ಐಎಂಎ ವಂಚನೆ: ಮೈಸೂರಿಗರಿಗೆ ಇಲ್ಲೇ ದೂರು ನೀಡುವಂತೆ ಸೂಚನೆ
ಮೈಸೂರು, ಜೂನ್ 12: ಐಎಂಎ ಜುವೆಲ್ಸ್ ಕಂಪನಿಯಿಂದ ಹೆಚ್ಚು ಬಡ್ಡಿ ನೀಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿ ವಂಚಿಸಿದ ಬಗ್ಗೆ ಸಾರ್ವಜನಿಕರು ಬೆಂಗಳೂರಿನಲ್ಲಿ ದೂರು ನೀಡುತ್ತಿದ್ದು, ಮೈಸೂರಿನಲ್ಲಿಯೂ ಅನೇಕ ಮಂದಿ ವಂಚನೆಗೆ ಒಳಗಾಗಿರುವ ಸುದ್ದಿ ತಿಳಿದುಬಂದಿದೆ. ಅವರೆಲ್ಲರೂ ಎಲ್ಲಿ ದೂರು ನೀಡಬೇಕೆಂಬ ಗೊಂದಲದಲ್ಲಿದ್ದಾರೆ. ಹಾಗಾಗಿ ಐಎಂಎಯಿಂದ ಮೋಸ ಹೋಗಿದ್ದಲ್ಲಿ ನಗರದ ಠಾಣೆಗಳಲ್ಲಿಯೇ ದೂರನ್ನು ನೀಡಬಹುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮೈಸೂರು ನಗರದ ಸಾರ್ವಜನಿಕರು ಬೆಂಗಳೂರಿನ ಐಎಂಎ ಜುವೆಲ್ಸ್ ಕಂಪನಿಗೆ ಹಣ ಕಟ್ಟಿ ಮೋಸ ಹೋಗಿದ್ದಲ್ಲಿ ಎಲ್ಲ ಅವಶ್ಯಕ ದಾಖಲಾತಿಯೊಂದಿಗೆ ನಗರದ ತಮ್ಮ ವಿಳಾಸದ ವ್ಯಾಪ್ತಿಯ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರನ್ನು ನೀಡಬಹುದಾಗಿದೆ ಎಂದಿದ್ದಾರೆ.

ಮೈಸೂರು ನಗರದ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications