ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ 2015 : ಶುಕ್ರವಾರ ಗಜಪಡೆ ಆಗಮನ

|
Google Oneindia Kannada News

ಮೈಸೂರು, ಸೆಪ್ಟೆಂಬರ್, 03 : ಬರದ ಛಾಯೆ ನಡುವೆಯೇ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಆರು ಆನೆಗಳ ಮೊದಲ ತಂಡ ಶುಕ್ರವಾರ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿವೆ.

ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ಕಾವೇರಿ, ಚೈತ್ರ ಮತ್ತು ವಿಕ್ರಮ ಆನೆಗಳು ಶುಕ್ರವಾರ ಬೇರೆ-ಬೇರೆ ಶಿಬಿರಗಳಿಂದ ಮೈಸೂರಿಗೆ ಆಗಮಿಸಲಿವೆ. ಮೈಸೂರಿನ ಅರಣ್ಯ ಭವನದಲ್ಲಿ ಆನೆಗಳನ್ನು ಸ್ವಾಗತಿಸಲಾಗುತ್ತದೆ. [ದಸರಾ ಆನೆಗಳ ಪಟ್ಟಿ ಫೈನಲ್]

elephants

ಸೆಪ್ಟೆಂಬರ್ ಅಂತ್ಯದ ವೇಳೆಗೆ ಹರ್ಷ, ಗೋಪಿ, ಪ್ರಶಾಂತ, ದುರ್ಗಾ ಪರಮೇಶ್ವರಿ, ಗೋಪಾಲಸ್ವಾಮಿ ಆನೆಗಳು ಮೈಸೂರಿಗೆ ಆಗಮಿಸಲಿವೆ. 21 ವರ್ಷದ ಕೆಂಚಾಂಬಾ ಆನೆ ಮೊದಲ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಹಾಸನದ ಆಲೂರು ಬಳಿ ಇದನ್ನು ಸೆರೆ ಹಿಡಿಯಲಾಗಿತ್ತು. [ದಸರಾ ಆನೆಗಳ ಪರಿಚಯ]

ಬಲರಾಮನಿಗೆ ಹೊಸ ಜವಾಬ್ದಾರಿ : ಈ ಬಾರಿಯ ದಸರಾದಲ್ಲಿ ಬಲರಾಮನಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. 13 ಬಾರಿ ಅಂಬಾರಿ ಹೊತ್ತು ಅನುಭವವಿರುವ ಬಲರಾಮ ಈ ಬಾರಿ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಪಟ್ಟದ ಆನೆ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಗಜೇಂದ್ರ ಕೆಲವು ತಿಂಗಳ ಹಿಂದೆ ಕಾವಾಡಿಯನ್ನು ಕೊಂದು ಹಾಕಿದ್ದು, ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕೊಡಗು ಮತ್ತು ಚಾಮರಾಜನಗರದ ವಿವಿಧ ಶಿಬಿರಗಳಲ್ಲಿರುವ ಆನೆಗಳನ್ನು ಶುಕ್ರವಾರ ಬೆಳಗ್ಗೆ ಅಲ್ಲಿಂದ ಹೊರಡಲಿವೆ. ಲಾರಿಯ ಮೂಲಕ ಮೈಸೂರಿಗೆ ಆಗಮಿಸುವ ಆನೆಗಳನ್ನು ಅರಣ್ಯ ಭವನದಲ್ಲಿ ಸ್ವಾಗತಿಸಲಾಗುತ್ತದೆ. [ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]

ಅಂದಹಾಗೆ ಅಕ್ಟೋಬರ್ 14ರಿಂದ ದಸರಾ ಆಚರಣೆಗಳು ಆರಂಭವಾಗಲಿದ್ದು, ಅಕ್ಟೋಬರ್ 23ರ ಶುಕ್ರವಾರ ವಿಜಯದಶಮಿ ಇದೆ. ಅಂದೇ ಜಂಬೂ ಸವಾರಿ ನಡೆಯುತ್ತಿದೆ. ರಾಜ್ಯದಲ್ಲಿನ ಬರ ಮತ್ತು ರೈತ ಆತ್ಮಹತ್ಯೆ ಹಿನ್ನಲೆಯಲ್ಲಿ ಸರಳವಾಗಿ ಈ ಬಾರಿಯ ದಸರಾವನ್ನು ಆಚರಣೆ ಮಾಡಲಾಗುತ್ತದೆ.

English summary
Mysuru Dasara 2015 : The first batch of 6 elephants slated to participate in Nada Habba Mysuru Dasara, will arrive to Mysuru city on September 4. Dasara will be held in October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X