ್ಣಗಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತದಿದೆ. ಹೀಗಾಗಿ ಮತ್ತಾವುದೇ ಅಹಿಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಘಟನೆ ಹಿನ್ನೆಲೆ, ಆಗಿದ್ದೇನು

ಇತ್ತೀಚೆಗೆ ದಹೆಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸೋತಿದ್ದು, ಬಿಜೆಪಿಗೆ ಬಹುಮತ ಬಂದಿದೆ. ಈ ಕಾರಣಕ್ಕೆ ಯುವಕನೊಬ್ಬ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಅಖಿಲೇಶ್ ಯಾದವ್ ಅವರ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ್ದಾನೆ. 3ಈಡಿಯಟ್ಸ್ ಅಂತಲೂ ಬರೆದುಕೊಂಡು ಪೋಸ್ಟ್ ಶೇರ್ ಮಾಡಿಕೊಂಡಿದ್ದಾನೆ. ಈ ಘಟನೆ ಸಂಬಂಧ ನಡೆದ ಮಾತುಕತೆ ಉದ್ವಿಘ್ನ ಸ್ಥಿತಿ ತಲುಪಿತು.

ಪೋಸ್ಟ್ ಹಾಕಿದ ಕಲ್ಯಾಣ ನಗರದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನನ್ನು ಬಂಧಿಸಿದ್ದೇವೆ ಎಂದು ಹೇಳಿದರೂ ಕೇಳದ ಮುಸ್ಲಿಂ ಯುವಕರ ಗುಂಪು ಚೀಲದಲ್ಲಿ ತಂದಿದ್ದ ಕಲ್ಲನ್ನು ಪೊಲೀಸರತ್ತ ಎಸೆದಿದ್ದಾರೆ. ಸ್ಥಳಕ್ಕೆ ಬಂದ ಡಿಸಿಪಿ ಕಾರಿನ ಮೇಲೂ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ಎಷ್ಟೇ ಹರಸಾಹಸ ಪಟ್ಟರು ನಿಯಂತ್ರಸಲು ಆಗದೇ ಹೈಡ್ರಾಮಾವೇ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+