ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Suttur Jatra Mahotsava 2023 : ಜನವರಿ 18ರಿಂದ ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆ: ಇಲ್ಲಿದೆ ಕಾರ್ಯಕ್ರಮಗಳ ಮಾಹಿತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು ಜನವರಿ 16: ವರ್ಷಕ್ಕೊಮ್ಮೆ ಭಕ್ತರು ಕಾಯುವ ಸುತ್ತೂರು ಜಾತ್ರೆ ಜನವರಿ 18ರಿಂದ 23ರವರೆಗೆ 6 ದಿನಗಳ ಕಾಲ ಜರುಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಭರದಿಂದ ಸಾಗುತ್ತಿದೆ.

ಜಾತ್ರಾ ಮಹೋತ್ಸವ ಜರುಗುವ 6 ದಿನಗಳ ಮಹಾ ದಾಸೋಹ ಅಂಗಳ ಸೇರಿದಂತೆ ಒಟ್ಟು 5 ಪ್ರದೇಶದಲ್ಲಿ ಪ್ರಸಾದ ವಿನಿಯೋಗ ನಡೆಯಲಿದೆ. ಮಹಾದಾಸೋಹ ಆವರಣದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಸರತಿ ಸಾಲಿನಲ್ಲಿ ತೆರಳಿ ಪ್ರಸಾದ ಸ್ವೀಕರಿಸಲು ಅನುಕೂಲ ಕಲ್ಪಿಸಲಾಗಿದೆ. ದಾಸೋಹ ಪ್ರಸಾದ ತಯಾರಿಗೆ 500 ಜನ ನುರಿತ ಬಾಣಸಿಗರ ತಂಡ ಸನ್ನದ್ಧವಾಗಿದೆ.

 ಬೆಂಗಳೂರಿಂದ ಮೈಸೂರು ತಲುಪಿದ ಮೊದಲ ಇ-ಬಸ್: ಎಷ್ಟು ಗಂಟೆ ಪ್ರಯಾಣಿಸಿತು? ಮುಂದೆ ಯಾವ ನಗರಗಳ ನಡುವೆ ಸಂಚರಿಸಲಿದೆ? ಮಾಹಿತಿ ಇಲ್ಲಿದೆ ಬೆಂಗಳೂರಿಂದ ಮೈಸೂರು ತಲುಪಿದ ಮೊದಲ ಇ-ಬಸ್: ಎಷ್ಟು ಗಂಟೆ ಪ್ರಯಾಣಿಸಿತು? ಮುಂದೆ ಯಾವ ನಗರಗಳ ನಡುವೆ ಸಂಚರಿಸಲಿದೆ? ಮಾಹಿತಿ ಇಲ್ಲಿದೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಜನವರಿ 19ರಂದು ಸಾಮೂಹಿಕ ವಿವಾಹ, ಹಾಲ್ಹರವಿ ಉತ್ಸವ, 20ರಂದು ರಥೋತ್ಸವ, 21ರಂದು ಶ್ರೀಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷ ದೀಪೋತ್ಸವ, 22ರಂದು ತೆಪ್ಪೋತ್ಸವ ಹಾಗೂ ಕೊಂಡೋತ್ಸವ ಜೊತೆಗೆ ಇನ್ನಿತರ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ಜರುಗಲಿವೆ ಎಂದರು.

Mysuru Suttur Jatra 2023 Held At January 18th To January 23

ಜಾತ್ರೆಯ ಅಂಗವಾಗಿ ಜರುಗುವ 29ನೇ ವರ್ಷದ ರಾಜ್ಯಮಟ್ಟದ ಭಜನಾ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ 700ಕ್ಕೂ ಹೆಚ್ಚು ಪುರುಷ, ಮಹಿಳಾ ಮತ್ತು ಮಕ್ಕಳ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. 18ರಂದು ಭಜನಾಗೀತೆಗಳನ್ನು ಒಳಗೊಂಡಿರುವ 'ಭಜನಾಂಜಲಿ', 21ರ ಶನಿವಾರ ಸಿರಿಧಾನ್ಯಗಳ ಮಹತ್ವ ಸಾರುವ 'ಸಿರಿಧಾನ್ಯ ಐಸಿರಿ' ಕೃತಿಗಳು ಬಿಡುಗಡೆಯಾಗಲಿದೆ ಎಂದು ಹೇಳಿದರು.

6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೃಷಿ ವಿಚಾರ ಸಂಕಿರಣ, ಚಿತ್ರ ಬರೆಯುವ ಸ್ಪರ್ಧೆ, ಚಿತ್ರಸಂತೆ, ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಕ್ಯಾನ್ಸರ್ ತಪಾಸಣಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ದೋಣಿವಿಹಾರ, ದೇಸೀ ಆಟಗಳ ಸ್ಪರ್ಧೆ, ಸಾಂಸ್ಕೃತಿಕ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, 6 ದಿನಗಳ ವರ್ಣರಂಜಿತ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

English summary
Mysuru Sattur Jatra Mahotsava secretary S. P. Manjunath give more information about Suttur Jatra 2023. and Suttur Jatra 2023 held at january 18th to january 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X