Traffic Police: ಟ್ರಾಫಿಕ್ ಪೊಲೀಸರಿಂದ ವಿಶೇಷ ಅಭಿಯಾನ; ನಿಯಮ ಮೀರಿದರೆ ಕ್ರಮ ಗ್ಯಾರಂಟಿ

ಸಂಚಾರಿ ನಿಯಮಗಳು ಇರುವುದೇ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ವಾಹನ ಸವಾರರ ಸುರಕ್ಷತೆಗಾಗಿ. ಆದರೆ ಕೆಲವು ವಾಹನ ಸವಾರರು, ಚಾಲಕರು ಟ್ರಾಫಿಕ್ ರೂಲ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ತಮ್ಮ ಜೀವದ ಜೊತೆಗೆ ಸಾರ್ವಜನಿಕರ ಜೀವದ ಜೊತೆಗೂ ಚಲ್ಲಾಟವಾಡುತ್ತಾರೆ. ಈಗ ಮಹಾನಗರಗಳಲ್ಲಿ ಬಹುತೇಕ ಕಡೆ ಕ್ಯಾಮರಾ ಇರುವ ಕಾರಣ, ಕೆಲವು ವಾಹನ ಚಾಲಕರು ನಂಬರ್ ಪ್ಲೇಟ್ ಮರೆಮಾಚುವ ಕಳ್ಳಾಟ ಕೂಡ ಮಾಡುತ್ತಿದ್ದಾರೆ. ಇಂತಹ ವರ್ತನೆಗಳಿಗೆ ಬ್ರೇಕ್ ಹಾಕಲು ಇದೀಗ ಮೈಸೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಮೈಸೂರು ನಗರದಲ್ಲಿ ಇತ್ತೀಚೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಆರಂಭಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವ ವೃತ್ತಗಳ ಬಳಿ ತಮ್ಮ ನಂಬರ್ ಪ್ಲೇಟ್ ಕ್ಯಾಮೆರಾಗಳಿಗೆ ಕಾಣದಂತೆ ಬ್ಯಾಗ್ ಇಲ್ಲವೇ ಇತರ ವಸ್ತುಗಳನ್ನು ಅಡ್ಡಲಾಗಿ ಇಡುವುದು, ವಾಹನ ಸಂಖ್ಯೆಯನ್ನು ಚಿಕ್ಕದಾಗಿ ಬರೆಸುವುದು ಕಂಡುಬಂದಿದೆ, ಇದನ್ನೆಲ್ಲಾ ಗಮನಿಸಿರುವ ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಲು ವಿಶೇಷ ಕ್ರಮಕ್ಕೆ ಮುಂದಾಗಿದ್ದಾರೆ.

Mysuru Traffic Police Launch Special Drive Against Traffic Rule Violations

ಇತ್ತೀಚೆಗೆ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದ ಹಾಗೂ ನಂಬರ್ ಪ್ಲೇಟ್ ರಹಿತವಾಗಿ ಚಾಲನೆ ಮಾಡುತ್ತಿದ್ದ 88 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 2024ರ ಸಾಲಿನಲ್ಲಿ ಈವರೆಗೆ ಈ ಮಾದರಿಯ ಒಟ್ಟು 3631 ಪ್ರಕರಣಗಳನ್ನು ದಾಖಲಿಸಿಕೊಂಡು ಭಾರತೀಯ ಮೋಟಾರ್ ವಾಹನ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ದಾರಿಗೆ ಬಂದ ಸವಾರರು

ಪೊಲೀಸರು ಕಠಿಣ ಕ್ರಮಕ್ಕೆ ಮುಂದಾದ ಬಳಿಕ ಕೆಲವು ವಾಹನ ಸವಾರರ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ. ನಗರಾದ್ಯಂತ ಬಹುತೇಕರು ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಕಾನೂನು ಬಾಹಿರವಾಗಿ ಇಬ್ಬರಿಗಿಂತ ಹೆಚ್ಚು ಮಂದಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಕಂಡು ಬಂದಿದ್ದು, ಗುರುವಾರ ಒಂದೇ ದಿನ ನಿಯಮ ಉಲ್ಲಂಘಿಸಿದ ಅಂದಾಜು 150ಕ್ಕೂ ಹೆಚ್ಚು ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗ ಎಸಿಪಿ ಪರಶುರಾಮಪ್ಪ ಮಾಹಿತಿ ನೀಡಿದ್ದಾರೆ.

ಒಂದೇ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಚಾಲನೆ ಮಾಡಿದರೆ ವಾಹನ ನಿಯಂತ್ರಣ ತಪ್ಪಬಹುದು, ಅಪಘಾತವಾಗಿ ಜೀವಕ್ಕೆ ಅಪಾಯ ಬರುವ ಸಾಧ್ಯತೆಯಿದ್ದು, ಇತರೆ ವಾಹನ ಸವಾರರಿಗೂ ತೊಂದರೆಯಾಗುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು, ಕೂಡ ಅಪಾಯಕಾರಿ. ಆದ್ದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+