• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್ನು ವಿಳಂಬವಾಗಲಿದೆ ದಸರಾ ಉನ್ನತಮಟ್ಟದ ಸಭೆ

|

ಮೈಸೂರು, ಆಗಸ್ಟ್ 8 : ಇದೇ ಸೆಪ್ಟೆಂಬರ್ ನಲ್ಲಿ ನಡೆಯಬೇಕಿದ್ದ ದಸರೆಗೆ ಯಾವುದೇ ಪೂರ್ವತಯಾರಿ ಇನ್ನೂ ಆರಂಭಗೊಂಡಿಲ್ಲ.

ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾದ ಕಾರಣ ಜೊತೆಗೆ ಕೆಲವೆಡೆ ನೆರೆ ಬಂದಿರುವ ಪರಿಣಾಮ ಇಂದು ನಡೆಯಬೇಕಿದ್ದ ದಸರಾ ಉನ್ನತಾಧಿಕಾರ ಸಮಿತಿ ಸಭೆಯನ್ನು ಮುಂದೂಡಲಾಗಿದೆ.

ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಮೂರು ದಿನಗಳ ಕಾಲ ಮಳೆ ಮತ್ತು ಪ್ರವಾಹ ಸಂತ್ರಸ್ತ ಜಿಲ್ಲೆಗಳಾದ ಬೆಳಗಾವಿ ಮಾತು ಬಾಗಲಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಹಾಗಿ ನಿಗದಿಯಾಗಿದ್ದ ದಸರಾ ಉನ್ನತಾಧಿಕಾರ ಸಮಿತಿ ಸಭೆಯನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ವಿಶೇಷ ಕರ್ತವ್ಯ ಅಧಿಕಾರಿ ಚನ್ನಬಸವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ ಮಳೆಯ ಪರಿಣಾಮ ಈ ಬಾರಿ ದಸರಾ ವಿಜೃಂಭಣೆಯಿಂದ ನಡೆಸಲು ಮುಂದಾಗುವುದಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದು, ದಿನೇ - ದಿನೇ ದಸರೆಯ ಪೂರ್ವ ತಯಾರಿಗೆ ನಡೆಯಬೇಕಿದ್ದ ಉನ್ನತ ಮಟ್ಟದ ಸಭೆಯು ಸಂಪನ್ನಗೊಳ್ಳದೆ ಈ ಬಾರಿಯ ದಸರಾ ಕಳೆಗುಂದಿದಂತೆ ಭಾಸವಾಗುತ್ತಿದೆ.

English summary
Mysuru Dasara high-level meeting will be getting delayed. Today’s meeting also postponed due to rainfall in Kanataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X