ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಬಿಡಾರ ಹೂಡಿದ ಚೀನಿ ಪ್ರವಾಸಿ; ಆತಂಕದಲ್ಲಿ ಜನ

By Coovercolly Indresh
|
Google Oneindia Kannada News

ಮೈಸೂರು, ಮಾರ್ಚ್ 23: ಕೊರೊನಾ ವೈರಸ್ ಸೋಂಕಿನ ಭೀತಿ ದೇಶದೆಲ್ಲೆಡೆ ಹರಡಿರುವಂತೆಯೇ ಜನರು ವಿದೇಶದಿಂದ ಬಂದಿರುವ ಭಾರತೀಯರನ್ನೇ ಅನುಮಾನದಿಂದ ನೋಡುವಂತಾಗಿದೆ. ಅದರಲ್ಲೂ ವಿದೇಶಿ ನಾಗರಿಕರೆಂದರೆ ಮುಗಿದೇ ಹೋಯ್ತು. ಅವರನ್ನು ಕಾಣುತ್ತಿದ್ದಂತೆ ಆತಂಕ ಶುರುವಾಗಿರುತ್ತದೆ. ಜೊತೆಗೆ ಮೈಸೂರಿನಲ್ಲಿ ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇಲ್ಲಿನ ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

Recommended Video

ಜನರ ನಿರ್ಲಕ್ಷ್ಯಕ್ಕೆ ವೈದ್ಯರು ಏನ್ ಹೇಳಿದ್ದಾರೆ ನೋಡಿ

ಈ ನಡುವೆ ಚೀನೀ ವ್ಯಕ್ತಿಯೊಬ್ಬ ಕಳೆದ ಐದು ದಿನಗಳಿಂದ ಮೈಸೂರಿನಲ್ಲಿ ಕಾಣಿಸಿಕೊಂಡಿದ್ದಾನೆ. ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಚೀನಾ ಮೂಲದ ವ್ಯಕ್ತಿಯನ್ನು ನೋಡಿ ಮೈಸೂರಿನ ಜನರ ಆತಂಕ, ಭಯ ಇನ್ನಷ್ಟು ಹೆಚ್ಚಿದೆ. ಮೈಸೂರಿಗೆ ಬಂದಿರುವ ಈ ಚೀನೀ ವ್ಯಕ್ತಿ ಯಾರು? ಆತ ಇಲ್ಲಿಗೇಕೆ ಬಂದ? ಇನ್ನಷ್ಟು ಮಾಹಿತಿ ಇಲ್ಲಿದೆ...

 ಭಾರತ ಪ್ರವಾಸಕ್ಕೆ ಇಲ್ಲಿಗೆ ಬಂದಿದ್ದ ಚೀನಿ ಪ್ರವಾಸಿ

ಭಾರತ ಪ್ರವಾಸಕ್ಕೆ ಇಲ್ಲಿಗೆ ಬಂದಿದ್ದ ಚೀನಿ ಪ್ರವಾಸಿ

ಮೈಸೂರಿನ ಲಲಿತ ಮಹಲ್‌ ಮೈದಾನದಲ್ಲಿ ಚೀನಿ ಪ್ರವಾಸಿಯೊಬ್ಬ ಕಳೆದ ಐದು ದಿನಗಳಿಂದ ತನ್ನದೇ ಕ್ಯಾರಾವಾನ್ ನಲ್ಲಿ ವಾಸ್ತವ್ಯ ಹೂಡಿದ್ದಾನೆ. ಈ ಚೀನಿ ಪ್ರಜೆಯ ಹೆಸರು ಬ್ಯಾಟ್ರಿಕ್. ತನ್ನ ಭಾರತ ಪ್ರವಾಸದ ಸಲುವಾಗಿ ಬಂದಿರುವ ಈತ ಇದೀಗ ಮೈಸೂರಿಗೆ ಬಂದಿದ್ದಾನೆ. ಆದರೆ ಮೈಸೂರು ನೋಡಲು ಬಂದವನನ್ನು ನೋಡಿ ಜನರು ಆತಂಕಪಡುವಂತಾಗಿದೆ.

ಮೈಸೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಕಟ್ಟೆಚ್ಚರಕ್ಕೆ ಸೂಚನೆಮೈಸೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ; ಕಟ್ಟೆಚ್ಚರಕ್ಕೆ ಸೂಚನೆ

 ಕೊರೊನಾ ಬರುವ ಮುನ್ನವೇ ಬಂದಿದ್ದ ವ್ಯಕ್ತಿ

ಕೊರೊನಾ ಬರುವ ಮುನ್ನವೇ ಬಂದಿದ್ದ ವ್ಯಕ್ತಿ

ಈ ಪ್ರವಾಸಿ ಭಾರತಕ್ಕೆ ಬಂದಿರುವುದು ಕೊರೊನಾ ಸೃಷ್ಟಿಯಾಗುವುದಕ್ಕೂ ಮೊದಲು. ಅಂದರೆ ಕಳೆದ ಡಿಸೆಂಬರ್‌ ನಲ್ಲಿ. ಈತ ದೇಶವನ್ನೆಲ್ಲ ಸುತ್ತಾಡಿಕೊಂಡು ಇದೀಗ ಮೈಸೂರಿಗೆ ಬಂದು ನಗರದ ಹೊರವಲಯದ ಮೈದಾನದಲ್ಲಿ ಬಿಡಾರ ಹೂಡಿದ್ದಾನೆ. 2019ರಲ್ಲೇ ಕರ್ನಾಟಕಕ್ಕೆ ಬಂದಿರುವ ಬ್ಯಾಟ್ರಿಕ್ ಕಳೆದ ಮೂರು ತಿಂಗಳಿನಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾನೆ.

 ಲಲಿತ ಮಹಲ್ ಮೈದಾನದಲ್ಲಿ ಬಿಡಾರ

ಲಲಿತ ಮಹಲ್ ಮೈದಾನದಲ್ಲಿ ಬಿಡಾರ

ಇದೀಗ ಕಳೆದ 5 ದಿನದಿಂದ ಮೈಸೂರಿನ ಗಿರಿದರ್ಶಿನಿ ಬಡಾವಣೆ ಸಮೀಪದಲ್ಲಿ ಲಲಿತಮಹಲ್ ಮೈದಾನದಲ್ಲಿ ವಾಸಿಸುತ್ತಿದ್ದಾನೆ. ನಗರದಲ್ಲಿ ಕೊರೊನಾ ಬಗ್ಗೆ ಆತಂಕ ಹೆಚ್ಚಾಗಿರುವ ಈ ಸಮಯದಲ್ಲೇ ಚೀನೀ ಪ್ರವಾಸಿ ಬಂದು ಬಿಡಾರ ಹೂಡಿರುವುದು ಸಹಜವಾಗಿಯೇ ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

ಎಚ್ಚರ.. ಲಾಕ್ ಡೌನ್ ಉಲ್ಲಂಘಿಸಿದರೆ 2 ವರ್ಷ ಜೈಲು ಗ್ಯಾರಂಟಿಎಚ್ಚರ.. ಲಾಕ್ ಡೌನ್ ಉಲ್ಲಂಘಿಸಿದರೆ 2 ವರ್ಷ ಜೈಲು ಗ್ಯಾರಂಟಿ

"ಕೊರೊನಾ ಬರುವ ಮೊದಲೇ ನಾ ಇಲ್ಲಿಗೆ ಬಂದಿದ್ದೆ"

"ಜನರು ನನ್ನನ್ನು ಅನುಮಾನದಿಂದ ನೋಡ್ತಾರೆ. ಕೊರೊನಾ ಬರುವುದಕ್ಕೂ ಮುನ್ನ ನಾನು ಕರ್ನಾಟಕಕ್ಕೆ ಬಂದಿದ್ದೇನೆ. ಆದರೂ ನನ್ನಿಂದ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ನಗರದಿಂದ ಹೊರಗೆ ಇದ್ದೇ‌ನೆ. ಅಗತ್ಯವಸ್ತು ಖರೀದಿಸಿ ಕ್ಯಾರಾ ವ್ಯಾನ್‌ನಲ್ಲೇ ಜೀವನ ಮಾಡ್ತಿದ್ದೇನೆ" ಎಂದು ಹೇಳುತ್ತಿದ್ದಾನೆ ಈ ಪ್ರವಾಸಿ. ಆದರೆ ಈತನನ್ನು ಕಂಡು ಜನರು ಭಯಪಡುವುದು ಮಾತ್ರ ನಿಂತಿಲ್ಲ.

English summary
People are scared by seeing chinese tourist who is in his caravan near lalitha mahal ground
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X