ಮೈಸೂರಿನ ಗೃಹಿಣಿ ನಿಖಿತಾ ರಾಯಚೂರಲ್ಲಿ ಪತ್ತೆ, ಇದು ಕರುಣಾಜನಕ ಕಥೆ
ಮೈಸೂರು, ಸೆಪ್ಟೆಂಬರ್ 5: ತಾಯಿಗೆ ವಿಡಿಯೋ ಕಾಲ್ ಮಾಡಿ, ಗಂಡನ ಕಿರುಕುಳದ ಬಗ್ಗೆ ಹೇಳಿದ್ದ ಮೈಸೂರು ಮೂಲದ ನಿಖಿತಾ ರಾಯಚೂರಿನಲ್ಲಿ ಪತ್ತೆಯಾಗಿದ್ದಾರೆ. ಪತಿ ಹಾಗೂ ಪತಿಯ ಮನೆ ಕಡೆಯವರು ಚಿತ್ರ ಹಿಂಸೆ ನೀಡುತ್ತಿದ್ದದ್ದು, ತಂದೆಯಿಂದಲೇ ಲೈಂಗಿಕ ಕಿರುಕುಳ ಯತ್ನ ನಡೆಯುತ್ತಿದ್ದರಿಂದ ಬೇಸತ್ತು ಹೊರ ಬಂದಿರುವುದಾಗಿ ನಿಖಿತಾ ಹೇಳಿದ್ದಾರೆ.
ಸಾಯುವ ನಿರ್ಧಾರದೊಂದಿಗೆ ಮಗುವಿನೊಂದಿಗೆ ಮನೆಯಿಂದ ಹೊರಬಂದ ನಿಖಿತಾ, ರಾಯಚೂರಿನ ಫೇಸ್ ಬುಕ್ ಸ್ನೇಹಿತ ಶಶಿಕಾಂತ್ ಸಹಾಯದಿಂದ ಆಶ್ರಮ ಸೇರಲು ಮುಂದಾಗಿದ್ದರು.

ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ಮತ್ತು ಪದೇ ಪದೇ ಅನುಮಾನಿಸುತ್ತಿದ್ದರು. ಕುಡಿದು ಬಂದು ಸಿಗರೇಟ್ ನಿಂದ ಮೈಯಲ್ಲ ಸುಡುತ್ತಿದ್ದರು. ಊಟದಲ್ಲಿ ಫಿನಾಯಿಲ್ ಹಾಕಿ ತಿನ್ನಲು ಒತ್ತಾಯಿಸುತ್ತಿದ್ದರು ಎಂದು ನಿಖಿತಾ ಆರೋಪಿಸಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಲಿಖಿತಾ ಅವರು ರಾಯಚೂರಿನ ಆಶ್ರಮಕ್ಕೆ ಸೇರಲೆಂದು ತೆರಳಿದ್ದರು.
ಲಿಖಿತಾ ವಿಡಿಯೋ ರೆಕಾರ್ಡ್ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗಿದ್ದು, ಸುದ್ದಿಯನ್ನು ನೋಡಿದ ಆಶ್ರಮನಿವಾಸಿಗಳು ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಜಯನಗರ ಠಾಣೆ ಪೊಲೀಸರಿಗೆ ಈ ಕುರಿತು ಮಾಹಿತಿ ಸಿಕ್ಕಿದ್ದು, ಕರೆತರಲು ತೆರಳಿದ್ದಾರೆ. ಇದರಿಂದ ಪ್ರಕರಣ ಸುಖಾಂತ್ಯಗೊಂಡಿದೆ
==
ಕುಡಿದು ಬಂದು ಬಾಡಿಗೆದಾರನ ಮೇಲೆ ಗುಂಡು ಹಾರಿಸಿದ ಮಾಲೀಕ
ಕುಡಿದು ಗಲಾಟೆ ಮಾಡಿ, ಹಲ್ಲೆ ಮಾಡಿದ್ದಕ್ಕೆ ಮನೆ ಮಾಲೀಕ ಗುಂಡು ಹಾರಿಸಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕವಾಡಗೇರಿ ಬೀದಿಯಲ್ಲಿ ನಡೆದಿದೆ.
ಬಾಡಿಗೆದಾರ ವಿಜಯ್ ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದದ್ದನ್ನು ಮನೆ ಮಾಲೀಕ ಪ್ರಶ್ನಿಸಿದ್ದಕ್ಕೆ ಹರೀಶ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಹರೀಶ್ ಮನೆಯಲ್ಲಿದ್ದ ನಾಡ ಬಂದೂಕು ತಂದು ವಿಜಯ್ ಮೇಲೆ ಗುಂಡು ಹಾರಿಸಿದ್ದಾನೆ.
ಈ ಸಂದರ್ಭದಲ್ಲಿ ಮನೆ ಬಾಗಿಲಿಗೆ ಗುಂಡು ತಗುಲಿದ ಪರಿಣಾಮ ವಿಜಯ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications