ಮೈಸೂರು ಕಾರಾಗೃಹದ ಮೇಲೆ ದಿಢೀರ್ ಪೊಲೀಸ್ ದಾಳಿ
ಮೈಸೂರು, ಏಪ್ರಿಲ್ 17:ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದೆಂದು ನಿರ್ಧರಿಸಿರುವ ಪೊಲೀಸರು ನಗರದ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡರು.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಇದೇ ವೇಳೆ ಖೈದಿಯೋರ್ವರ ಬಳಿ 1900 ರೂ ಹಣ ದೊರಕಿದೆ. ನಗರ ಪೊಲೀಸ್ ಆಯುಕ್ತ ಕೆ. ಟಿ ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ನೇತೃತ್ವದಲ್ಲಿ ಸುಮಾರು 160 ಮಂದಿ ಪೊಲೀಸರು ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ದಾಳಿ ಕಾರ್ಯಕ್ಕಾಗಿ ಪೊಲೀಸರು 17 ತಂಡಗಳನ್ನು ರಚಿಸಿಕೊಂಡಿದ್ದರು.

ತಂಡದಲ್ಲಿದ್ದ ಪೊಲೀಸರು ಜೈಲು ಆವರಣದ ಪ್ರತಿ ಬ್ಯಾರಕ್ ಗಳನ್ನು ಕೂಡ ಕುಲಂಕಷವಾಗಿ ಪರಿಶೀಲಿಸಿದರು. ಪರಿಶೀಲನೆ ಬಳಿಕ 1900 ರೂ ಹಣ ದೊರೆತಿದ್ದು, ಈ ಹಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಗರ ಪೊಲೀಸರು ಪಥ ಸಂಚಲನ ನಡೆಸಿ ಅರಿವು ಮೂಡಿಸಿದರು.












Click it and Unblock the Notifications