ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ರೇವಾ ನಡುವೆ ನೂತನ ರೈಲು ಸೇವೆ ಆರಂಭ

By Gururaj
|
Google Oneindia Kannada News

ಮೈಸೂರು, ಜೂನ್ 27 : ನೈಋತ್ಯ ರೈಲ್ವೆ ಮೈಸೂರು ಮತ್ತು ರೇವಾ ಪಟ್ಟಣದ ನಡುವೆ ರೈಲು ಸಂಚಾರವನ್ನು ಆರಂಭಿಸಿದೆ. ವಾರದಲ್ಲಿ ಎರಡು ದಿನ ಒಂದು ದಿನ ಈ ರೈಲು ಮೈಸೂರು ಮತ್ತು ಮಧ್ಯಪ್ರದೇಶದ ನಡುವೆ ಸಂಚಾರ ನಡೆಸಲಿದೆ.

ಮೈಸೂರು ಹಾಗೂ ಮಧ್ಯಪ್ರದೇಶದ ರೇವಾ ಪಟ್ಟಣದ ನಡುವೆ ಈ ರೈಲು ಜೂನ್ 28ರಿಂದ ವಾರದಲ್ಲಿ ಎರಡು ದಿನ ಸಂಚಾರ ನಡೆಸಲಿದೆ. ಮೈಸೂರಿನಿಂದ ಹೊರಡುವ ರೈಲು ಬೆಂಗಳೂರು, ರಾಯಚೂರು, ಕಲಬುರಗಿ, ಮಹಾರಾಷ್ಟ್ರ ಮೂಲಕ ಮಧ್ಯಪ್ರದೇಶದ ರೇವಾ ಪಟ್ಟಣಕ್ಕೆ ತಲುಪಲಿದೆ.

ಹವಾನಿಯಂತ್ರಿತ ರೈಲ್ವೆ ಬೋಗಿಗಳ ಬ್ಲಾಂಕೆಟ್‌ 2 ತಿಂಗಳಿಗೊಮ್ಮೆ ವಾಷ್‌ ಹವಾನಿಯಂತ್ರಿತ ರೈಲ್ವೆ ಬೋಗಿಗಳ ಬ್ಲಾಂಕೆಟ್‌ 2 ತಿಂಗಳಿಗೊಮ್ಮೆ ವಾಷ್‌

ರೈಲು ಸಂಖ್ಯೆ 06229 ಮೈಸೂರು-ರೇವಾ ರೈಲು ಪ್ರತಿ ಗುರುವಾರ 7.20ಕ್ಕೆ ಮೈಸೂರಿನಿಂದ ಹೊರಡಲಿದೆ. ಶನಿವಾರ ಬೆಳಗ್ಗೆ 5.15ಕ್ಕೆ ರೇವಾಕ್ಕೆ ತಲುಪಲಿದೆ. 06230 ನಂಬರ್‌ನ ರೈಲು ರೇವಾದಿಂದ ಪ್ರತಿ ಶನಿವಾರ 1.30ಕ್ಕೆ ಹೊರಡಲಿದ್ದು, ಭಾನುವಾರ 2.50ಕ್ಕೆ ಮೈಸೂರು ತಲುಪಲಿದೆ.

Mysuru-Rewa special express train introduced

ಮೈಸೂರಿನಿಂದ ಹೊರಡುವ ರೈಲು ಮಂಡ್ಯ, ಕೆಂಗೇರಿ, ಬೆಂಗಳೂರು ರೈಲು ನಿಲ್ದಾಣ, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿತ್ರದುರ್ಗ, ಬಳ್ಳಾರಿ, ಗುಂತಕಲ್, ಅದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಕಲಬುರಗಿ ಮೂಲಕ ಮಹಾರಾಷ್ಟ್ರ ತಲುಪಲಿದ್ದು ಅಲ್ಲಿಂದ ರೇವಾಗೆ ಸಂಚರಿಸಲಿದೆ.

ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಈ ರೈಲು 4 ಎಸಿ ದರ್ಜೆಯ ಬೋಗಿ, 8 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, 2 ಸಾಮಾನ್ಯ ಬೋಗಿಯನ್ನು ಹೊಂದಿದೆ. ಜುಲೈ 22ರ ತನಕ ಈ ರೈಲು ಮೈಸೂರು-ರೇವಾ ನಡುವೆ ಸಂಚಾರ ನಡೆಸಲಿದೆ.

English summary
Indian Railways will run Mysuru-Rewa Mysuru Weekly Special Express for long distance passengers. Train No. 06229 will leave Mysuru at 7.20 a.m. on Thursdays from June 28, 2018 and reach Rewa at 5.15 a.m. on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X