ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಇಂಗ್ಲಿಷ್ ಅಣಕ, ದೂರು ನೀಡಲು ನಿರ್ಧಾರ

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 6 : ದಸರೆಯ ವೇಳೆ ಖಾಸಗಿ ಇಂಗ್ಲಿಷ್ ಚಾನೆಲ್ ವೊಂದು ಮೈಸೂರು ಮೇಯರ್ ರನ್ನು ಸಂದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಮೇಯರ್ ಗೆ ಇಂಗ್ಲಿಷ್‌ ಬರುವುದಿಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅವಮಾನ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಲು ಮೇಯರ್ ಎಂ.ಜೆ. ರವಿಕುಮಾರ್ ಮುಂದಾಗಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಅ.6 ರಿಂದ 3 ದಿನಗಳ ನಾಟಕೋತ್ಸವಮೈಸೂರಿನ ಕಲಾಮಂದಿರದಲ್ಲಿ ಅ.6 ರಿಂದ 3 ದಿನಗಳ ನಾಟಕೋತ್ಸವ

ದಸರಾ ವೇಳೆ ಟಿವಿ ವರದಿಗಾರರ ಪ್ರಶ್ನೆಗೆ ರವಿಕುಮಾರ್ ಇಂಗ್ಲಿಷ್‌ನಲ್ಲಿ ಉತ್ತರಿಸಿದ್ದರು. ಆ 72 ಸೆಕೆಂಡ್‌ಗಳ ವೀಡಿಯೊ ಟ್ವಿಟ್ಟರ್, ಫೇಸ್‌ಬುಕ್‌, ವಾಟ್ಸಾಪ್ ಗಳಲ್ಲಿ ಹರಿದಾಡಿತ್ತು. ವರದಿಗಾರರ ಪ್ರಶ್ನೆಗಳಿಗೆ ಕನ್ನಡದಲ್ಲೇ ಏಕೆ ಉತ್ತರಿಸಬಾರದಿತ್ತು ಎಂದು ಹಲವರು ಪ್ರಶ್ನಿಸಿದ್ದರು.

Mysuru mayor decides to file a complaint against people who trolled him

'ನಾನೇನೂ ತಪ್ಪು ಮಾಡಿಲ್ಲ, ತಪ್ಪು ಹೇಳಿಲ್ಲ. ಕನ್ನಡ ನನಗೆ ಗೊತ್ತಿದೆ. ಇಂಗ್ಲಿಷ್‌ ಮಾತನಾಡುವ ಪ್ರಯತ್ನ ಮಾಡಿದೆ. ನಾನು ಹೊಸ ಭಾಷೆಯೊಂದನ್ನು ಕಲಿಯುತ್ತಿರುವುದನ್ನು ಇದು ತೋರಿಸುತ್ತಿದೆ. ನನ್ನ ಈ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ, ಅಣಕ ಮಾಡಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಯೋಚಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.

ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್ಕೋಟಿಗಟ್ಟಲೆ ವ್ಯಾಪಾರ, ಈ ಬಾರಿ ಮೈಸೂರು ದಸರಾದಲ್ಲಿ ಬಂಪರ್

ನನಗೆ ಇಂಗ್ಲಿಷ್‌ ಬರುವುದಿಲ್ಲ ಎಂದು ವರದಿಗಾರ್ತಿಗೆ ಹೇಳಿದೆ. ಆದರೂ ಇಂಗ್ಲಿಷ್ ನಲ್ಲೇ ಮಾತನಾಡುವಂತೆ ಎಂದು ಆಕೆ ಒತ್ತಾಯಿಸಿದ್ದಕ್ಕೆ ಮಾತನಾಡಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಈ ವಿಡಿಯೋ ಹಾಕಿ, 'ಮೈಸೂರು ಮೇಯರ್ ನಿಂದ ಇಂಗ್ಲಿಷ್‌ ಕೊಲೆ' ಎಂಬ ಟ್ಯಾಗ್‌ಲೈನ್‌ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಂಗ್ಲಿಷ್‌ ಕಲಿಯಬೇಕೆನ್ನುವ ನನ್ನ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಗರದಲ್ಲಿ ನಾನು ಮಾಡಿರುವ ಒಳ್ಳೆಯ ಕೆಲಸಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಏಕೆ ಪೋಸ್ಟ್‌ ಮಾಡುವುದಿಲ್ಲ ಎಂದು ರವಿ ಕುಮಾರ್‌ ಪ್ರಶ್ನಿಸಿದ್ದಾರೆ.

English summary
Mysuru mayor Ravi Kumar answered to an English channel reporter in English. That conversation trolled in social media. So, Ravi Kumar has decided to file a case against them, who trolled him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X