ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಂಗ್ಯೂ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಶೇಷ ಸಭೆ

By Yashaswini
|
Google Oneindia Kannada News

ಮೈಸೂರು, ಜೂನ್ 21: ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಮಹಾಮಾರಿ ಹಿನ್ನೆಲೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ವಿಷಯ ಸಭೆ ಆಯೋಜಿಸಲಾಗಿತ್ತು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಏರ್ಪಡಿಸಿದ ಸಭೆಯಲ್ಲಿ ಡಾ.ಚಿದಂಬರ ಮಾತನಾಡಿ ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಹೀಗೆ ಕಾಲಕ್ಕೆ ತಕ್ಕಂತೆ ಜನರಿಗೆ ರೋಗ ಹರಡುತ್ತದೆ.

Mysuru district in-charge minister Mahadevappa chairs meeting regarding dengue

ಹಾಗೆಯೇ ಡೆಂಗ್ಯೂ ಜ್ವರ ಪ್ರಕರಣ ಮೈಸೂರಲ್ಲಿ ಹೆಚ್ಚಾಗುತ್ತಿದೆ. ಪ್ರತಿ ಪ್ರಕರಣವನ್ನು ನಾವು ಡೆಂಗ್ಯೂ ಎಂದು ಪರಿಗಣಿಸಲಾಗುವುದಿಲ್ಲ. ವಿದ್ಯಾವಂತರು ಇರುವ ಅಂದರೆ ಸರಸ್ವತಿಪುರಂ, ಕುವೆಂಪುನಗರ, ಹೆಬ್ಬಾಳ್ ಪ್ರದೇಶದಲ್ಲಿಯೇ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ. ಶುದ್ದ ನೀರು ಹಾಗೂ ಸೊಳ್ಳೆ ಮೊಟ್ಟೆ ಇಟ್ಟಿರುವ ನೀರನ್ನು ಶೇಖರಿಸಿರುವುದನ್ನು ಸಚಿವರಿಗೆ ತೋರಿಸಿ ಡೆಂಗ್ಯೂ ಹರಡುವ ಪರಿಯನ್ನು ವಿವರಿಸಿದರು. ಎಂದು ತಿಳಿಸಿದರು. ಡೆಂಗ್ಯೂ ಹರಡದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ನಂತರ ಉಸ್ತುವಾರಿ ಸಚಿವರು ಮಾತನಾಡಿ ಡೆಂಗ್ಯೂ ಹೇಗೆ ಹರಡುತ್ತದೆ, ಸೊಳ್ಳೆ ಸಂತತಿಯನ್ನು ಹೇಗೆ ಅಭಿವೃದ್ಧಿ ಪಡಿಸುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದು ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚಿಸಿದರು. ಜನರು ಜ್ವರ ಬಂತೆಂದರೆ ಡೆಂಗ್ಯೂ ಎಂದು ಪರಿಗಣಿಸುತ್ತಿದ್ದಾರೆ.

ವೈದ್ಯರಲ್ಲಿಗೆ ತೆರಳಿ ಪರೀಕ್ಷಿಸಿಕೊಂಡು ನಿಜಾಂಶ ತಿಳಿದುಕೊಳ್ಳಿ ಎಂದರು. ಜಿಲ್ಲಾಡಳಿತ, ಪಾಲಿಕೆಗಳು ಒಗ್ಗೂಡಿ ಸಭೆ, ಅರಿವು ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

English summary
District in-charge Minister Dr. H C Mahadevappa chaired a meeting on dengue at government guest house, Nazarbad on Wednesday (June 21, 2017) in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X