ದಸರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ಅರ್ಜಿ ಸಲ್ಲಿಸಿ
ಮೈಸೂರು, ಆಗಸ್ಟ್ 30: ಮೈಸೂರು ದಸರಾ ಮಹೋತ್ಸವ 2017ರ ಅಂಗವಾಗಿ ಸೆಪ್ಟೆಂಬರ್ 21 ರಿಂದ 29 ರವರೆಗೆ ದಸರಾ ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ಮೈಸೂರಿನ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಶಾಸ್ತ್ರೀಯ ಸಂಗೀತ ಹಾಗೂ ವಿವಿಧ ಸಂಗೀತ ಕಲಾಪ್ರಕಾರಗಳು (ಹಿಂದೂಸ್ತಾನಿ, ಸುಗಮ, ಜಾನಪದ, ವಾದ್ಯಸಂಗೀತ ಹಾಗೂ ಇನ್ನಿತರ), ಶಾಸ್ತ್ರೀಯ ನೃತ್ಯ ಪ್ರಕಾರಗಳು, ನೃತ್ಯ ರೂಪಕ ಹಾಗೂ ನೃತ್ಯದ ವಿವಿಧ ಕಲಾಪ್ರಕಾರಗಳು, ಜಾನಪದ ನೃತ್ಯ ಕಲಾಪ್ರಕಾರಗಳು, ಹರಿಕಥೆ, ಗಮಕ, ಸಾಮಾಜಿಕ, ಪೌರಾಣಿಕ, ಹಾಸ್ಯ ನಾಟಕಗಳು, ಯಕ್ಷಗಾನ, ತಾಳಮದ್ದಳೆ, ಸೂತ್ರದಗೊಂಬೆ, ತೊಗಲುಗೊಂಬೆ ಕಲಾಪ್ರಕಾರಗಳಲ್ಲಿ ಅನುಭವವಿರುವ ಕಲಾವಿದರುಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಸೆಪ್ಟೆಂಬರ್ 2 ರಂದು ಸಂಜೆ 5 ಗಂಟೆಯೊಳಗೆ ಸ್ವವಿವರವುಳ್ಳ ಅರ್ಜಿ ದಾಖಲೆಗಳನ್ನು ಕಾರ್ಯದರ್ಶಿ ಹಾಗೂ ಸಹಾಯಕ ನಿರ್ದೇಶಕರು, ಸಾಂಸ್ಕೃತಿಕ ಉಪಸಮಿತಿ, ದಸರಾ ಮಹೋತ್ಸವ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಕಲಾಮಂದಿರ, ಮೈಸೂರು ಇಲ್ಲಿ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸುವುದು.
ಆಹಾರ ಮೇಳದಲ್ಲೂ ಕಾರ್ಯಕ್ರಮ ನೀಡಲು ಅವಕಾಶ
ವಿಶ್ವ ವಿಖ್ಯಾತ ದಸರಾ ಮಹೋತ್ಸವ 2017ರ ಅಂಗವಾಗಿ ನಡೆಯುವ ಜನಪ್ರಿಯ ಆಹಾರ ಮೇಳಕ್ಕೆ ಆಗಮಿಸುವ ಭೋಜನ ಪ್ರಿಯರಿಗಾಗಿ ಪ್ರತಿ ದಿನ ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ಜಾನಪದ ಕಲೆಗಳು, ಸಂಗೀತ, ಆರ್ಕೆಸ್ಟ್ರಾಗಳು, ಫ್ಯೂಜನ್ ಬ್ಯಾಂಡ್‍ಗಳು, ಶಾಸ್ತ್ರೀಯ ನೃತ್ಯ, ನೃತ್ಯರೂಪಕ, ಸಮಕಾಲಿನ ನೃತ್ಯಗಳು, ಯಕ್ಷಗಾನ ಮತ್ತು ಮ್ಯಾಜಿಕ್, ಘಝಲ್, ಖವಾಲಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ, ಕಾಲೇಜುಗಳೂ ಸಹ ಭಾಗವಹಿಸಬಹುದು. ಅರ್ಹ ಕಲಾವಿದರುಗಳು ತಮ್ಮ ಕಲಾಪ್ರತಿಭೆ ಮತ್ತು ಅನುಭವಗಳ ವಿವರಗಳೊಂದಿಗೆ ಮನವಿಯನ್ನು ಸೆಪ್ಟೆಂಬರ್ 5 ರೊಳಗೆ ನೇರವಾಗಿ/ ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಕಾರ್ಯಾಧ್ಯಕ್ಷರು, ಆಹಾರ ಮೇಳ, ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು ದೂರವಾಣಿ ಸಂಖ್ಯೆ 0821-2422107, ಮೊಬೈಲ್ ಸಂಖ್ಯೆ 9611165967, ಹೆಚ್.ಕೆ. ರಾಮು, ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ, ಮೈಸೂರು ನಗರ ಮೊಬೈಲ್ ಸಂಖ್ಯೆ 9448051793 ನ್ನು ಸಂಪರ್ಕಿಸಬಹುದು












Click it and Unblock the Notifications