ಮತದಾರರನ್ನು ಸೆಳೆಯಲು ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಕೈಗೊಂಡ ಯೋಜನೆಗಳಿವು

ಮೈಸೂರು, ಮಾರ್ಚ್ 14: ದಸರೆ ವೇಳೆ ಚಾಮುಂಡಿ ಬೆಟ್ಟದಲ್ಲಿ ಅಳವಡಿಸುವ ಸುಸ್ವಾಗತ ಮಾದರಿಯಲ್ಲಿಯೇ ಲೋಕಸಭಾ ಚುನಾವಣೆಗೆ ಮತದಾನ ಜಾಗೃತಿ ಮೂಡಿಸಲು 'ನಿಮ್ಮ ಮತ ನಿಮ್ಮ ಹಕ್ಕು' ಎಂಬ ಸಾಲುಗಳ ವಿದ್ಯುತ್ ದೀಪಾಲಂಕಾರ ಮಾಡಲು ಜಿಲ್ಲಾ ಸ್ವೀಪ್ ಸಮಿತಿ ಮುಂದಾಗಿದೆ.

ಅಲ್ಲದೇ, ಎಲ್ಲಾ ತಾಲೂಕಿನ ಮುಖ್ಯ ವೃತ್ತಗಳಲ್ಲಿಯೂ ವಿದ್ಯುತ್ ದೀಪಾಲಂಕಾರ ಮಾಡಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಎಚ್.ಡಿ.ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

Mysuru Sweeping Committee has decided to make voting awareness

ಹೆದ್ದಾರಿಗಳಲ್ಲಿ ಚುನಾವಣಾ ಪ್ರಚಾರದ ಫಲಕಗಳನ್ನು ಅಳವಡಿಸಿ, ಕೆಎಸ್ ಆರ್‌ಟಿಸಿ ಬಸ್‌ಗಳಲ್ಲಿ ಪೋಸ್ಟರ್ ಹಾಕಿ ಪ್ರಚಾರ ಕೈಗೊಳ್ಳಲಾಗುವುದು.ಹಾಲಿನ ಪ್ಯಾಕೇಟ್‌ನಲ್ಲಿಯೂ ಪ್ರತಿ ದಿನ ಚುನಾವಣೆಗೆ ಸಂಬಂಧಿಸಿದ ಘೋಷ ವಾಕ್ಯಗಳು ಹಾಗೂ ಚುನಾವಣಾ ದಿನಾಂಕವನ್ನು ಮುದ್ರಿಸಲಾಗುತ್ತದೆ.

Mysuru Sweeping Committee has decided to make voting awareness

ಎಚ್.ಡಿ.ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ಹಾಡಿಗಳು ಹಾಗೂ ಹೆದ್ದಾರಿಗಳಲ್ಲಿ 'ನಿಮ್ಮ ಮತ-ನಿಮ್ಮ ಹಕ್ಕು' ಫಲಕಗಳನ್ನು ಅಳವಡಿಸುವುದು, ಬೀದಿ ನಾಟಕಗಳು, ಜಾನಪದ ಕಲಾವೃಂದವರಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆಯೂ ಸಭೆಯಲ್ಲಿ ಸ್ವೀಪ್ ಸಮಿತಿ ಅಧಿಕಾರಿಗಳಿಗೆ ಜ್ಯೋತಿ ಅವರು ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+