• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್​ ಕಟ್ಟಿಸಿಲ್ಲ, ಅಂಥದ್ದರಲ್ಲಿ...

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 5: ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್​ ಕಟ್ಟಿಸಿರಲಿಲ್ಲ. ಹೀಗಿರುವಾಗ ಈ ಸಮಯದಲ್ಲಿ ಸರ್ಕಾರಿ ನಿವಾಸದಲ್ಲಿ ಈಜುಕೊಳ ಬೇಕಿತ್ತಾ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ವಾಗ್ದಾಳಿ ನಡೆಸಿದರು.

   ಮೈಸೂರು: ಐಎಎಸ್‌ ಅಧಿಕಾರಿಗಳ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಡಾ.ಬಗಾದಿ ಗೌತಮ್ ನೇಮಕ

   ಮೈಸೂರಿನಲ್ಲಿ ಮಾತಾಡಿದ ಮಾಜಿ ಸಚಿವ ಎ.ಮಂಜು, ಸರ್ಕಾರಿ ಅಧಿಕಾರಿಗಳು ಒಂದೇ ಕಡೆ ಇರುತ್ತಾರಾ? ಬೇರೆಡೆ ವರ್ಗಾವಣೆ ಆಗಿ ಹೋಗುತ್ತಾರೆ. ಇದು ಗುತ್ತಿಗೆದಾರನಿಗಾಗಿ ಮಾಡಿರುವ ಕೆಲಸವಷ್ಟೇ? ಇವತ್ತು ದನ ಕಾಯುವವರೂ ಐಎಎಸ್ ಮಾಡುತ್ತಾರೆ. ನಂತರ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ದನ ಕಾಯೋರು, ಅಡ್ಜಸ್ಟ್​ಮೆಂಟ್ ಮಾಡಿಕೊಳ್ಳುವವರು ಸಹ ಐಎಎಸ್ ಪಾಸ್ ಮಾಡುತ್ತಾರೆ ಅಂತ ಕಿಡಿಕಾರಿದರು.

   Breaking: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ವಾಪಸ್Breaking: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ವಾಪಸ್

   ಜಿಲ್ಲಾಧಿಕಾರಿ ಆಗಿದ್ದವರು ಜನಸೇವೆ ಹೇಗೆ ಮಾಡುತ್ತೇವೆ ಅನ್ನುವುದು ಮುಖ್ಯ. ದುರಹಂಕಾರದಿಂದ ವರ್ತಿಸುವುದು ತಪ್ಪು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮನೆಗೆ ಶಿಕ್ಷಕರು ಬಂದು ಅವರ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎಂದು ಸಚಿವ ಎ.ಮಂಜು ಆರೋಪಿಸಿದರು.

   ಮೈಸೂರು ಡಿಸಿ ರೋಹಿಣಿ ಸಿಂಧೂರಿ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಡಿಸಿಗೆ ಒಂದು ರೂಲ್ಸ್​, ಸಾಮಾನ್ಯ ಜನರಿಗೆ ಒಂದು ರೂಲ್ಸಾ? ಜನಸಾಮಾನ್ಯರ ಮಕ್ಕಳಿಗೆ ಆನ್​ಲೈನ್​ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಡಿಸಿ ಮಕ್ಕಳಿಗೆ ಮನೆಗೆ ಬಂದು ಶಿಕ್ಷಕರಿಂದ ಪಾಠ ಪ್ರವಚನ ನಡೆಸಲಾಗುತ್ತಿದೆ. ಈ ಇಬ್ಬಗೆ ನೀತಿಯನ್ನು ಕೇಳೋರು ಯಾರು ಎಂದು ಪ್ರಶ್ನಿಸಿದರು.

   English summary
   Former minister A Manju questions about Swmming Pool built in Mysuru District Collector Rohini Sindhuri Govt Residence.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion