ಹಣ ವಂಚಿಸಿದ್ದ ಇರಾನ್ ವ್ಯಕ್ತಿಗಳನ್ನು ಬಂಧಿಸಿದ ಮೈಸೂರು ಪೊಲೀಸರು

ಮೈಸೂರು, ಫೆಬ್ರವರಿ 27: ಮಾಂಡೋವಿ ಮೋಟಾರ್ಸ್ ನ ಟ್ರೂ ವ್ಯಾಲ್ಯೂ ವಿಭಾಗದ ಸಹಾಯಕ ಲೆಕ್ಕಾಧಿಕಾರಿಯ ಗಮನ ಬೇರೆಡೆಗೆ ಸೆಳೆದು 1.26 ಲಕ್ಷ ರುಪಾಯಿ ಹಣವನ್ನು ಇಬ್ಬರು ವ್ಯಕ್ತಿಗಳು ವಂಚಿಸಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

Recommended Video

      Amulya Leona handover for the 4 days of police custody | Oneindia Kannada

      ಇದಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇದೀಗ ಹಣ ವಂಚಿಸಿದ ಇರಾನ್ ಮೂಲದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

      ಬಂಧಿತರನ್ನು ಇರಾನ್ ನ ಟೆಹ್ರಾನ್ ಹೋಶಾಂಗ್ ಎಂಬವರ ಪುತ್ರ ಸಯೀದ್ ರೋಸ್ತಾಮಿ (26), ಹಾಗೂ ಎಗ್ಬಾಲ್ಸ್ ಡೇ ಪುತ್ರ ಸೇಬರ್ ಹೊಸೈನ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಬಾಲಕೃಷ್ಣ, ಎಎಸ್ಐ ಆ್ಯಂಟನಿ, ಸಿಬ್ಬಂದಿಗಳಾದ ಸೀನ, ಸೋಮ ಆರಾಧ್ಯ ಪಾಲ್ಗೊಂಡಿದ್ದರು.

      Mysuru Police Arrested 2 Iranian For Fraud In Case

      ಫೆ.8 ರಂದು ಇವರಿಬ್ಬರು ಹುಣಸೂರು ರಸ್ತೆಯಲ್ಲಿರುವ ಹಿನಕಲ್ ನ ಮಾಂಡೋವಿ ಮೋಟಾರ್ಸ್ ನ ಟ್ರೂ ವ್ಯಾಲ್ಯೂ ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಕಾರ್ತಿಕ್ ಎಂಬವವರ ಗಮನ ಬೇರೆಡೆ ಸೆಳೆದು ವಂಚಿಸಿದ್ದರು.

      ವಂಚಕರಿಬ್ಬರು ಕಾರ್ತಿಕ್ ಬಳಿ ಬಂದು 2018 ನೇ ಇಸ್ವಿಯ 2 ಸಾವಿರ ಮುಖಬೇಲೆಯ ನೋಟು ಬೇಕಾಗಿದೆ ಎಂದು ಕೇಳಿದ್ದು, ನೋಟು ಮುದ್ರಣವಾದ ಇಸ್ವಿಯನ್ನು ನೋಡುತ್ತಿದ್ದಾಗ ಅವರ ಗಮನವನ್ನು ಬೇರೆಡೆಗೆ ಸೆಳೆದು ಇವರು 2 ಸಾವಿರ ರೂ. ಮುಖಬೆಲೆಯ ಒಟ್ಟು 63 ನೋಟುಗಳನ್ನು ತೆಗೆದುಕೊಂಡು ಹೋಗಿದ್ದಾರೆ.

      Mysuru Police Arrested 2 Iranian For Fraud In Case

      ಇವರು ಹೋದ ನಂತರ ಮತ್ತೆ ಎಣಿಸಿದಾಗ ನೋಟು ಕಡಿಮೆ ಇರುವುದು ಕಂಡು ಬಂದಿತ್ತು. ಮೇಲ್ನೋಟಕ್ಕೆ ಇರಾನಿ ಪ್ರಜೆಗಳಂತೆ ಕಾಣುತ್ತಿದ್ದರು ಎಂದು ದೂರು ನೀಡುವಾಗ ತಿಳಿಸಿದ್ದರು.

      ಅವರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+